spot_img
spot_img
spot_img
spot_img
spot_img

T20 ತಂಡಕ್ಕೆ ಕೊಹ್ಲಿ, ರೋಹಿತ್ ಕಮ್ ಬ್ಯಾಕ್- ಇದು ಸೂಕ್ತ ನಿರ್ಧಾರವಾ!?

Published on

spot_img

ಅಫ್ಗಾನಿಸ್ತಾನ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಗೆ ಅನುಭವಿಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಅವಕಾಶ ಮಾಡಿರುವುದು ಇತ್ತೀಚಿನ ಒಂದು ನಿದರ್ಶನ.

2002ರ ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ಮುಖಭಂಗ ಅನುಭವಿಸಿದ ನಂತರ ಸುಮಾರು 14 ತಿಂಗಳ ಕಾಲ ಇವರಿಬ್ಬರು ತಂಡದಿಂದ ಹೊರಗಿದ್ದರು. ನಂತರ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ವಹಿಸಲಾಯಿತು. ಅವರು ಗಾಯಾಳಾದಾಗ, ಸೂರ್ಯಕುಮಾರ್ ಯಾದವ್ ಅವರಿಗೆ (ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು ಹೊರಗಡೆ ದಕ್ಷಿಣ ಆಫ್ರಿಕಾ ವಿರುದ್ಧ) ತಂಡದ ನೇತೃತ್ವ ವಹಿಸಲಾಯಿತು.

ಈಗ ಹಾರ್ದಿಕ್ ಮತ್ತು ಸೂರ್ಯ ಅವರಿಬ್ಬರೂ ಗಾಯಾಳಾಗಿ ತಂಡಕ್ಕೆ ಲಭ್ಯರಿಲ್ಲ. ಋತುರಾಜ್ ಗಾಯಕವಾಡ ಅವರಿಗೆ ಬೆರಳಿನ ಗಾಯವಾಗಿದೆ. ಆದರೆ ಇತರ ಆಟಗಾರರಿದ್ದರೂ, ಈ ಇಬ್ಬರು ಏಕದಿನ ಮಾದರಿಯ ಅನುಭವಿಗಳನ್ನು ತಂಡಕ್ಕೆ ಮರಳಿ ಕರೆತರಲಾಗಿದೆ. ರೋಹಿತ್ ಮತ್ತು ಕೊಹ್ಲಿ ಅವರಿಗೂ ಕೊನೆಯದಾಗಿ ಆಡಬೇಕೆಂಬ ಬಯಕೆಯಿರುವುದು ಸಹಜ. ಅಜಿತ್‌ ಅಗರಕರ್ ನೇತೃತ್ವದ ಆಯ್ಕೆ ಸಮಿತಿ ಅವರಿಗೆ ಅವಕಾಶ ನೀಡಿದೆ. ಈ ಸರಣಿಯಲ್ಲಿ ಮತ್ತು ಐಪಿಎಲ್‌ನಲ್ಲಿ ಗಳಿಸುವ ಯಶಸ್ಸಿನ ಮೇಲೆ ವಿಶ್ವಕಪ್‌ ತಂಡಕ್ಕೆ ಅವರ ಆಯ್ಕೆ ಅವಲಂಬಿಸಿದೆ. ಆದರೆ ಈ ಆಯ್ಕೆಯಿಂದ ಅವರಿಗೆ ಬಾಗಿಲು ಮುಚ್ಚಿಲ್ಲ ಎಂಬ ಸಂದೇಶವಂತೂ ರವಾನೆಯಾಗಿದೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಬೆಡ್ ರೂಂನಲ್ಲಿ ಅತ್ತಿಗೆಯ ಪ್ರಿಯಕರನನ್ನ ಹೊಡೆದು ಕೊಂದ ಮೈದುನ!

ವಿವೇಕವಾರ್ತೆ: ಪ್ರಿಯತಮೆಯ ಭೇಟಿ ಮಾಡಲು ಮನೆಗೆ ನುಗ್ಗಿದ ಪ್ರಿಯಕರನನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ...

ಮದ್ವೆಯಾದ 2 ವರ್ಷದಿಂದ ಸರಸಕ್ಕೆ ಒಪ್ಪದ ಗಂಡ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪತ್ನಿ

ವಿವೇಕವಾರ್ತೆ : ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್​ಐಆರ್​ ದಾಖಲಿಸಿರುವ ವಿಚಿತ್ರ...

ಹೈಕೋರ್ಟ್​ನಿಂದ ಎಸಿಬಿ ರದ್ದು: ಎಸಿಬಿಯಲ್ಲಿದ್ದ ಹುದ್ದೆ ಲೋಕಾಯುಕ್ತ & ಪೊಲೀಸ್ ಇಲಾಖೆಗಳಿಗೆ ವರ್ಗಾವಣೆ!

ಬೆಂಗಳೂರು: ಹೈಕೋರ್ಟ್​ನಿಂದ   ಎಸಿಬಿ ರದ್ದು ಹಿನ್ನೆಲೆಯಲ್ಲಿ ಎಸಿಬಿಯಲ್ಲಿದ್ದ ಹುದ್ದೆಗಳನ್ನ ಲೋಕಾಯುಕ್ತ ಸಂಸ್ಥೆ ಮತ್ತು ಪೊಲೀಸ್ ಇಲಾಖೆಗಳಿಗೆ ಸರ್ಕಾರ ವರ್ಗಾವಣೆ ಮಾಡಿದೆ. ಎಸಿಬಿಯಲ್ಲಿದ್ದ ಒಟ್ಟು...

ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 2.67 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?

Pm Awas Yojana Subsidy:ನಮಸ್ಕಾರ ಸ್ನೇಹಿತರೇ ,ಇದೀಗ ನಮ್ಮ ದೇಶದಲ್ಲಿ ಜನರ ಸ್ವಂತ ಮನೆ ನಿರ್ಮಾಣದ ಕನಸಿಗೆ ಕೇಂದ್ರ...
error: Content is protected !!