spot_img
spot_img
spot_img
spot_img
spot_img
spot_img

ವಕೀಲರ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ಬಂಧಿಸುವಂತೆ ಮನವಿ

Published on

spot_img

ವಿವೇಕವಾರ್ತೆ : ವಕೀಲರೊಬ್ಬರ ಮೇಲೆ ತಡರಾತ್ರಿ ನಡೆದ ಹಲ್ಲೆ ಖಂಡಿಸಿ ವಕೀಲರು ಪ್ರತಿಭಟನೆ ನಡೆಸಿ ಕೂಡಲೇ ಹಲ್ಲೆ ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿದರು.

ಬೀದರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಎಸ್‌ಪಿ ಅವರಿಗೆ ಮನವಿ ಸಲ್ಲಿಸಿ ಬಂಧಿಸುವಂತೆ ಒತ್ತಾಯಿಸಿದರು.

ಎರಡು ತಿಂಗಳ ಹಿಂದೆ ನಮ್ಮ ವಾಹನಕ್ಕೆ ಡಿಕ್ಕಿ ಹೊಡಿಸಿದ್ದೀಯಾ ಎಂದು ಖ್ಯಾತೆ ತೆಗೆದು ವಕೀಲ ಹನುಮಂತರಾವ ಮೇಲೆ ನಿನ್ನೆ ರಾತ್ರಿ 11 ಗಂಟೆಗೆ ಹಲ್ಲೆ ನಡೆಸಿದ್ದಾರೆ. ಜೀವ ಭಯದಿಂದ ವಕೀಲ ಹನುಮಂತರಾವ್ ತಪ್ಪಿಸಿಕೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಕುರಿತು ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ರು, ಪೊಲೀಸರು ಆರೋಪಿಗಳನ್ನ ಬಂಧಿಸದೇ ಸುಮ್ಮನಿದ್ದಾರೆ ಎಂದು ದೂರಿದ್ದಾರೆ.

ಹಲ್ಲೆ ಕೃತ್ಯ, ಹಲ್ಲ ನಡೆಸಿದ ಆರೋಪಿಗಳ ಮನೆ ಮುಂದೆ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದ್ರೂ ಆರೋಪಿಗಳನ್ನ ಬಂದಿಸುವಲ್ಲಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಆರೋಪಿಗಳನ್ನ ಬಂಧಿಸದೇ ಇದ್ದರೇ ಮುಂದಿನ ದಿನಗಳಲ್ಲಿ ಜಿಲ್ಲಾ ವಕೀಲರ ಸಂಘದಿಂದ ಉಗ್ರವಾದ ಹೋರಾಟ ನಡೆಸಲಾಗುವುದು. ಹಾಗಾಗಿ, ಕೂಡಲೇ ಆರೋಪಿಗಳನ್ನ ಬಂಧಿಸಿ ಎಂದು ಡಿಎಸ್‌ಪಿ ಶಿವನಗೌಡ ನಾಯಕ್‌ಗೆ ಮನವಿ ಸಲ್ಲಿಸಿದರು.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!