ವಿವೇಕವಾರ್ತೆ : ಟೊಮೆಟೋ ಬೆಲೆ ಏರಿಕೆಯಾಗಿ ಅಡುಗೆ ಮಾಡೋದು ಹೇಗೆ ಅಂತ ಗೃಹಿಣಿ ಯೋಚಿಸುತ್ತಿದ್ರೆ, ಮದ್ಯಪ್ರಿಯರು ತಮ್ಮ ಮೇಲಾಗುತ್ತಿರುವ ಬೆಲೆ ದೌರ್ಜನ್ಯ ಖಂಡಿಸಿ ಅಬಕಾರಿ ಇಲಾಖೆ ಮೊರೆ ಹೋಗಿದ್ದಾರೆ.
ಇದೀಗ ಮದ್ಯ ಪ್ರಿಯರ ಮನವಿಗೆ ಸ್ಪಂದಿಸಿರುವ ಅಬಕಾರಿ ಇಲಾಖೆ, ಹೆಚ್ಚು ಹಣ ಪಡೆಯುವ ಬಾರ್ಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಕೆಲ ಬಾರ್ ಮಾಲೀಕರು ಸರ್ಕಾರದ ಹೆಸರಲ್ಲಿ ಮದ್ಯಪ್ರಿಯರಿಂದ ಮನಬಂದಂತೆ ಹಣ ಪಡೆದುಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ.
ಶೇ.20ರಷ್ಟು ಅಬಕಾರಿ ಶುಲ್ಕಕ್ಕೆ ಹೆಚ್ಚುವರಿ 40-45% ಬಾರ್ ಮಾಲೀಕರು ಹಣ ಪಡೆಯುತ್ತಿದ್ದಾರೆ ಎಂದು ಮದ್ಯಪ್ರಿಯರು ಆರೋಪಿಸುತ್ತಿದ್ದಾರೆ.
ಪ್ರತಿ ಮದ್ಯದ ದರಕ್ಕಿಂತ 60-70 ರೂ. ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಹೆಚ್ಚುವರಿ ಹಣ ಕೇಳುತ್ತಿರುವ ಬಾರ್ಗಳ ವಿರುದ್ಧ ಅಬಕಾರಿ ಇಲಾಖೆಗೆ ಸಾಲು ಸಾಲು ದೂರುಗಳು ಬಂದಿವೆ.
ದೂರುಗಳ ಬಂದ ಹಿನ್ನೆಲೆ ಹಣ ವಸೂಲಿ ಮಾಡುವ ಬಾರ್ ಆಯಂಡ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ಮಾಡಲು ಅಬಕಾರಿ ಇಲಾಖೆ ತಂಡ ರಚನೆ ಮಾಡಿದೆ. ದೂರು ಕೇಳಿ ಬಂದಿರುವ ಬಾರ್ಗಳ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿವೆ.
ಹೆಚ್ಚುವರಿ ಹಣ ಪಡೆಯುವ ಬಾರ್ಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮಾರುವೇಷದಲ್ಲಿ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೆಚ್ಚುವರಿ ಹಣ ಪಡೆಯೋದು ಸಾಬೀತಾದ್ರೆ ಲೈಸೆನ್ಸ್ ರದ್ದಾಗಲಿದೆ ಎಂದು ಅಬಕಾರಿ ಇಲಾಖೆ ಎಚ್ಚರಿಕೆ ನೀಡಿದೆ.
ಅಬಕಾರಿ ಕಮಿಷನರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗುತ್ತಿದೆ. ಒಂದು ವೇಳೆ ತನಿಖೆ ವೇಳೆ ಸಿಕ್ಕರೆ ನಿಮ್ಮ ಬಾರ್ ಲೈಸನ್ಸ್ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಅಬಕಾರಿ ಇಲಾಖೆಯ ಅಪರ ಆಯುಕ್ತರಾದ ನಾಗರಾಜಪ್ಪ ಹೇಳಿದ್ದಾರೆ.