ವಿವೇಕವಾರ್ತೆ: ಆನ್‌ಲೈನ್ ವಂಚನೆ ಎಂಬುದು ಈಗೀಗ ಇನ್ನಷ್ಟು ವ್ಯಾಪಕವಾಗುತ್ತಿದೆ. ಅಮಾಯಕರನ್ನು ಕ್ಷಣಾರ್ಧದಲ್ಲಿ ವಂಚಿಸುವ ಮತ್ತು ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಹಣ ಕದಿಯುವ ಚೋರರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಆನ್‌ಲೈನ್ ವಂಚನೆಯಿಂದ ಹಣ ಕಳೆದುಕೊಳ್ಳುವವರ ಸಂಖ್ಯೆ ಅಧಿಕವಾಗುತ್ತಲೇ ಇದೆ ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ,ದಯಾನಂದ ಸುದ್ದಿಗೋಷ್ಠಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸೈಬರ್ ಕ್ರೈಂ ಕೇಸ್ ಗಳ ಬಗ್ಗೆ ಗಮನವಹಿಸಲಾಗ್ತಿದೆ.. ನಾನಾ ಪೊಲೀಸ್ ಠಾಣೆಗಳಲ್ಲಿ ಸೈಬರ್ ವಂಚನೆಗಳ ಬಗ್ಗೆ ದೂರು ಬರ್ತಿವೆ.. ದಿನದಿಂದ ದಿನಕ್ಕೆ ದೂರುಗಳು ಹೆಚ್ಚಾಗ್ತಿವೆ.. ಅದರ ಹಿನ್ನೆಲೆ ಸಾಮಾಜಿಕ ಜಾಲತಾಣ ಸೇರಿ ಬೇರೆ ಬೇರೆ ವೇದಿಕೆ ಮೂಲಕ ಜಾಗೃತಿ ಮೂಡಿಸಲಾಗ್ತಿದೆ..18ಬೇರೆ ಬೇರೆ ರೀತಿಯ ಪ್ಯಾಟರ್ನ್ ಇಂದ ಸೈಬರ್ ವಂಚನೆ ಮಾಡಲಾಗಿದೆ..ಈ ವರ್ಷದಲ್ಲಿ 12ಸಾವಿರದ 615 ಕೇಸ್ ಗಳು ದಾಖಲಾಗಿದ್ವು..
470ಕೋಟಿಯಷ್ಟು ಹಣ ವಂಚನೆ ಮಾಡಲಾಗಿದೆ. ಅದ್ರಲಿ 201ಕೋಟಿ ಹಣ ಆರೋಪಿಗಳ ಅಕೌಂಟ್ ನಲ್ಲಿ ಸೀಜ್ ಮಾಡಲಾಗಿದೆ. 227ಕೋಟಿ ಹಣ ವಾಪಸ್ ಕೊಡಿಸಲಾಗಿದೆ ಜಾಬ್ ಆಫರ್ ನೀಡಿ ಹಣ ವಂಚನೆ ಮಾಡ್ತಿರೋದು ಹೆಚ್ಚಾಗಿ ಕಂಡುಬರ್ತಿದೆ ಆಧಾರ್ ಬಯೋಮೆಟ್ರಿಕ್ ಬಳಸಿಯೂ ವಂಚನೆ ಮಾಡಲಾಗ್ತಿದೆ ಸಾರ್ವಜನಿಕರು ಆಧಾರ್ ವಿಚಾರವಾಗಿ ಗಮನವಹಿಸಬೇಕು..
ಸೈಬರ್ ಕ್ರೈಂ ತಡೆಯೋ ಪ್ರಯತ್ನ ನಡೀತಿದೆ ಸಾರ್ವಜನಿಕರು ಕೂಡ ಸೈಬರ್ ಕ್ರೈಂ ಬಗ್ಗೆ ಎಚ್ಚರದಿಂದ ಇರಬೇಕು ಮಾಹಿತಿಗಳನ್ನ ಶೇರ್ ಮಾಡೋ ಮುಂಚೆ ಹುಷಾರಾಗಿರಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿಕೆ.