ಮಾಜಿ ಸಿಎಂ ಗೆ ಮುನಿರತ್ನ ಹನಿಟ್ರ್ಯಾಪ್​!?

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು : ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರು ಪಕ್ಷದ ಮಾಜಿ BBMP ಸದಸ್ಯೆಯೊಬ್ಬರ ಮೂಲಕ ತಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಹನಿ ಟ್ರ್ಯಾಪ್ ಬಲೆಗೆ ಕೆಡವಿದ್ದರು ಎಂದು ವಿಶೇಷ ತನಿಖಾ ತಂಡಕ್ಕೆ (SIT) ಅತ್ಯಾಚಾರ ಪ್ರಕರಣದ ದೂರುದಾರೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

ನೋಟಿಸ್‌ ಹಿನ್ನೆಲೆಯಲ್ಲಿ ಎಸ್‌ಐಟಿ ವಿಚಾರಣೆಗೆ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದ ದೂರುದಾರೆ ಹಾಜರಾಗಿದ್ದರು. ಈ ವೇಳೆ ಆಕೆ ನೀಡಿದ
ಹೇಳಿಕೆಯನ್ನು ವಿಡಿಯೋ ಕ್ಯಾಮೆರಾ ಮುಂದೆ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಹನಿಟ್ರ್ಯಾಪ್‌ಗೆ ಒಳಗಾದ ಮಾಜಿ ಸಿಎಂ, ಟ್ರ್ಯಾಪ್ ಮಾಡಿದ ಬಿಬಿಎಂಪಿ ಮಾಜಿ ಸದಸ್ಯೆ ಹೆಸರನ್ನು ದೂರುದಾರೆ ಎಸ್‌ಐಟಿಗೆ ಬಹಿರಂಗಪಡಿಸಿದ್ದಾರೆ.

ಈ ಹೇಳಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂಗೆ ಶೀಘ್ರದಲ್ಲೇ ಎಸ್‌ಐಟಿ ನೋಟಿಸ್ ನೀಡಿ, ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.
ಈ ನಡುವೆ, ತಮ್ಮ ರಾಜಕೀಯ ವಿರೋಧಿಯೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಮುನಿರತ್ನ ಅವರು ಬಳಸಿಕೊಂಡಿದ್ದರು ಎನ್ನಲಾದ ಮಹಿಳೆ ಏಡ್ಸ್‌ ಸೋಂಕಿತೆಯಾಗಿದ್ದಾಳೆ ಎಂಬುದು ಎಸ್‌ಐಟಿ ತನಿಖೆಯಲ್ಲಿ ಖಚಿತವಾಗಿದೆ.

WhatsApp Group Join Now
Telegram Group Join Now
Instagram Account Follow Now

Vivek Kudarimath, Chief Editor Vivekvarthe, Journalist, Video Editor, Content Writer, CEO Of VPG Digital Private Limited

Leave a Comment