ವಿವೇಕವಾರ್ತೆ;- ಸಿಲಿಕಾನ್ ಸಿಟಿಯ ನಗರದ ಕುರುಬರಹಳ್ಳಿಯ ಜೆ.ಸಿ ನಗರದಲ್ಲಿ ಪ್ರೇಮ ವೈಫಲ್ಯದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 25 ವರ್ಷದ ಯೋಗೇಶ್ ಆತ್ಮಹತ್ಯೆಗೆ ಶರಣಾದ ಯುವಕ. ನಂತರ ಯೋಗೇಶ್ ನನ್ನು ಪೋಷಕರು ಅಸ್ಪತ್ರೆಗೆ ದಾಖಲಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಯುವಕ, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ.
ಮೃತ ನಾಗೇಶ್ ನಾಗಮಂಗಲದ ಆಡೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ನಗರದಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದನಂತೆ. ನಾಗಮಂಗಲ ಮೂಲದ ಯುವತಿಯನ್ನ ಯೋಗೇಶ್ ಪ್ರೀತಿಸುತ್ತಿದ್ದನಂತೆ. ಕಳೆದ ನಾಲ್ಕು ವರ್ಷಗಳಿಂದ ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಇತ್ತೀಚಿಗೆ ಯೋಗೇಶ್ ನಿಂದ ಯುವತಿ ದೂರವಾಗಿದ್ದಳಂತೆ.
ಪ್ರೇಮ ವೈಫಲ್ಯ ಹಿನ್ನಲೆಯಲ್ಲಿ ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷ ಸೇವಿಸುವ ಮುನ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ. ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.