Friday, September 22, 2023

ಸಿಗರೇಟ್ ಹಣ ಕೇಳಿದ್ದಕ್ಕೆ ಪಾನ್ ಅಂಗಡಿ ಮಾಲೀಕನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಸಿಗರೇಟ್‌ದ ಹಣದ ಕೇಳಿದಕ್ಕಾಗಿ ದುಷ್ಕರ್ಮಿಗಳು ಪಾನ್ ಅಂಗಡಿಯವನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ಬೇಗುಸರಾಯ್​ ನಗರದ ಲೋಹಿಯಾನಗರ ಗುಮ್ಟಿ ಪ್ರದೇಶದ ಬಳಿ ನಡೆದಿದೆ.

ಸಹರ್ಸಾ ಜಿಲ್ಲೆಯ ಬರಿಯಾರ್ಪುರ್ ನಯಾ ತೋಲಾ ನಿವಾಸಿ ಅಂಗಡಿಯ ದಿಲ್ಖುಷ್ ಕುಮಾರ್(31) ಮೃತ ವ್ಯಕ್ತಿ. ಗಾಂಜಾ ಮಾರಾಟದ ವಿಚಾರವಾಗಿ ನಡೆದಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗುತ್ತಿದೆ.

ಗುಂಡು ಹಾರಿಸಿದವನು ಆಗಾಗ್ಗೆ ದಿಲ್ಖುಷ್ ಅಂಗಡಿಗೆ ಬರುತ್ತಿದ್ದ. ಇಂದೂ ಕೂಡ ಕೆಲವರ ಜತೆ ಅಂಗಡಿಗೆ ಬಂದಿದ್ದನು.ಮೂರ್ನಾಲ್ಕು ಯುವಕರು ಬಂದು ಸಿಗರೇಟ್ ಸೇದಲು ಆರಂಭಿಸಿದ್ದಾರೆ. ದಿಲ್ಖುಷ್ ಹಣ ಕೇಳಿದಾಗ ಎದೆಗೆ ಗುಂಡು ಹಾರಿಸಿ ಕೈ ಬೀಸಿ ಓಡಿ ಹೋಗಿದ್ದಾರೆ. ಅದೇನು ಮಾಮೂಲಿ ಜಗಳ ಇರಬಹುದೆಂದು ಉಹಿಸಿದ್ದೆವು.

ಜಗಳ ವಿಕೋಪಕ್ಕೆ ತಿರುಗಿ ದುಷ್ಕರ್ಮಿಗಳು ದಿಲ್​ಖುಷ್​​ನ್ನು ಗುಂಡಿಕ್ಕಿ ಕೊಂದರು. ಈ ಕೊಲೆ ಘಟನೆ ಬಳಿಕ ಚೌಕದಲ್ಲಿ ಅವ್ಯವಸ್ಥೆ ಉಂಟಾಯಿತು. ಜನರು ಅಲ್ಲಿ-ಇಲ್ಲಿ ಓಡಲು ಪ್ರಾರಂಭಿಸಿದರು. ಮತ್ತೊಂದೆಡೆ ದುಷ್ಕರ್ಮಿಗಳೆಲ್ಲ ಆಯುಧಗಳನ್ನು ಬೀಸುತ್ತ ಓಡಿಹೋದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕಾಗಮಿಸಿದ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಾನ್ ಅಂಗಡಿ ವ್ಯಾಪಾರಿಯು ಗಾಂಜಾ ತುಂಬಿದ ಸಿಗರೇಟುಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದನು ಎಂದು ಬೇಗುಸರಾಯ್ ನಗರ ಪೊಲೀಸರು ತಿಳಿಸಿದ್ದಾರೆ.

RELATED ARTICLES

ಪ್ರೇಮಿಗಳಿಗೆ ರೂಂ ಕೊಟ್ಟು ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‍ಮೇಲ್ ; ಇಬ್ಬರು ಅಂದರ್..!

ವಿವೇಕವಾರ್ತೆ : ಬೆಂಗಳೂರಿನ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿರುವ ಹೋಟೆಲ್​ನಲ್ಲಿ ಪ್ರೇಮಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಗೋಕಾಕ : ಗುರುವಾರ ಮಧ್ಯರಾತ್ರಿ ಅಮವಾಸ್ಯೆ ಹಿನ್ನೆಲೆ ಮನೆ...

ಗನ್​ ತೋರಿಸಿ ಮಹಿಳಾ ಕಾನ್ಸ್​ಟೇಬಲ್​​​ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ : ಪ್ರಕರಣ ದಾಖಲು

ವಿವೇಕವಾರ್ತೆ : ಮಹಿಳಾ ಪೊಲೀಸ್​ ಪೇದೆ ಮೇಲೆ ಸಹೋದ್ಯೋಗಿಯೇ ಹಲವು ಬಾರಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಲ್ಲಿನ ಸ್ವರ್ಗೇಟ್​ ಪೊಲೀಸ್​ ಕಾಲೋನಿಯನ್ನು ಗನ್​ನಿಂದ ಬೆದರಿಸಿ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​​​​​...

ಬೆಂಗಳೂರಲ್ಲಿ ‘ಕಾಮುಕ ಟೆಕ್ಕಿ’ ಅಂದರ್ : ಚೆಂದ ಚೆಂದದ ಆಂಟಿಯರೇ ಈತನ ಟಾರ್ಗೆಟ್.!

ವಿವೇಕವಾರ್ತೆ : ಬೆಂಗಳೂರಿನಲ್ಲೊಬ್ಬ ಕಾಮುಕ ಟೆಕ್ಕಿ ಪೊಲೀಸರ ಬಲೆಗೆ ಬಿದ್ದಿದ್ದು, ಈತನ ಕಥೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ.ಚೆಂದ ಚೆಂದದ ಫೋಟೋ ಹಾಕುವ ಆಂಟಿಯರಿಗೆ ರಿಕ್ವೆಸ್ಟ್ ಕಳುಹಿಸುತ್ತಿದ್ದ ಕಾಮುಕ ಫೈಜಲ್ ಎಂಬಾತನನ್ನು ಪೊಲೀಸರು...
- Advertisment -

Most Popular

ಮೊದಲ ರಾತ್ರಿ ಪತ್ನಿಯ ಮದುವೆ ಸೀರೆಗೆ ಕೊರಳೊಡ್ಡಿದ ಯುವಕ.? ಸಾವು ನಿಗೂಢ.!

ವಿವೇಕ ವಾರ್ತೆ : ಮದುವೆಯಾದ ಎರಡೇ ದಿನದಲ್ಲಿ ಯುವಕನೊಬ್ಬ ಪತ್ನಿಯ ಮದುವೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನ ಚೆಂಗಲ್ಪಟ್ಟು ಏರಿಯಾದಲ್ಲಿ ನಡೆದಿದೆ. ಮೃತ ವ್ಯಕ್ತಿ ಸರವಣನ್​ ಎಂದು ವರದಿಯಾಗಿದೆ. ಈತ...

ಮಾಡದ ತಪ್ಪಿಗೆ ಠಾಣೆಗೆ ಕರೆಸಿ ಥಳಿಸಿದ್ದ ಪೊಲೀಸರು ; ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ.!

ವಿವೇಕವಾರ್ತೆ : ಪೊಲೀಸರ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್‌ ಬರೆದಿಟ್ಟು ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ತಲಘಟ್ಟಪುರದ ನಿವಾಸಿ ನಾಗರಾಜ್(47) ಎನ್ನಲಾಗಿದೆ. ‘ವೈಯಾಲಿಕಾವಲ್‌ ಠಾಣೆ...

ಮನೆಯಲ್ಲಿದ್ದ 6 ಜನರನ್ನು ಕಟ್ಟಿ ಹಾಕಿ ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ..!

ವಿವೇಕ ವಾಣಿ : ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ ಉಲ್ಲಾಸ್ ದೊಡ್ಮನಿ ಎಂಬುವರ ಮನೆಯಲ್ಲಿ ಬಹುದೊಡ್ಡ ಕಳ್ಳತನ ನಡೆಸಲಾಗಿದೆ. ಅವರ ಮನೆಯ ಕಿಟಕಿಯ ಕಬ್ಬಿಣದ ಗ್ರಿಲ್ ಕಟ್ ಮಾಡಿದ ಕಳ್ಳರು ಮನೆಯೊಳಗೆ...

ಬೆಳಗಾವಿ : 4 ತಿಂಗಳ ಮಗುವನ್ನು ನೆಲಕ್ಕೆಸೆದು ಕೊಂದ ಪೊಲೀಸ್ ಕಾನ್ಸ್‌ಟೇಬಲ್ ಅಂದರ್.!

ವಿವೇಕ ವಾರ್ತೆ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬ, ನಾಲ್ಕು ತಿಂಗಳ ತನ್ನ ಮಗುವನ್ನು ನೆಲಕ್ಕೆ ಎಸೆದು ಕೊಲೆ ಮಾಡಿದ ಘಟನೆ ನಡೆದಿದ್ದು, ಪರಾರಿಯಾಗಿದ್ದ ಆರೋಪಿಯನ್ನು...
error: Content is protected !!