ಪುದೀನಾ ಎಲೆಗಳ ಸೇವನೆಯಿಂದ ಇಂತಹ ಕಾಯಿಲೆಗಳನ್ನೆಲ್ಲಾ ನಿಯಂತ್ರಿಸಬಹುದು..!

ಪುದೀನ ಗುಣಲಕ್ಷಣಗಳು ಅಲರ್ಜಿ ಮತ್ತು ಆಸ್ತಮಾವನ್ನು ನಿವಾರಿಸುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಪುದೀನ ಎಲೆಗಳನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಔಷಧೀಯ ಗುಣಗಳನ್ನು ಹೊಂದಿರುವ ಪುದೀನ ಸೇವನೆಯಿಂದ ಹಲವು ಪ್ರಯೋಜನಗಳಿವೆ.

ಪುದೀನ ಸೇವನೆಯ ಪ್ರಯೋಜನಗಳ ಬಗ್ಗೆ ತಿಳಿಯೋಣ ..!

  • ಪುದೀನ ಅಲರ್ಜಿಯನ್ನು ನಿವಾರಿಸುತ್ತದೆ.
  • ಪುದೀನ ಉಸಿರಾಟದ ತೊಂದರೆ ನಿವಾರಿಸುತ್ತದೆ.
  • ಅಡುಗೆಯಲ್ಲಿ ಪುದೀನ ಸೇರಿಸುವುದರಿಂದ ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ನಾಶವಾಗುತ್ತದೆ.
  • ಮಳೆಗಾಲ ಮತ್ತು ಚಳಿಗಾಲದಲ್ಲಿ ಪುದೀನ ಎಲೆಗಳನ್ನು ಸೇವಿಸುವುದರಿಂದ ಶೀತ ಮತ್ತು ಗಂಟಲು ನೋವು ನಿವಾರಣೆಯಾಗುತ್ತದೆ.
  • ಪುದೀನದಲ್ಲಿರುವ ವಿಟಮಿನ್ ಸಿ, ಡಿ, ಇ ಮತ್ತು ಬಿ ಹಾಗೂ ಕ್ಯಾಲ್ಸಿಯಂ ಮತ್ತು ರಂಜಕವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಪ್ರತಿದಿನ ಪುದೀನ ಎಲೆಗಳ ಚಹಾ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸಬಹುದು.
  • ಚರ್ಮದಲ್ಲಿ ತುರಿಕೆ ಸಮಸ್ಯೆ ಇದ್ದಾಗ, ಪುದೀನ ಎಲೆಗಳನ್ನು ತೊಳೆದು ತುರಿಕೆ ಇರುವ ಜಾಗದಲ್ಲಿ ಉಜ್ಜುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.
  • ಕುದಿಯುತ್ತಿರುವ ನೀರಿಗೆ ಪುದೀನ ಎಲೆಗಳನ್ನು ಹಾಕಿ, ಸ್ವಲ್ಪ ಉಪ್ಪು ಬೆರೆಸಿ ಕಷಾಯ ತಯಾರಿಸಿ ಸೇವಿಸಿದರೆ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.
  • ಮೊಡವೆಗಳಿಂದಮುಕ್ತಿಪುದೀನಾ ಎಲೆಗಳು ಸ್ಯಾಲಿಸಿಲಿಕ್ ಆಮ್ಲ ಮತ್ತು ವಿಟಮಿನ್ ಎ ಅನ್ನು ಹೊಂದಿರುತ್ತವೆ. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಮೊಡವೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಇದು ಚರ್ಮದಲ್ಲಿ ತೈಲ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಪುದೀನಾವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ.ನೀವು ಪುದೀನಾ ಎಲೆ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಈ ಪೇಸ್ಟ್ ಮೊಡವೆಯ ಕಲೆಗಳನ್ನು ಕೂಡ ಕಡಿಮೆ ಮಾಡುತ್ತದೆ.
  • ಗಾಯಗಳನ್ನುಗುಣಪಡಿಸುತ್ತದೆಪುದೀನಾ ಉರಿಯೂತವನ್ನು ದೂರ ಮಾಡುವ ಗುಣಗಳನ್ನು ಹೊಂದಿದೆ. ಚರ್ಮದ ಮೇಲಿನ ಕಲೆ, ಸೊಳ್ಳೆ ಮತ್ತು ತುರಿಕೆಯನ್ನು ನಿವಾರಿಸುತ್ತಾರೆ. ಇದಕ್ಕಾಗಿ ನೀವು ಪುದೀನಾ ಎಲೆಗಳ ರಸವನ್ನು ಬಾಧಿತ ಜಾಗಕ್ಕೆ ಹಚ್ಚಬೇಕು. ಇದು ಗಾಯವನ್ನು ಗುಣಪಡಿಸುತ್ತವೆ. ಅಲ್ಲದೆ ಗಾಯದಿಂದ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡಲು ಪುದೀನಾ ಸಹಾಯ ಮಾಡುತ್ತದೆ.

error: Content is protected !!