ಬೆಳಗಾವಿ : ಜಿಲ್ಲೆಯ ಕುಲಗೋಡ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ ಆದಂತೆ ಮೆಲ್ನೋಟಕ್ಕೆ ಕಾಣುತ್ತಿದೆ, ಸಾರ್ವಜನಿಕರನ್ನ ರಕ್ಷಣೆ ಮಾಡಬೇಕಾಗಿದ್ದ ಪೋಲಿಸರೇ ಯುವಕರನ್ನ ಕಿಡ್ನಾಪ್ ಮಾಡಿದ್ದಾರೆ ಎಂದು ಖ್ಯಾತ ವಕೀಲರಾದ ಮಲ್ಲಿಕಾರ್ಜುನ ದುಂಡಪ್ಪಾ ಚೌಕಾಶಿ (MDC) ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಯಾವುದೋ ಒಂದು ಕೇಸ್ನ ಆರೋಪಿ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಆ ವ್ಯಕ್ತಿಯ ಸ್ನೇಹಿತರನ್ನ ಠಾಣೆಗೆ ತಂದು ಅನ್ನ ನೀರು ಕೊಡದೇ ಚಿತ್ರಹಿಂಸೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ನಮ್ಮ ವಾಹಿನಿಯಿಂದ ಠಾಣೆಯ ಪಿಎಸ್ಐ ಅವರಿಗೆ ಕರೆ ಮಾಡಿ ಆದ ಘಟನೆ ಕುರಿತು ಮಾಹಿತಿ ಕೇಳಿದಾಗ, ನಾವು ನೋಟಿಸ್ ಕೊಟ್ಟು ವಿಚಾರಣೆಗೆ ಕರೆ ತಂದಿದ್ವಿ ಈಗ ಬಿಟ್ಟು ಕಳುಹಿಸಿದ್ದೆವೆ ಎಂದು ಹೇಳಿದ್ದಾರೆ, ಆದರೆ ಈ ವಿಚಾರವನ್ನ ವಕೀಲರಾದ ಮಲ್ಲಿಕಾರ್ಜುನ ಅವರು ಅಲ್ಲಗಳೆದಿದ್ದಾರೆ, ಯಾವ ನೋಟಿಸ್ ಸಹ ನೀಡದೆ ಠಾಣೆಗೆ ಕರೆದುಕೊಂಡು ಹೊಗಿದ್ದಾರೆ ಎಂದು ಆರೋಪಿಸಿದ್ದಾರೆ,
ಕಾನೂನನ್ನ ರಕ್ಷಣೆ ಮಾಡಬೇಕಾಗಿದ್ದ ಪೋಲಿಸರೇ ಕಾನೂನು ಮುರಿದರೆ ಹೇಗೆ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ, ಈ ಪ್ರಕರಣಕ್ಕೆ ಮೇಲಾಧಿಕಾರಿಗಳು ಯಾವ ರೀತಿ ಚೇಕ್ಮೇಟ್ ಇಡ್ತಾರೆ ಅನ್ನೊದು ಕಾಯ್ದು ನೋಡಬೇಕು.