ವಿವೇಕವಾರ್ತೆ : ಘಟಪ್ರಭಾ ನಗರದಲ್ಲಿರುವ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬನ್ನಿ ಸಸಿ ಹಾಗೂ ಸದಾಶಿವನಿಗೆ ಪ್ರೀಯನಾದ ಬಿಲ್ವಪತ್ರೆ ಸಸಿಯನ್ನು ನೆಡುವ ಕಾರ್ಯವನ್ನು ಶ್ರೀ ಮನಿಪ್ರಸ್ವ ವಿರೂಪಾಕ್ಷ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಾಡಲಾಯಿತು.
ಶ್ರೇಷ್ಠ ದಿನವಾದ ವಿಜಯದಶಮಿಯ ದಿನವಾದ ಇಂದು ಕುಮಾರ ಪ್ರಭುದ್ಧ ವಿವೇಕಾನಂದ ಕುದರಿಮಠ ಪುಟಾಣಿಯ ಜನ್ಮದಿನವೂ ಸಹ ಇದ್ದೂ ಜನ್ಮದಿನವನ್ನು ಭಕ್ತಿಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ಕುಟುಂಬಸ್ಥರು ನಿರ್ಧರಿಸಿ, ಬನ್ನಿ ಸಸಿ ಹಾಗೂ ಬಿಲ್ವಪತ್ರೆ ಸಸಿಯನ್ನು ನೆಟ್ಟರು, ಮೊದಲಿಗೆ ಶ್ರೀಗಳ ಪಾದಪೂಜೆ ಮಾಡಿ ನಂತರ ವಿಧಿವಿಧಾನಗಳಿಂದ ಬನ್ನಿ ಸಸಿಯನ್ನು ನೆಡಲಾಯಿತು.

ಈ ಸಂಧರ್ಭದಲ್ಲಿ ವೇದಮೂರ್ತಿ ಗುರುಬಸಯ್ಯ ಕರ್ಪೂರಮಠ, ನಿವೃತ್ತ ಮುಖ್ಯಶಿಕ್ಷಕರಾದ ಮಹಾಂತೇಶ ಕುದರಿಮಠ, ಪತ್ರಕರ್ತ ವಿವೇಕ್ ಕುದರಿಮಠ, ಶಿವರಾಯಿ ಬೆನಕಟ್ಟಿ ಹಾಗೂ ಅನೇಕ ಜನ ನೆರದಿದ್ದರು.