ವಿವೇಕವಾರ್ತೆ : ಶಿಕ್ಷಣ ಸಚಿವ ಮಧು ಬಂಗಾರಪ್ಪರಿಂದ ಜೀವ ಬೆದರಿಕೆಯಿದೆ ಎಂದು ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಮಧು ಬಂಗಾರಪ್ಪ ಅವರ ಬೆಂಬಲಿಗರು ನಿರಂತರವಾಗಿ ಫೋನ್ ಕರೆ ಮಾಡಿ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದರು.
ನಿಮ್ಮ ಮನೆಗೆ ಬಂದು ಭಿಕ್ಷೆ ಬೇಡಿಲ್ಲ. ನಾನು ಶರಣ ಸಂಸ್ಕೃತಿಯಂತೆ ಮದುವೆ ಆಗಿದ್ದೇನೆ. ನನ್ನ ಪತ್ನಿಯನ್ನು ಕರೆದುಕೊಂಡು ನಿಮ್ಮ ಮನೆಗೆ ಬಂದಿಲ್ಲ. ಇವತ್ತು ಪೊಲೀಸ್ ಕಮಿಷನರ್’ರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ನಾವು ಬೆಳೆಸಿದ ಹೋರಾಟಗಾರರೇ ಇಂದು ನನಗೆ ಜೀವ ಬೆದರಿಕೆ ಹಾಕುವ ಕೆಲಸ ಪ್ರಾರಂಭಿಸಿದ್ದಾರೆ. ಯಾವುದೇ ಕಾರಣಕ್ಕೂ ಹೆದರುವುದಿಲ್ಲ ಜಗ್ಗುವುದಿಲ್ಲ.
ನನ್ನನ್ನು ಹೆದರಿಸಿ ಬೆದರಿಸಿ ಹೋರಾಟವನ್ನು ಹಿಂದಿಕ್ಕುವ ಷಡ್ಯಂತರ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ ಎಂದು ಸ್ವಾಮಿಜೀ ಹೇಳಿದರು