2022ರಲ್ಲಿ ಸಿಕ್ಕಾಪಟ್ಟೆ ಸದ್ದು ಸುದ್ದಿಯಾದವರಲ್ಲಿ ಕನ್ನಡದ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಲವ್ ಸ್ಟೋರಿ. ತೆಲುಗು ನಟ ನರೇಶ್ ಜೊತೆ ಕನ್ನಡ ನಟಿ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.
New Year ✨
New Beginnings 💖
Need all your blessings 🙏From us to all of you #HappyNewYear ❤️
– Mee #PavitraNaresh pic.twitter.com/JiEbWY4qTQ
— H.E Dr Naresh VK actor (@ItsActorNaresh) December 31, 2022
ಇಬ್ಬರ ಮದುವೆ ಸುದ್ದಿ ವೈರ್ ಆದ ಬೆನ್ನಲ್ಲೇ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ರೊಚ್ಚಿಗೆದ್ದಿದ್ದರು. ಪವಿತ್ರಾ ಲೋಕೇಶ್ ವಿರುದ್ಧ ಕಿಡಿ ಕಾರಿದ್ದರು. ರಮ್ಯಾ, ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವಿನ ಕಿತ್ತಾಟ ಚಪ್ಪಲಿಯಲ್ಲಿ ಹೊಡೆಯುವ ಮಟ್ಟಕ್ಕೆ ಹೋಗಿತ್ತು. ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದ ಪವಿತ್ರಾ ಮತ್ತು ನರೇಶ್ ಇದೀಗ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆ ಬಗ್ಗೆ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪವಿತ್ರಾ ಲೋಕೇಶ್ ಮತ್ತು ನರೇಶ್ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ. ಈ ಮೂಲಕ ಇಬ್ಬರ ನಡುವಿನ ಸಂಬಂಧವನ್ನು ಅಧಿಕೃತಗೊಳಿಸುತ್ತಿದ್ದಾರೆ. ಅಂದಹಾಗೆ ಮದುವೆ ಬಗ್ಗೆ ಸ್ವತಃ ನರೇಶ್ ಅವರೇ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ವಿಡಿಯೋ ಶೇರ್ ಮಾಡುವ ಮೂಲಕ ಮದುವೆ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ನರೇಶ್ ಶೇರ್ ಮಾಡಿರುವ ವಿಡಿಯೋದಲ್ಲಿ ತನ್ನ ಪ್ರಪಂಚಕ್ಕೆ ಪವಿತ್ರಾ ಲೋಕೇಶ್ ಅವರಿಗೆ ಸ್ವಾಗತ ಕೋರಿದ್ದಾರೆ. ಕೇಕ್ ಕತ್ತರಿ ಇಬ್ಬರೂ ಒಬ್ಬರಿಗೊಬ್ಬರು ತಿನಿಸಿ ಲಿಪ್ ಕಿಸ್ ಮಾಡಿದ್ದಾರೆ. ವಿಡಿಯೋ ಕೊನೆಯಲ್ಲಿ ಸದ್ಯದಲ್ಲಿ ಇಬ್ಬರೂ ಮದುವೆಯಾಗುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಪವಿತ್ರಾನರೇಶ್ (#PavitraNaresh) ಎಂದು ಹ್ಯಾಟ್ ಕೂಡ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಈ ಮೂಲಕ ಇಬ್ಬರೂ ಮದುವೆ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಎಳೆಯುತ್ತಿದ್ದಾರೆ.
ಅಂದಹಾಗೆ ಈ ಬಗ್ಗೆ ನರೇಶ್ ಪತ್ನಿ ರಮ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆ ಬಗ್ಗೆ ರಮ್ಯಾ ಏನು ಹೇಳುತ್ತಾರೆ ಅವರ ಮುಂದಿನ ನಿರ್ಧಾರ ಏನು ಎನ್ನುವ ಕುತೂಹಲ ಮೂಡಿಸಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರೂ 2023ರಲ್ಲಿ ಹಸಮಣೆ ಏರುವುದು ಕನ್ಫರ್ಮ್ ಆಗಿದೆ. ಮದುವೆ ದಿನಾಂಕ ಮತ್ತು ಸ್ಥಳ ಸದ್ಯದಲ್ಲೇ ಬಹಿರಂಗ ಪಡಿಸುವ ಸಾಧ್ಯತೆ ಇದೆ.