ತಾಳಿಯ ಬಗ್ಗೆ ನಿಮಗೆಷ್ಟು ಗೊತ್ತು? ಗಂಡನನ್ನು ಪ್ರೀತಿಸುವ ಪ್ರತಿ‌ಯೊಬ್ಬ ಹೆಂಡತಿಯರು ಓದಲೇಬೇಕಾದ ಸತ್ಯ ಸಂಗತಿ ಇದು

ಮಂಗಳಸೂತ್ರವು ಹಿಂದೂ ವಿವಾಹ ಸಮಾರಂಭದ ಸಮಯದಲ್ಲಿ ವರನು ವಧುವಿನ ಕುತ್ತಿಗೆಗೆ ಹಾಕುವ ಆಭರಣವಾಗಿದೆ. ಈ ಹಾರವು ಮಹಿಳೆಯ ವೈವಾಹಿಕ ಸ್ಥಿತಿಯನ್ನು ಸೂಚಿಸುತ್ತದೆ ಮತ್ತು ಇದು ಹಿಂದೂ ಸಂಸ್ಕೃತಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಕಾಲ್ಬೆರಳ ಉಂಗುರಗಳು, ಕುಂಕುಮ, ಬಳೆಗಳು ಮತ್ತು ಮೂಗುತಿ ಸೇರಿದಂತೆ ವೈವಾಹಿಕ ಸ್ಥಿತಿಯ ಇತರ ಚಿಹ್ನೆಗಳೊಂದಿಗೆ ಮಹಿಳೆ ಧರಿಸಬೇಕಾದ 5 ವಿಷಯಗಳಲ್ಲಿ ಮಂಗಳಸೂತ್ರವೂ ಒಂದಾಗಿದೆ.

ಹೊಸದಾಗಿ ಮದುವೆಯಾದ ಮಹಿಳೆಯ ಇತರ ಎಲ್ಲಾ ಆಭರಣಗಳಲ್ಲಿ ಮಂಗಳಸೂತ್ರವು ಅತ್ಯಂತ ಮಹತ್ವದ್ದಾಗಿದೆ. ಮಂಗಲ್ ಎಂದರೆ ಪವಿತ್ರ ಮತ್ತು ಸೂತ್ರ ಎಂದರೆ ದಾರ. ಆದ್ದರಿಂದ, ಮಂಗಳಸೂತ್ರವು ಹಿಂದೂ ಸಂಪ್ರದಾಯಗಳ ಪ್ರಕಾರ ಪ್ರತಿ ವಿವಾಹಿತ ಹುಡುಗಿ / ಮಹಿಳೆ ಧರಿಸಬೇಕಾದ ಪವಿತ್ರ ದಾರವಾಗಿದೆ. ಇದು ಮಂಗಳಕರವೆಂದು ಪರಿಗಣಿಸಲಾಗಿದೆ.

ಮಹಿಳೆಯು ಪವಿತ್ರ ದಾರವನ್ನು ಧರಿಸಿದಾಗ, ಅದು ಅವಳ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುತ್ತದೆ. ಅದೇ ರೀತಿಯಲ್ಲಿ, ಅವಳ ಪತಿ ಪಾಲುದಾರನ ಕಡೆಗೆ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳುತ್ತಾನೆ. ಎರಡು ಪರಸ್ಪರ ನಿಷ್ಠೆಯ ಪ್ರತಿಜ್ಞೆ.

ಮೂರು ಗಂಟಲ್ಲಿ ನಂಟಾಗೋ ಈ ಬಂಧ ಗಂಡ ಹೆಂಡತಿಯ ಜೀವನಕ್ಕೆ ಮೊದಲ ಹೆಜ್ಜೆ . ಗಂಡನ ಶ್ರೇಯಸ್ಸಿಗೆ ಶ್ರಮಿಸೋ ಹೆಂಡತಿ .ಹೆಂಡತಿಯ ಉನ್ನತಿಗೆ ಸಹಕರಿಸೋ ಗಂಡ ಅವನ ಶ್ರೇಯಸ್ಸಿನ ..ಯಶಸ್ಸಿನ .. ಆಯಸ್ಸು ವೃದ್ಧಿಯ ಸಂಕೇತವೇ ಈ ಮೂರು ಗಂಟಿನ ನಂಟಿನ ತಾಳಿ.

ಹಿಂದೂ ಸಂಪ್ರದಾಯದಲ್ಲಿ ಮದುವೆ ಸಂದರ್ಭದಲ್ಲಿ ವರ ವಧುವಿನ ಕೊರಳಿಗೆ ತಾಳಿ ಕಟ್ಟುವ ಶಾಸ್ತ್ರವಿರುತ್ತದೆ. ಯಾವಾಗ ವರ ವಧುವಿನ ಕೊರಳಿಗೆ ತಾಳಿ ಕಟ್ಟುತ್ತಾನೋ ಆವಾಗ ಅವರಿಬ್ಬರು ಗಂಡಹೆಂಡತಿಯಾಗುತ್ತಾರೆ. ವರ ವಧುವಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುತ್ತಾರೆ. ಎಲ್ಲರೂ ಅವರನ್ನು ಆಶೀರ್ವದಿಸುತ್ತಾರೆ. ಆದರೆ ಯಾರಿಗೂ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಯಾಕೆ ಹಾಕುತ್ತಾರೆಂದು ಎಂಬುದು ತಿಳಿದಿರುವುದಿಲ್ಲ.

ಮೂರು ಗಂಟುಗಳ ಬಂಧನದಿಂದ ಒಂದಾದ ಯುವಜೋಡಿ ಒಟ್ಟಾಗಿ ನೂರು ವರ್ಷಗಳ ಕಾಲ ಬಾಳ ಬೇಕೆಂದು ಪಂಡಿತರು, ಹಿರಿಯರು , ಸ್ನೇಹಿತರು ಆಶೀರ್ವದಿಸುತ್ತಾರೆ. ಹಾಗಾದ್ರೆ ಆ ಮೂರು ಗಂಟಿನ ಅರ್ಥವೇನೆಂಬುದು ಇಲ್ಲಿದೆ ನೋಡಿ.

ಧರ್ಮೇಚ – ಅಂದರೆ ಧರ್ಮವನ್ನು ನನ್ನ ಮಡದಿಯೊಂದಿಗೆ ಆಚರಿಸುತ್ತೇನೆ .
ಅರ್ಥೇಚ – ಅಂದರೆ ಧನವನ್ನು ನನ್ನ ಮಡದಿಯೊಂದಿಗೆ ಅನುಭವಿಸುತ್ತೇನೆ.
ಕಾಮೇಚ – ಅಂದರೆ ಕೋರಿಕೆಗಳನ್ನು ನನ್ನ ಮಡದಿಯೊಂದಿಗೆ ತೀರಿಸಿಕೊಳ್ಳುತ್ತೇನೆ.

ಇನ್ನು ಮದುವೆಯಾದ ಅದೆಷ್ಟೋ ಹೆಣ್ಣುಮಕ್ಕಳು ತಮ್ಮ ತಾಳಿಯನ್ನು ಅಲಂಕಾರಕ್ಕೆ ವಿನ್ಯಾಸಗೊಳಿಸಿ ಧರಿಸುವುದನ್ನು ಕಾಣುತ್ತೇವೆ ಆದ್ರೇ ಅದು ತಪ್ಪು ಯಾವತ್ತೆಯಾಗಲಿ ತಾಳಿ ಎಂಬುದು ಹೆಣ್ಣಿನ ಸ್ತನಗಳ ಮಧ್ಯಭಾಗ ಅಂದರೆ ಎದೆಗಳ ಮಧ್ಯಭಾಗಕ್ಕೆ ಅಳತೆಯಾಗಿರಬೇಕು ಕಾರಣ ಎದೆಯ ಭಾಗದಲ್ಲಿರುವ ಹೃದಯದ ಬಡಿತ ಕ್ರಮವಾಗಿರುವ ಜೊತೆಗೆ ಗಂಡನ ಆಯಸ್ಸನ್ನು ವೃದ್ಧಿಸುತ್ತದೆ ಹೃದಯ ಸಂಬಂಧಿ ಸಮಸ್ಯೆಗಳು ನಿಯಂತ್ರಣದಲ್ಲಿರುತ್ತವೆ .

error: Content is protected !!