spot_img
spot_img
spot_img
spot_img
spot_img
spot_img

ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಪದಾಧಿಕಾರಿಗಳು ಆಯ್ಕೆ..

Published on

spot_img

ಚಿಕ್ಕೋಡಿ : ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಪದಾಧಿಕಾರಿಗಳು ಆಯ್ಕೆ..
ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಸಭೆ ನಡಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರ-ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಉಪಾಧ್ಯಕ್ಷರಾಗಿ ಸತೀಶ್ ಚಿಂಗಳೆ, ಮಹಿಳಾ ಘಟಕದ ಅಧ್ಯಕ್ಷರಾಗಿ ಹಸೀನಾ ಪಟೇಲ್, ಕಾರ್ಯದರ್ಶಿ ಯಾಗಿ ಮಂಗಲ ವಾಗಳೆ ಇವರನ್ನು ಆಯ್ಕೆ ಮಾಡಲಾಯಿತು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು‌ ಬಡಿಗೇರ ಮಾತನಾಡಿ, ನಮ್ಮ ಜನಪ್ರತಿನಿಧಿಗಳಿಗೆ ಚಿಕ್ಕೋಡಿ ಜಿಲ್ಲೆ ಮಾಡುವ ಇಚ್ಛೆ ಇರುವುದಿಲ್ಲ, ಕೇವಲ ವೋಟಿಗಾಗಿ ಸುಳ್ಳಿನ ಮೇಲೆ ಸುಳ್ಳು ಹೇಳುವ ಮೂಲಕ ಜನರನ್ನು ಮೋಸ ಮಾಡಿ ಮತ ಪಡೆಯುತ್ತಾರೆ, ನಮ್ಮ ಭಾಗವು ಅಭಿವೃದ್ಧಿಯಿಂದ ವಂಚಿತವಾಗಿದೆ, ಕೇವಲ ಸಮುದಾಯ ಭವನ, ಗಟಾರ ಮತ್ತು ರಸ್ತೆ ಅಂದರೆ ಅಭಿವೃದ್ಧಿ ಎಂದು ನಮ್ಮ ಶಾಸಕರು ಮತ್ತು ವಿಪ ಸದಸ್ಯರು ತಿಳಿದಿದ್ದಾರೆ, ನೀರಾವರಿ, ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಇವುಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ, ನಾವು ಚಿಕ್ಕೋಡಿ ಜಿಲ್ಲೆ ಆಗುವವರೆಗೆ ಸತತ ಹೋರಾಟ ಮಾಡುತ್ತೇವೆ, ಶಾಸಕರ ಮನೆ ಮುಂದೆ ಧರಣಿ ಕೂಡುವ ಕಾರ್ಯವನ್ನೂ ಸಹ ಸದ್ಯದಲ್ಲಿ ಮಾಡುತ್ತೇವೆ ಎಂದು ಹೇಳಿದರು, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಚಿಕ್ಕೋಡಿಯನ್ನು ಪ್ರಕಾಶ ಹುಕ್ಕೇರಿ, ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಈ ತ್ರೀಮೂರ್ತಿಗಳು ಮನಸ್ಸು ಮಾಡಿದರೆ ಜಿಲ್ಲೆ ಮಾಡುವುದು ಕಠಿಣವಿಲ್ಲ, ಆದರೆ ಇವರು ಯಾಕೆ ಸುಮ್ಮನಿದ್ದಾರೆ ಎಂಬುದು ತಿಳಿಯುತ್ತಿಲ್ಲ, ಪ್ರಕಾಶ ಹುಕ್ಕೇರಿ ಯಾವುದನ್ನೂ ಹಿಂದಕ್ಕೆ ಬಿಡುವವರಲ್ಲಾ, ಚಿಕ್ಕೋಡಿ ಜಿಲ್ಲೆಯ ವಿಷಯದಲ್ಲಿ ಮೌನವಾಗಿದ್ದು ಏಕೆ, ಇವರಿಗೆ ಯಾರ ಒತ್ತಡವಿದೆ ?, ಕ್ಷೇತ್ರದ ಜನರ ಬೆಂಬಲ ಇರುವಾಗ ಇವರು ಯಾಕೆ ಜಿಲ್ಲೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಒಂದೂ ತಿಳಿಯಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ವೀರುಪಾಕ್ಷಿ ಕವಟಗಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾದ ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಗೌರವ ಅಧ್ಯಕ್ಷರಾದ ಸಂಜಯ ಪಾಟೀಲ, ಸತೀಶ ಚಿಂಗಳೆ, ಸಂತೋಷ ಪೂಜೇರಿ, ಬಸವರಾಜ ಸಜಾನೆ, ರಫಿಕ್ ಪಠಾಣ, ಪ್ರತಾಪ ಪಾಟೀಲ, ದುಂಡಪ್ಪಾ ಬಡಿಗೇರ, ಅಮುಲ ನಾವಿ, ನಂದಕುಮಾರ, ನಾಗವ್ವ ಕುರಣೆ, ಸರಿತಾ ಹಜಾರೆ, ಮಂಗಲ ವಾಗಲೆ, ಅಶ್ವಿನಿ ಜಗದಾಲೆ, ಪ್ರೀತಿ ಗಾಯಕವಾಡ, ರುಕ್ಸಾನಾ ಜಮಾದಾರ, ಸಾಜೀದ ಪಠಾಣ, ರಜಿಯಾ ನನದಿ ಹಾಗೂ ಹಲವಾರು ಹೋರಾಟಗಾರರು ಉಪಸ್ಥಿತರಿದ್ದರು.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!