Saturday, September 30, 2023

LPG Gas Cylinder: ಗುಡ್‌ ನ್ಯೂಸ್: 75 ಲಕ್ಷ ಕುಟುಂಬಕ್ಕೆ ಸಿಗಲಿದೆ ಉಚಿತ LPG ಗ್ಯಾಸ್ ಸೌಲಭ್ಯ

ವಿವೇಕವಾರ್ತೆ : ಭಾರತದಲ್ಲಿ ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಇದೀಗ ಉಜ್ವಲ ಯೋಜನೆಯನ್ನು ಮತ್ತೆ ಮೂರ ವರ್ಷಗಳ ಕಾಲ ವಿಸ್ತರಿಸಲು ಪ್ರಧಾನಿ ಮೋದಿ ಅಧ್ಯಕ್ಷತೆಯ ಕ್ಯಾಬಿನೆಟ್ ಅನುಮೋದನೆ ನೀಡಿದೆ.

1,650 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ಬರೋಬ್ಬರ 75 ಲಕ್ಷ ಅರ್ಹ ಕುಟುಂಬಕ್ಕೆ ಉಜ್ವಲ ಯೋಜನೆಯಡಿ ಉಚಿತ ಎಲ್‌ಪಿಜಿ ಗ್ಯಾಸ್ ಸಂಪರ್ಕ ಸಿಗಲಿದೆ.

ಈ ಯೋಜನೆ 2023-24ರಿಂದ 2025-26ರವರೆಗೆ ವಿಸ್ತರಣೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಕಡಿತಗೊಳಿಸಿತ್ತು. ಇತ್ತ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಒಟ್ಟು 400 ರೂಪಾಯಿ ಕಡಿತಗೊಂಡಿತ್ತು. ಇದೀಗ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡಲು ಸರ್ಕಾರ ನಿರ್ಧರಿಸಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ಉಚಿತವಾಗಿ ನೀಡಲಾಗುತ್ತದೆ.

ಉಜ್ವಲ ಯೋಜನೆಯಡಿಯ ಗ್ಯಾಸ್ ಸಂಪರ್ಕ
14.2 ಕೆಜಿ ಸಿಂಗಲ್ ಸಿಲಿಂಡರ್ ಗ್ಯಾಸ್ ಸಂಪರ್ಕ: 2200 ರೂಪಾಯಿ
5ಕೆಜಿ ಡಬಲ್ ಸಿಲಿಂಡರ್ ಸಂಪರ್ಕ: 2200 ರೂಪಾಯಿ
5 ಕೆಜಿ ಸಿಂಗಲ್ ಸಿಲಿಂಡರ್ ಸಂಪರ್ಕ: 1300 ರೂಪಾಯಿ

ಇನ್ನು ಉಜ್ವಲ ಯೋಜನೆಯಡಿ ಪ್ರತಿ14.2 ಕೆಜಿ ಗ್ಯಾಸ್ ಸಿಲಿಂಡರ್ ಮೇಲೆ ಒಟ್ಟು 400 ರೂಪಾಯಿ ಸಬ್ಸಿಡಿ ಸಿಗಲಿದೆ. ಇನ್ನು ಪ್ರತಿ ವರ್ಷ ಸಬ್ಸಡಿ ಅಡಿಯಲ್ಲಿ 12 ಸಿಲಿಂಡರ್ ಪಡೆದುಕೊಳ್ಳಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಇಳಿಕೆ ಮಾಡಿ ಜನಸಾಮಾನ್ಯರ ಹೊರೆ ತಗ್ಗಿಸಿತ್ತು. ಎಲ್‌ಪಿಜಿ ಗ್ರಾಹಕರಿಗೆ 200 ರು. ಇಳಿಕೆ ಮಾಡಲಾಗಿದ್ದರೆ,

ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆದ ಬಡವರಿಗೆ ಈಗಾಗಲೇ ಇದ್ದ 200 ರು. ಸಬ್ಸಿಡಿಗೆ ಈಗ ಮತ್ತೆ 200 ರು. ಸೇರಿಸಿದೆ. ಹೀಗಾಗಿ ಅವರಿಗೆ ಒಟ್ಟು 400 ರು. ಸಬ್ಸಿಡಿ ಸಿಗಲಿದೆ. ಕರ್ನಾಟಕದಲ್ಲಿ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆ 1,105 ರು. ಇದೆ. ಅದು ಬುಧವಾರದಿಂದ ಸಾಮಾನ್ಯ ಗ್ರಾಹಕರಿಗೆ 905 ರು.ಗೆ ಹಾಗೂ ಉಜ್ವಲಾ ಫಲಾನುಭವಿಗಳಿಗೆ 705 ರು.ಗೆ ಆಗಲಿದೆ. ಬೆಲೆ ಕಡಿತದಿಂದಾಗಿ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 10,000 ಕೋಟಿ ರು. ಹೊರೆ ಬೀಳಲಿದೆ ಎಂದು ಹೇಳಲಾಗಿದೆ.

RELATED ARTICLES

ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞ ವೈದ್ಯೆ.!

ವಿವೇಕವಾರ್ತೆ : ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಯೊಬ್ಬರು ಅನುಮಾನಸ್ಪದವಾಗಿ ಸಾವನಪ್ಪಿದ ಘಟನೆ ಇಂದು (ಸೆ.29) ನಡೆದಿದೆ. ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಡಾI ಸಿಂದುಜಾ (28)...

ರೀಲ್ಸ್ ಮಾಡಿ ಟ್ರೋಲ್ ಆದ ಮಹಿಳಾ ಪೊಲೀಸ್ ; ವಿಡಿಯೋ ವೈರಲ್.!

ವಿವೇಕವಾರ್ತೆ : ಮಹಿಳೆ ಪೊಲೀಸ್​​​ ರೀಲ್ಸ್​​ ಮಾಡಲು ಹೋಗಿ ಇಲಾಖೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾದ ಘಟನೆಯೊಂದು ಪಂಜಾಬನಲ್ಲಿ ನಡೆದಿದೆ. ಪೊಲೀಸರು ರೀಲ್ಸ್​​ ಮಾಡಬಾರದು ಎಂದು ಇಲ್ಲಾ, ಆದರೆ ಅವರು ಸಮಾಜದ ಒಳಿತನ್ನು ಕಾಪಾಡುವ...

ಗುರುವಿನ ಸಹಾಯದಿಂದ ಬುಗುರಿಯಂತೆ ತಿರುಗುತ್ತಿರುವ ತುಂಬು ಗರ್ಭಿಣಿ : ವಿಡಿಯೋ ವೈರಲ್.!

ವಿವೇಕವಾರ್ತೆ : ಇಲ್ಲೊಬ್ಬಳು ತುಂಬು ಗರ್ಭಿಣಿಯಾಗಿರುವ ಮಹಿಳೆ ತನ್ನ ಗುರುವಿನ ಸಹಾಯದಿಂದ ಬುಗುರಿಯಂತೆ ಸುತ್ತಲೂ ಸುತ್ತುತ್ತಿರುವ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿ ತುಂಬಾ ವೈರಲ್ ಆಗಿದೆ. ಪ್ರತಿ ಕುಟುಂಬದಲ್ಲಿಯೂ ಗರ್ಭಿಣಿಯಾದ ಮಹಿಳೆಯ ಬಗ್ಗೆ...
- Advertisment -

Most Popular

ಲೋಕಸಭೆ ಬಿಜೆಪಿ ಟಿಕೆಟ್ ಸಿಗುವ ಭರವಸೆ ಇದೆ – ರಮೇಶ್ ಕತ್ತಿ

ವಿವೇಕವಾರ್ತೆ : ಈ ಬಾರಿ ಲೋಕಸಭೆ ಚುನಾವಣೆಗೆ ತಮಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ. ಅವರು ಇಂದು ಚಿಕ್ಕೋಡಿಯ ನಂದಗಾಂವ ಗ್ರಾಮದಲ್ಲಿ...

ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞ ವೈದ್ಯೆ.!

ವಿವೇಕವಾರ್ತೆ : ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಯೊಬ್ಬರು ಅನುಮಾನಸ್ಪದವಾಗಿ ಸಾವನಪ್ಪಿದ ಘಟನೆ ಇಂದು (ಸೆ.29) ನಡೆದಿದೆ. ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಡಾI ಸಿಂದುಜಾ (28)...

ರೀಲ್ಸ್ ಮಾಡಿ ಟ್ರೋಲ್ ಆದ ಮಹಿಳಾ ಪೊಲೀಸ್ ; ವಿಡಿಯೋ ವೈರಲ್.!

ವಿವೇಕವಾರ್ತೆ : ಮಹಿಳೆ ಪೊಲೀಸ್​​​ ರೀಲ್ಸ್​​ ಮಾಡಲು ಹೋಗಿ ಇಲಾಖೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾದ ಘಟನೆಯೊಂದು ಪಂಜಾಬನಲ್ಲಿ ನಡೆದಿದೆ. ಪೊಲೀಸರು ರೀಲ್ಸ್​​ ಮಾಡಬಾರದು ಎಂದು ಇಲ್ಲಾ, ಆದರೆ ಅವರು ಸಮಾಜದ ಒಳಿತನ್ನು ಕಾಪಾಡುವ...

ಗುರುವಿನ ಸಹಾಯದಿಂದ ಬುಗುರಿಯಂತೆ ತಿರುಗುತ್ತಿರುವ ತುಂಬು ಗರ್ಭಿಣಿ : ವಿಡಿಯೋ ವೈರಲ್.!

ವಿವೇಕವಾರ್ತೆ : ಇಲ್ಲೊಬ್ಬಳು ತುಂಬು ಗರ್ಭಿಣಿಯಾಗಿರುವ ಮಹಿಳೆ ತನ್ನ ಗುರುವಿನ ಸಹಾಯದಿಂದ ಬುಗುರಿಯಂತೆ ಸುತ್ತಲೂ ಸುತ್ತುತ್ತಿರುವ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿ ತುಂಬಾ ವೈರಲ್ ಆಗಿದೆ. ಪ್ರತಿ ಕುಟುಂಬದಲ್ಲಿಯೂ ಗರ್ಭಿಣಿಯಾದ ಮಹಿಳೆಯ ಬಗ್ಗೆ...
error: Content is protected !!