spot_img
spot_img
spot_img
spot_img
spot_img
spot_img

ವಾಹನ ಮಾಲೀಕರೇ ಗಮನಿಸಿ: HSRP ನಂಬರ್ ಪ್ಲೇಟ್ ಅಳವಡಿಕೆಗೆ ಡೆಡ್ʼಲೈನ್ ಫಿಕ್ಸ್..! ಇಲ್ಲ ಅಂದ್ರೆ ಭಾರೀ ದಂಡ

Published on

spot_img

ಬೆಂಗಳೂರು : ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‌ (HSRP) ಅಳವಡಿಕೆಗೆ ಈಗಾಗಲೇ ರಾಜ್ಯ ಸಾರಿಗೆ ಇಲಾಖೆ ವಾಹನ ಸವಾರರಿಗೆ ಡೆಡ್ಲೈನ್ ನೀಡಿದೆ.  ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲ ಅಂದರೆ ದಂಡ ಫಿಕ್ಸ್. ಮೊದಲನೆ ಬಾರಿ ಸಿಕ್ಕಿಬಿದ್ದರೆ ಸಾವಿರ, 2ನೇ ಬಾರಿ ಸಿಕ್ಕಿಬಿದ್ದರೆ 2 ಸಾವಿರ ದಂಡ ಹಾಕಲಾಗುತ್ತದೆ.

2019 ಏ.1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್ ಗಳನ್ನು (ಹೆಚ್ ಎಸ್ ಆರ್ ಪಿ) ಹಾಕಿಸಿಕೊಳ್ಳುವಂತೆ ನೀಡಲಾಗಿದ್ದ ಗಡುವು ಸಮೀಪಿಸುತ್ತಿದ್ದರೂ ನಂಬರ್ ಪ್ಲೇಟ್ ಬದಲಾವಣೆಗೆ ವಾಹನ ಮಾಲೀಕರು ಆಸಕ್ತಿ ತೋರಿಲ್ಲ. ಹೀಗಾಗಿ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿರುವ ಸಾರಿಗೆ ಇಲಾಖೆ ಫೆ.17ರ ನಂತರ ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಹೆಚ್ ಎಸ್ ಆರ್ ಪಿ ಹಾಕಿಸಲು ಸಾರಿಗೆ ಇಲಾಖೆ 2023ರ ನ.17ರ ಗಡುವು ವಿಧಿಸಿತ್ತು.

ಆದರೆ, ವಾಹನ ಮಾಲೀಕರು ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ 2024ರ ಫೆ.17ರವರೆಗೆ ವಿಸ್ತರಣೆ ಮಾಡಲಾಗಿತ್ತು. ನಿಗದಿಪಡಿಸಿರುವ ಗಡುವು ಅಂತ್ಯವಾಗಲು ಇನ್ನು 16 ದಿನಗಳಷ್ಟೇ ಬಾಕಿ ಉಳಿದಿವೆ. ಆದರೆ, ಈವರೆಗೆ ಬರೀ 10 ಲಕ್ಷ ವಾಹನಗಳಿಗಷ್ಟೇ ಹೆಚ್ಎಸ್ಆರ್ಪಿ ಹಾಕಿಸಿಕೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆಯ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.

ಇನ್ನು ಆರ್ ಟಿಓ ನೋಂದಣಿ ಪ್ರಕಾರ ರಾಜ್ಯದಲ್ಲಿ 2.15 ಕೋಟಿ ಹಳೇ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಲೆಕ್ಕ ತೆಗೆದುಕೊಂಡರೆ ಅಂದಾಜು 1.70 ಕೋಟಿ ವಾಹನಗಳಿವೆ. ಅವಧಿ ವಿಸ್ತರಣೆ ಮಾಡಿದರೂ ವಾಹನ ಮಾಲೀಕರು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಗಡುವು ಫೆ.17ಕ್ಕೆ ಮುಗಿಯುತ್ತಿದೆ. ಅಷ್ಟರಲ್ಲಿ ಹಾಕಿಸಿಕೊಳ್ಳದಿದ್ದರೆ ಸಂಚಾರ ಪೊಲೀಸರು ಹಾಗೂ ಆರ್ ಟಿಓ ಅಧಿಕಾರಿಗಳು ಜಂಟಿಯಾಗಿ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಲಿದ್ದಾರೆ.

ಆದರೆ ಇದಕ್ಕೆ ವಾಹನ ಸವಾರರು ಇನ್ನೂ ಒಂದು ವರ್ಷವಾದ್ರು ಅವಧಿ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡ್ತಿದ್ದಾರೆ.ಒಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಏನೋ ಈಗಾಗಲೇ ಎರಡ್ ಎರಡು ಬಾರಿ ಕಾಲಾವಕಾಶ ನೀಡಿದೆ. ಫೆಬ್ರವರಿ 17 ರೊಳಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲ ಅಂದ್ರೆ ದಂಡ ಗ್ಯಾರೆಂಟಿ. ಆದರೆ ವಾಹನ ಸವಾರರು ಮಾತ್ರ ಒಂದು ವರ್ಷವಾದ್ರು ಕಾಲಾವಕಾಶ ಬೇಕು ಎಂದು ಮನವಿ ಮಾಡ್ತಿದ್ದಾರೆ.

ಹೆಚ್.ಎಸ್.ಆರ್.ಪಿ ಅಳವಡಿಕೆಯ ಕಾರ್ಯವಿಧಾನ

 1. https://transport.karnataka.gov.in ಅಥವಾsiam.in ಭೇಟಿ ನೀಡಿ ಮತ್ತು Book HSRP ನ್ನು ಕ್ಲಿಕ್ ಮಾಡಿ.
 2. ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ.
 3. ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
 4. HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆಮಾಡಿ.
 5. HSRP ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ. ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
 6. ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.
 7. ನಿಮ್ಮ ಅನುಕೂಲಕ್ಕೆ, ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
 8. ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಖ್ಯೆಗೆ ಭೇಟಿ ನೀಡಿ.
 9. ವಾಹನ ಮಾಲೀಕರ ಕಚೇರಿ ಆವರಣ/ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ ಮಾಡಬಹುದು.

HSRP ಅಳವಡಿಸುವವರು ಗಮನಿಸಬೇಕಾದ ಪ್ರಮುಖ ಅಂಶಗಳು

 1. https://transport.karnataka.gov.in www.siam.in ಮೂಲಕ ಮಾತ್ರ HSRP ಅಳವಡಿಕೆ ಕಾಯ್ದಿರಿಸಿಕೊಳ್ಳಿ.
 2. ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್ / IND ಮಾರ್ಕ್ / ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP ಒಂದೇ ರೀತಿಯ ಪ್ರೇಟ್‌ಗಳು / ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ, ಅವುಗಳು HSRP ಫಲಕಗಳಾಗಿರುವುದಿಲ್ಲ.
 3. HSRP ಅಳವಡಿಸದ ಹೊರತು, ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು, ನಮೂದು/ರದ್ದತಿ, ಅರ್ಹತಾಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳನ್ನು ಅನುಮತಿಸುವುದಿಲ್ಲ.
 4. ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ HSRP ಆಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ, HSRP ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿಲ್ಲ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!