spot_img
spot_img
spot_img
spot_img
spot_img

ವಿಶ್ವವಿದ್ಯಾಲಯದಲ್ಲಿ ವಿಶ್ವ ಕುಷ್ಠರೋಗ ದಿನಾಚರಣೆ: ವಾಕಥಾನ

Published on

spot_img

ಕಲಬುರಗಿ: ವಿಶ್ವ ಕುಷ್ಠರೋಗ ದಿನಾಚರಣೆ 2024ರ ನಿಮಿತ್ತ ಕೆಬಿಎನ ವಿಶ್ವವಿದ್ಯಾನಿಲಯದ ಚರ್ಮರೋಗ ವಿಭಾಗವು ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹಯೋಗದಲ್ಲಿ ಮಂಗಳವಾರ ಉತ್ಸಾಹಭರಿತ ವಾಕಥಾನ ಆಯೋಜಿಸಿತ್ತು.

ವಾಕಥಾನ ಕೆಬಿಎನ ಆಸ್ಪತ್ರೆಯಿಂದ ಸರ್ದಾರ ವಲ್ಲಭಭಾಯಿ ಪಟೇಲ್ ಚೌಕವರೆಗೆ ಜರುಗಿತು.

ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಗುರುಪ್ರಸಾದ್ ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ತಿಳಿ ಹೇಳಿದರು. ಕುಷ್ಠರೋಗವನ್ನು ಗುಣಪಡಿಸಬಹುದಾಗಿದೆ, ಕುಷ್ಠರೋಗವು ನಿಕಟ ಸಂಪರ್ಕದ ಮೂಲಕ ಹರಡುವುದಿಲ್ಲ. ಕುಷ್ಠರೋಗದ ಚಿಕಿತ್ಸೆಯು ಸಂಪೂರ್ಣವಾಗಿ ಉಚಿತ ಮತ್ತು ಬಾಡು ಸುಲಭವಾಗಿ ಲಭ್ಯವಿದೆ. ಆರಂಭಿಕ ಪತ್ತೆಯು ಅಂಗವೈಕಲ್ಯಗಳನ್ನು ತಡೆಯುತ್ತದೆ. ದೇಹದ ಮೇಲೆ ಕಾಣುವಂತಹ ಬಿಳಿ ಮಚ್ಚೆ ಅಥವಾ ಸ್ಪರ್ಶಜ್ಞಾನದ ಸಮಸ್ಯೆ ಇದ್ದರೆ ಕೂಡಲೇ ವೈದ್ಯರನ್ನು ಕಾಣಬೇಕು. ಕುಷ್ಠರೋಗವು ಶಾಪ ಅಥವಾ ಪಾಪವಲ್ಲ. ಕುಷ್ಠರೋಗವು ಕೌಟುಂಬಿಕರೋಗವಲ್ಲ ಎಂದು ತಿಳಿ ಹೇಳಿದರು.

ಐಕ್ಯೂಎಸಿ ನಿರ್ದೇಶಕರಾದ ಡಾ. ಎಂ ಎ ಬಸೀರ್ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಕುಷ್ಠರೋಗದ ಜಾಗೃತಿಯ ಮಹತ್ವವನ್ನು ಒತ್ತಿಹೇಳುವ ಕರಪತ್ರಗಳನ್ನು ಸ್ಥಳೀಯ ಸಮುದಾಯಕ್ಕೆ ಹಂಚಲಾಯಿತು.

ಮೆಡಿಕಲ ಡೀನ ಡಾ ಸಿದ್ದೇಶ, ಐಕ್ಯೂಎಸಿ ನಿರ್ದೇಶಕ ಡಾ. ಎಂ ಎ ಬಸೀರ್, ಆಡಳಿತಾಧಿಕಾರಿ ಡಾ ರಾಧಿಕಾ, ನಾಡೊಜ ಡಾ. ಪಿ ಎಸ್ ಶಂಕರ್,ಕೆಬಿಎನ ಸುಪ್ರೀಟೆಂಡೆಂಟ ಡಾ ಸಿದ್ಧಾಲಿಂಗ ಚೇಂಜ್ಟಿ ಮತ್ತು ಇತರ ವಿವಿಧ ವಿಭಾಗಗಳ ಸಿಬ್ಬಂದಿಗಳು, ಸ್ನಾತಕೋತ್ತರ ಪದವೀಧರರು, ಇಂಟರ್ನಿಗಳು ಮತ್ತು ಸರಿಸುಮಾರು 100 ವಿದ್ಯಾರ್ಥಿಗಳು ವಾಕಥಾನ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಅಪ್ಪಿಕೊಳ್ಳೋದ್ರಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಬೆನಿಫಿಟ್ – ಇಲ್ಲಿದೆ ಮಾಹಿತಿ!

ಪ್ರೀತಿ, ಸ್ನೇಹ, ಭರವಸೆ ಮತ್ತು ಬೆಂಬಲವನ್ನು ವ್ಯಕ್ತಪಡಿಸುವ ದೇಹ ಭಾಷೆಯೇ ಅಪ್ಪುಗೆ. ಬನ್ನಿ ಇಂದು ಅಪ್ಪುಗೆಯ ಆರೋಗ್ಯ ಪ್ರಯೋಜನಗಳೇನು ಎಂದು...

ಬೆಡ್ ರೂಂನಲ್ಲಿ ಅತ್ತಿಗೆಯ ಪ್ರಿಯಕರನನ್ನ ಹೊಡೆದು ಕೊಂದ ಮೈದುನ!

ವಿವೇಕವಾರ್ತೆ: ಪ್ರಿಯತಮೆಯ ಭೇಟಿ ಮಾಡಲು ಮನೆಗೆ ನುಗ್ಗಿದ ಪ್ರಿಯಕರನನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ...

ಮದ್ವೆಯಾದ 2 ವರ್ಷದಿಂದ ಸರಸಕ್ಕೆ ಒಪ್ಪದ ಗಂಡ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪತ್ನಿ

ವಿವೇಕವಾರ್ತೆ : ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್​ಐಆರ್​ ದಾಖಲಿಸಿರುವ ವಿಚಿತ್ರ...

ಹೈಕೋರ್ಟ್​ನಿಂದ ಎಸಿಬಿ ರದ್ದು: ಎಸಿಬಿಯಲ್ಲಿದ್ದ ಹುದ್ದೆ ಲೋಕಾಯುಕ್ತ & ಪೊಲೀಸ್ ಇಲಾಖೆಗಳಿಗೆ ವರ್ಗಾವಣೆ!

ಬೆಂಗಳೂರು: ಹೈಕೋರ್ಟ್​ನಿಂದ   ಎಸಿಬಿ ರದ್ದು ಹಿನ್ನೆಲೆಯಲ್ಲಿ ಎಸಿಬಿಯಲ್ಲಿದ್ದ ಹುದ್ದೆಗಳನ್ನ ಲೋಕಾಯುಕ್ತ ಸಂಸ್ಥೆ ಮತ್ತು ಪೊಲೀಸ್ ಇಲಾಖೆಗಳಿಗೆ ಸರ್ಕಾರ ವರ್ಗಾವಣೆ ಮಾಡಿದೆ. ಎಸಿಬಿಯಲ್ಲಿದ್ದ ಒಟ್ಟು...
error: Content is protected !!