ಹೇರ್ಫಾಲ್ (Hairfall) ಇತ್ತೀಚೆಗೆ ಪ್ರತಿಯೊಬ್ಬರ ಸಮಸ್ಯೆಯಾಗ್ತಿದೆ. ಯಾರನ್ನೇ ಕೇಳಿ ಸಿಕ್ಕಾಪಟ್ಟೆ ಕೂದಲು ಉದುರ್ತಿದೆ, ಏನ್ ಮಾಡೋದು ಗೊತ್ತಾಗ್ತಿಲ್ಲ ಅಂತಾರೆ. ಕೂದಲು ಉದುರುವಿಕೆ ಹಿಂದೆ ಹಲವಾರು ಕಾರಣಗಳಿದ್ರೂ ಕೂಡ, DHT (ಡೈಹೈಡ್ರೊಟೆಸ್ಟೊಸ್ಟೆರಾನ್) ಪ್ರಮುಖವಾಗಿದೆ. ಇದು 5-ಆಲ್ಫಾ ರಿಡಕ್ಟೇಸ್ (5-AR) ಕಿಣ್ವವು ಟೆಸ್ಟೋಸ್ಟೆರಾನ್ ಅನ್ನು DHT ಆಗಿ ಪರಿವರ್ತಿಸಿದಾಗ ರೂಪುಗೊಳ್ಳುವ ಪ್ರಬಲ ಆಂಡ್ರೊಜೆನ್ ಹಾರ್ಮೋನ್ ಆಗಿದೆ. ಇದು ಹೇರ್ಫಾಲ್ ಅನ್ನು ಹೆಚ್ಚು ಮಾಡುತ್ತದೆ.
ಕೂದಲ ಆರೈಕೆಯಲ್ಲಿ ಶ್ಯಾಂಪೂ, ಸೀರಮ್, ಹೇರ್ಮಾಸ್ಕ್ಗಳಿಗಿಂತ ಬೆಸ್ಟ್ ಅಂದ್ರೆ ಒಳಗಿನಿಂದ ಪೋಷಣೆ ಮಾಡುವುದು. ಹೌದು ಕೂದಲನ್ನು ಬಲಪಡಿಸುವ ಸತ್ವಗಳನ್ನು ಆಹಾರದ ರೂಪದಲ್ಲಿ ತೆಗೆದುಕೊಳ್ಳುವುದರಿಂದ ಹೇರ್ಫಾಲ್ ನಿಲ್ಲುತ್ತದೆ ಮತ್ತು ಟೆಸ್ಟೋಸ್ಟೆರಾನ್ ಅನ್ನು DHT ಆಗಿ ಪರಿವರ್ತಿಸುವ ಕಿಣ್ವವಾದ 5-ಆಲ್ಫಾ ರಿಡಕ್ಟೇಸ್ ಅನ್ನು ಸಂಭಾವ್ಯವಾಗಿ ನಿಲ್ಲಿಸುತ್ತವೆ.
ಹೇರ್ಫಾಲ್ ಕಡಿಮೆ ಮಾಡುವ ಸೂಪರ್ಫುಡ್ಗಳು
ಕುಂಬಳಕಾಯಿ ಬೀಜಗಳು
ಸಲಾಡ್, ಸೂಪ್, ಕರ್ರಿ, ಗೊಜ್ಜು ರೂಪದಲ್ಲಿ ಟೊಮೆಟೊವನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಕೂದಲು ಸೊಂಪಾಗುತ್ತದೆ.
ಗ್ರೀನ್ ಟೀ
ದಿನಕ್ಕೆ 2–3 ಕಪ್ ಗ್ರೀನ್ ಟೀ ಕುಡಿಯುವುದರಿಂದ ನಿಮ್ಮ ಕೂದಲ ಜೊತೆಗೆ ಆರೋಗ್ಯವೂ ಸುಧಾರಣೆಯಾಗುತ್ತದೆ.
ಜೊತೆಗೆ ನೈಸರ್ಗಿಕವಾಗಿ DHT ಮಟ್ಟವನ್ನು ಕಡಿಮೆ ಮಾಡುವ ಮೂಲಕ ಕೂದಲಿನ ಎಳೆಗಳನ್ನು ಪೋಷಿಸುತ್ತದೆ. ಇದನ್ನು ನಿಮ್ಮ ಆಹಾರದಲ್ಲಿ ಪಲ್ಯ, ಸಲಾಡ್, ಕೋಸಂಬರಿ ರೂಪದಲ್ಲಿ ತಿನ್ನಬಹುದು.
ಕಿರುಚೀಲಗಳ ಸುತ್ತಲಿನ ಉರಿಯೂತವನ್ನು ಕಡಿಮೆ ಮಾಡಿ ಕೂದಲನ್ನು ಸೊಂಪಾಗಿಸುತ್ತದೆ. ಪ್ರತಿದಿನ ಬೆಳಿಗ್ಗೆ ನೆನೆಸಿಟ್ಟ ವಾಲ್ನಟ್ ಮತ್ತು ಬಾದಾಮಿ ತಿನ್ನೋದರಿಂದ ಕೂದಲನ್ನು ಒಳಗಿನಿಂದ ಪೋಷಣೆ ಮಾಡಬಹುದು.
ಪಾಲಕ್ ಮತ್ತು ಕೇಲ್
ಕಬ್ಬಿಣ ಮತ್ತು ಕ್ವೆರ್ಸೆಟಿನ್ ಸತ್ವಗಳನ್ನು ಹೊಂದಿರುವ ಈ ಸೊಪ್ಪುಗಳು ಕೂದಲಿಗೆ ಬಲ ನೀಡುತ್ತವೆ. ಕಬ್ಬಿಣವು ಬಲವಾದ ಕೂದಲ ಬೇರುಗಳನ್ನು ಬೆಂಬಲಿಸಿದರೆ, ಕ್ವೆರ್ಸೆಟಿನ್ ಅದರ ಆಂಡ್ರೊಜೆನ್-ಸಂಬಂಧಿತ ಚಟುವಟಿಕೆಯ ಮೇಲೆ ಪ್ರಭಾವ ಬೀರಬಹುದು.
ಸಾಲ್ಮನ್, ಮ್ಯಾಕೆರೆಲ್ ಮತ್ತು ಕೊಬ್ಬಿನ ಮೀನು
ಒಮೆಗಾ-3 ಕೊಬ್ಬಿನಾಮ್ಲವನ್ನು ಯಥೇಚ್ಛವಾಗಿ ಹೊಂದಿರುವ ಈ ಮೀನುಗಳು ಕೂದಲಿಗೆ ಅಗತ್ಯವಾಗಿವೆ. ಇವುಗಳಲ್ಲಿರುವ ಒಮೆಗಾ-3 ನೆತ್ತಿಯ ಉರಿಯೂತವನ್ನು ಕಡಿಮೆ ಮಾಡುತ್ತದೆ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
ವಾರಕ್ಕೆ 2–3 ಬಾರಿ ತಿನ್ನೋದರಿಂದ ಕೂದಲಿಗೆ ಅಗತ್ಯ ಕೇರ್ ಸಿಗುತ್ತದೆ.
ಹಣ್ಣುಗಳು (ಬ್ಲೂಬೆರ್ರಿಗಳು, ರಾಸ್ಬೆರ್ರಿಸ್)
ಬ್ಲೂಬೆರ್ರಿಗಳು, ರಾಸ್ಬೆರ್ರಿಸ್ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಗೆ ಹೆಸರಾಗಿದ್ದು, ಇವು ಕಾಲಜನ್ ರಚನೆಯನ್ನು ಬೆಂಬಲಿಸುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ಕಿರುಚೀಲಗಳನ್ನು ರಕ್ಷಿಸುತ್ತದೆ.
ಈ ಉತ್ತಮ ಆಹಾರಗಳ ಸೇವನೆಯ ಹೊರತಾಗಿಯೂ ಕೂದಲು ಉದುರುತ್ತಿದ್ದರೆ ಒಮ್ಮೆ ವೈದ್ಯರನ್ನು ಭೇಟಿ ಮಾಡೋದು ಒಳ್ಳೆಯದು.






