ಹೊಸ ವರ್ಷದ ಮೊದಲ ದಿನವೇ ಬಿಗ್ ಶಾಕ್: ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ

ಹೊಸ ವರ್ಷದ ಮೊದಲ ದಿನವೇ ಶ್ರೀಸಾಮಾನ್ಯನಿಗೆ ದೊಡ್ಡ ಶಾಕ್‌ ಕಾದಿದೆ. ಜನವರಿ 1, 2023 ರಿಂದ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಹೆಚ್ಚಾಗಿದೆ. ಇಂದಿನಿಂದ ಸಿಲಿಂಡರ್ ಖರೀದಿ ದುಬಾರಿಯಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಗ್ರಾಹಕರಿಗೆ ಸಂಕಷ್ಟ ಎದುರಾಗುವಂತೆ ಮಾಡಿದೆ.

ಇನ್ನು ದೆಹಲಿ, ಮುಂಬೈನಿಂದ ಪಾಟ್ನಾವರೆಗಿನ ಎಲ್ಲಾ ನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ ದುಬಾರಿಯಾಗಿದೆ. ಯಾವ ನಗರದಲ್ಲಿ ಸಿಲಿಂಡರ್ ದರ ಎಷ್ಟಿದೆ ಎಂದು ತಿಳಿಯೋಣ.

ಜನವರಿ 1, 2023 ರಿಂದ ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳು ಹೆಚ್ಚಾಗಿದೆ. ದೇಶೀಯ ಗ್ಯಾಸ್ ಸಿಲಿಂಡರ್ಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಬರೋಬ್ಬರಿ 25 ರೂ. ಹೆಚ್ಚಳವಾಗಿದೆ.

ವಾಣಿಜ್ಯ ಸಿಲಿಂಡರ್ ದರಗಳು: (ರೂ.ಗಳಲ್ಲಿ)

ದೆಹಲಿ – 1769 ರೂ.
ಮುಂಬೈ – 1721 ರೂ.
ಕೊಲ್ಕತ್ತಾ – 1870 ರೂ.
ಚೆನ್ನೈ – 1917 ರೂ.
ದೇಶೀಯ ಸಿಲಿಂಡರ್ ದರಗಳು- (ರೂ.ಗಳಲ್ಲಿ)

ದೆಹಲಿ – 1053 ರೂ.
ಮುಂಬೈ – 1052.5 ರೂ.
ಕೋಲ್ಕತ್ತಾ – 1079 ರೂ.
ಚೆನ್ನೈ – 1068.5 ರೂ.
ಕಳೆದ ಒಂದು ವರ್ಷದಲ್ಲಿ ಸಿಲಿಂಡರ್ ಬೆಲೆ 153.5 ರೂ ಹೆಚ್ಚಳ!

ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಕೊನೆಯ ಬದಲಾವಣೆಯನ್ನು ಅಂದರೆ 14.2 ಕೆಜಿ ಸಿಲಿಂಡರ್ ಬೆಲೆಯನ್ನು 6 ಜುಲೈ 2022 ರಂದು ಮಾಡಲಾಗಿತ್ತು. ಕಳೆದ ಒಂದು ವರ್ಷದಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 153.5 ರೂ. ಹೆಚ್ಚಳವಾಗಿದೆ.

2022ರ ಮಾರ್ಚ್ ತಿಂಗಳಿನಲ್ಲಿ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು 50 ರೂಪಾಯಿಗಳಷ್ಟು ಹೆಚ್ಚಿಸಲಾಯಿತು. ನಂತರ ಮೇ ತಿಂಗಳಲ್ಲಿ ಮತ್ತೆ 50 ರೂ.ಏರಿಸಲಾಯಿತು. ಆ ಬಳಿಕ ಮತ್ತೊಮ್ಮೆ ಅದೇ ತಿಂಗಳಲ್ಲಿ ಎರಡನೇ ಬಾರಿಗೆ 3.50 ರೂ. ಹೆಚ್ಚಳವಾಯಿತು. ನಂತರ ಜುಲೈನಲ್ಲಿ ಕೊನೆಯ ಬಾರಿಗೆ 50 ರೂ. ಏರಿಕೆ ಮಾಡಲಾಯಿತು.

error: Content is protected !!