Mobile Phone: ಮೊಬೈಲ್ ಕವರ್’ನಲ್ಲಿ ದುಡ್ಡು ಇಡುವ ಅಭ್ಯಾಸ ನಿಮಗಿದೆಯಾ..? ಹಾಗಿದ್ರೆ ಎಚ್ಚರ..

Published on

spot_img
spot_img

ವಿವೇಕವಾರ್ತೆ :  ಈ ಪ್ರಪಂಚದಲ್ಲಿನ  ಯುವ ಪೀಳಿಗೆಗಳು ಮೊಬೈಲ್ ಫೋನ್ (Mobile Phone) ಅನ್ನು ಹೆಚ್ಚಾಗಿ ಬಳಸುತ್ತಾರೆ. ಈಗಿನ ಜನರಿಗೆ ಕೈಯಲ್ಲಿ ಯಾವಾಗಲು ಮೊಬೈಲ್ ಫೋನ್ ಇಟ್ಟುಕೊಳ್ಳಲೇಬೇಕು. ಈಗಿನ ಜನರೇಶನ್ ಮಕ್ಕಳು ಮೊಬೈಲ್ ಫೋನ್ ಗೆ ಹೆಚ್ಚು ಸೀಮಿತವಾಗಿದ್ದಾರೆ. ಕೆಲವು ಜನರಿಗೆ ಮೊಬೈಲ್ ಫೋನ್ ಕೈಯಲ್ಲಿ ಇಲ್ಲದಿದ್ದರೆ ಆಗುವುದೇ ಇಲ್ಲ.

ಇನ್ನೂ ನಿಮ್ಮ ಫೊನ್ ಅಂದರೆ ಮೊಬೈಲ್ (Mobile) ಕವರ್ ನಲ್ಲಿ ಹಣ ಇಡುವ ಹವ್ಯಾಸ ಹೆಚ್ಚಿನವರಿಗೆ ಇರುತ್ತದೆ. ಕೆಲವೊಮ್ಮೆ ಅವಸರದಲ್ಲಿ ಇಟ್ಟರೆ, ಇನ್ನು ಕೆಲವೊಮ್ಮೆ ಸುಲಭವಾಗಿ ಸಿಗಲಿ ಎಂದು ಮೊಬೈಲ್ ಕವರ್ ನಲ್ಲಿ ಹಣ ಇಡುತ್ತೇವೆ ಆದರೆ ಇದರಿಂದ ಅಪಾಯವೂ ಇದೆ. ಈ ರೀತಿ ಮೊಬೈಲ್ ಕವರ್ ನಲ್ಲಿ ನೋಟುಗಳನ್ನು ಇಡುವುದರಿಂದ ಮೊಬೈಲ್ (Tech News) ಬಿಸಿ ಆಗುತ್ತಾ ಹೋಗುತ್ತದೆ.

ಮೊಬೈಲ್ ಕವರ್ ನಲ್ಲಿ ನೋಟು, ಹಣ (money) ಇಡುವುದರಿಂದ ಮೊಬೈಲ್ ಬಿಸಿಯಾಗುವುದಷ್ಟೇ ಅಲ್ಲದೆ ಮೊಬೈಲ್ ಸ್ಪೋಟವಾಗುವ ಸಾಧ್ಯತೆಯೂ ಇದೆ. ಹಾಗಾಗಿ ಮೊಬೈಲ್ ಕವರ್ ನಲ್ಲಿ ಹಣ ಅಥವಾ ಕಾಗದ ಇಡುವವರು ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಇಲ್ಲದಿದ್ದರೆ, ನಿಮ್ಮ ಮೊಬೈಲ್ ಫೋನ್ ಸ್ಫೋಟಗೊಂಡು ಮಾರಣಾಂತಿಕ ಅಪಘಾತ ಸಂಭವಿಸಬಹುದು.

ಫೋನ್‌ನ ಕವ‌ರ್ ನಲ್ಲಿ (mobile cover) ಹಣ ಅಥವಾ ಯಾವುದೇ ರೀತಿಯ ಕಾಗದವನ್ನು ಇಡದಿರುವುದೇ ಒಳಿತು. ಅಂದಹಾಗೆ ನಿಮ್ಮ ಫೋನ್ ಬಿಸಿಯಾಗುವುದರ ಹಿಂದಿನ ದೊಡ್ಡ ಕಾರಣವೆಂದರೆ ಫೋನ್‌ನಲ್ಲಿ ನೋಟ್ ಇಟ್ಟುಕೊಳ್ಳುವುದು ಅಥವಾ ಫೋನ್‌ನಲ್ಲಿ ದಪ್ಪ ಕವರ್ ಹೊಂದಿರುವುದು. ನೀವು ಫೋನ್ ಅನ್ನು ನಿರಂತರವಾಗಿ ಬಳಸಿದಾಗ, ಫೋನ್ ಬಿಸಿಯಾಗಲು ಪ್ರಾರಂಭಿಸುತ್ತದೆ ಮತ್ತು ಸ್ಫೋಟಗೊಳ್ಳಬಹುದು.

ಚಾರ್ಜ್ ಮಾಡುವಾಗ ಫೋನ್ ಬಳಸುವುದರಿಂದ ಫೋನ್ ಬ್ಲಾಸ್ಟ್ ಆಗುತ್ತದೆ. ಫೋನ್‌ನ ಕವರ್ ದಪ್ಪವಾಗಿರುತ್ತದೆ ಮತ್ತು ನೀವು ಅದರಲ್ಲಿ ಹಣವನ್ನು ಇರಿಸಿದರೆ, ಅದು ವೈರ್‌ಲೆಸ್ ಚಾರ್ಜಿಂಗ್‌ನಲ್ಲಿಯೂ ಸಮಸ್ಯೆಗಳನ್ನು ಉಂಟುಮಾಡಬಹುದು. ಫೋನ್‌ನ ಕವರ್‌ನಲ್ಲಿ ನೋಟ್ ಇಡುವುದು ಕೆಲವೊಮ್ಮೆ ನೆಟ್‌ವರ್ಕ್ ಸಮಸ್ಯೆಗಳಿಗೆ ಕಾರಣವಾಗಬಹುದು.

Source link

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!