ವಿವೇಕವಾರ್ತೆ : ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ ತಮ್ಮ ಪಕ್ಷದ ಮಹಿಳಾ ಶಾಸಕಿಯ ಕೈ ಹಿಡಿದು ಬಳಿಕ ಭುಜದ ಮೇಲೆ ಕೈ ಇಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಬಿಜೆಪಿ ಸಂಸದ ಸತೀಶ್ ಕುಮಾರ್ ಗೌತಮ್ ಅವರು ಉತ್ತರ ಪ್ರದೇಶದ ಅಲಿಗಢ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ರೀತಿ ವರ್ತನೆ ತೋರಿದ್ದಾರೆ.
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಅಲಿಗಢ ಜಿಲ್ಲೆಯ ಕೋಲ್ ನಲ್ಲಿ ಶಾಸಕ ಅನಿಲ್ ಪರಾಶರ್ ಅವರು ಹಾಲ್‌ವೊಂದರಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ವೇಳೆ ಈ ಘಟನೆ ನಡೆದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸಂಸದ ಸತೀಶ್ ಗೌತಮ್ ಅವರು ಮಹಿಳಾ ಶಾಸಕಿ ಮುಕ್ತಾ ರಾಜಾ ಅವರ ಕೈ ಹಿಡಿದು ಬಳಿಕ ಭುಜದ ಮೇಲೆ ಕೈ ಇಟ್ಟಿದ್ದಾರೆ. ಇದರಿಂದ ಶಾಸಕಿ ಮುಕ್ತಾ ಮುಜುಗರಕ್ಕೀಡಾಗಿದ್ದು, ಕೈತೆಗೆಯುವಂತೆ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು.
ನಂತರ ಅವರು ಕುರ್ಚಿಯನ್ನು ಬದಲಾಯಿಸಿ ಮತ್ತೊಂದು ಕುರ್ಚಿಯಲ್ಲಿ ಹೋಗಿ ಕುಳಿತಿದ್ದಾರೆ. ಈ ಘಟನೆಯ ಸಂದರ್ಭದಲ್ಲಿ ಬಿಜೆಪಿ ಶಾಸಕ ಬರೌಲಿ ಠಾಕೂರ್ ಜೈವೀರ್ ಸಿಂಗ್ ಗೌತಮ್ ಅವರ ಪಕ್ಕದಲ್ಲೇ ಕುಳಿತುಕೊಂಡಿದ್ದರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://twitter.com/Cow__Momma/status/1708023700279468091?t=f0knP3AEz9VqrPmLYwI3ag&s=19