ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 12 ಕಿರಿಯ, 10 ಹಿರಿಯ ವಯಸ್ಕ ಅಭ್ಯರ್ಥಿಗಳಿವರು

2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಕೊನೆಯ ಕ್ಷಣದಲ್ಲಿ ಮತದಾರರ ಮನಗೆಲ್ಲಲು ಭಾರೀ ಕಸರತ್ತು ನಡೆಸುತ್ತಿದ್ದಾರೆ.

ಇದೇ ವೇಳೆ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ವಿಶ್ಲೇಷಣೆ ಮತ್ತು ಅಭ್ಯರ್ಥಿಗಳ ಇತರ ವಿವರಗಳ ವರದಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿದೆ.

ಅಗ್ರ 12 ಕಿರಿಯ ವಯಸ್ಸಿನ ಅಭ್ಯರ್ಥಿಗಳು

1) ಸುಭಾಷ್ ಎಸ್ – ರಾಜರಾಜೇಶ್ವರಿನಗರ (ಬೆಂಗಳೂರು) – ಪಕ್ಷೇತರ ಅಭ್ಯರ್ಥಿ – 25 ವರ್ಷ

2) ಪುಂಡಲೀಕ ಕೆಂಪಣ್ಣ ಕುಲ್ಲೂರು – ಗೋಕಾಕ್ (ಬೆಳಗಾವಿ) – ಪಕ್ಷೇತರ ಅಭ್ಯರ್ಥಿ – 25 ವರ್ಷ

3) ಪುಂಡಲೀಕ ಕೆಂಪಣ್ಣ ಕುಲ್ಲೂರು – ಹುಕ್ಕೇರಿ (ಬೆಳಗಾವಿ) – ಪಕ್ಷೇತರ ಅಭ್ಯರ್ಥಿ – 25 ವರ್ಷ

4) ಸದಾನಂದ ಮಗದುಂ – ಕಾಗವಾಡ (ಬೆಳಗಾವಿ) – ಪಕ್ಷೇತರ ಅಭ್ಯರ್ಥಿ – 25 ವರ್ಷ

5) ಗಣೇಶ್ವರ್ ಹೊಸಮನಿ – ಬೀದರ್ – ಪಕ್ಷೇತರ ಅಭ್ಯರ್ಥಿ – 25 ವರ್ಷ

6) ರವಿಚಂದ್ರ ತಮ್ಮಣ್ಣ ದೊಂಬಿ – ಬಬಲೇಶ್ವರ (ವಿಜಯಪುರ) – ರಾಷ್ಟ್ರೀಯ ಸಮಾಜ ಪಕ್ಷ – 25 ವರ್ಷ

7) ಸುನಿಲ್ ರಥೋಡ್ – ಬಬಲೇಶ್ವರ (ವಿಜಯಪುರ) – ಕರ್ನಾಟಕ ರಾಷ್ಟ್ರ ಪಕ್ಷ – 25 ವರ್ಷ

8) ರಾಕೇಶ್ ಇಂಗಳಗಿ – ವಿಜಯಪುರ ನಗರ (ಬಿಜಾಪುರ) – ಕರ್ನಾಟಕ ರಾಷ್ಟ್ರ ಪಕ್ಷ – 25 ವರ್ಷ

9) ಮಹಮ್ಮದ್ ಖಲೀಮ್ – ದಾವಣಗೆರೆ ದಕ್ಷಿಣ (ದಾವಣಗೆರೆ) – ಬಹುಜನ ಸಮಾಜವಾದಿ ಪಕ್ಷ – ಕರ್ನಾಟಕ ರಾಷ್ಟ್ರ ಪಕ್ಷ – 25 ವರ್ಷ

10) ಪ್ರಜ್ವಲ್ ಗೌಡ ಕೆಎಸ್ – ಮದ್ದೂರು (ಮಂಡ್ಯ) – ಪಕ್ಷೇತರ – 25 ವರ್ಷ

11) ಕಿರಣ್ ಹರಡೂರು – ಪರಿಯಾಟ್ಟಣ (ಮೈಸೂರು) – ಪಕ್ಷೇತರ – 25 ವರ್ಷ

12) ಭರತ್ ಎಸ್ – ತುರುವೇಕೆರೆ (ತುಮಕೂರು) – ಉತ್ತಮ ಪ್ರಜಾಕೀಯ ಪಕ್ಷ – 25 ವರ್ಷ

ಅಗ್ರ 10 ಹಿರಿಯ ವಯಸ್ಸಿನ ಅಭ್ಯರ್ಥಿಗಳು

1) ಶಾಮನೂರು ಶಿವಶಂಕರಪ್ಪ – ದಾವಣಗೆರೆ ದಕ್ಷಿಣ (ದಾವಣಗೆರೆ) – ಕಾಂಗ್ರೆಸ್ – 91 ವರ್ಷ

2) ಡಾ. ಎಬಿ ಮಾಲಕರೆಡ್ಡಿ – ಯಾದಗಿರಿ – ಜೆಡಿಎಸ್ – 87 ವರ್ಷ

3) ಈಶ್ವರಗೌಡ ಶಿವಶಂಕರಗೌಡ ಪಾಟೀಲ್ – ರಾಮದುರ್ಗ (ಬೆಳಗಾವಿ) – ಪಕ್ಷೇತರ – 84 ವರ್ಷ

4) ಚಕ್ರವರ್ತಿ ನಾಯಕ್ ಟಿ – ಗಂಗಾವತಿ (ಕೊಪ್ಪಳ) – ಪಕ್ಷೇತರ – 84 ವರ್ಷ

5) ಜಿ ಹಂಪಯ್ಯ ನಾಯಕ್ – ಮಾನ್ವಿ (ರಾಯಚೂರು) – ಕಾಂಗ್ರೆಸ್ – 84 ವರ್ಷ

6) ಕೆಎಂ ಫಯಾಜ್ ಅಹ್ಮದ್ – ಮಲ್ಲೇಶ್ವರಂ (ಬೆಂಗಳೂರು ಉತ್ತರ) – ಪಕ್ಷೇತರ – 82 ವರ್ಷ

7) ಎಂವೈ ಪಾಟೀಲ್ – ಅಫ್ಜಲ್‌ಪುರ (ಕಲಬುರಗಿ) – ಕಾಂಗ್ರೆಸ್ – 82 ವರ್ಷ

8) ರೇವು ನಾಯಕ್ ಬೆಳಮಗಿ – ಕಲಬುರಗಿ ದಕ್ಷಿಣ (ಕಲಬುರಗಿ) – ಕಾಂಗ್ರೆಸ್ – 82 ವರ್ಷ

9) ಶಿವಲಿಂಗಪ್ಪ ಕಿಣ್ಣೂರು – ಜೇವರ್ಗಿ (ಕಲಬುರಗಿ) – ರಾಷ್ಟ್ರೀಯ ಸಮಾಜ ಪಕ್ಷ – 82 ವರ್ಷ

10) ಡಿಸಿ ತಮ್ಮಣ್ಣ – ಮದ್ದೂರು (ಮಂಡ್ಯ) – ಜೆಡಿಎಸ್ – 80 ವರ್ಷ

2023ರ ವಯಸ್ಸುವಾರು ಅಭ್ಯರ್ಥಿಗಳ ಸಂಖ್ಯೆ

25-30 ವರ್ಷ – 160 ಅಭ್ಯರ್ಥಿಗಳು

31-40 ವರ್ಷ – 672 ಅಭ್ಯರ್ಥಿಗಳು

41-50 ವರ್ಷ – 788 ಅಭ್ಯರ್ಥಿಗಳು

51-60 ವರ್ಷ – 568 ಅಭ್ಯರ್ಥಿಗಳು

61-70 ವರ್ಷ – 320 ಅಭ್ಯರ್ಥಿಗಳು

71-80 ವರ್ಷ – 69 ಅಭ್ಯರ್ಥಿಗಳು

80 ವರ್ಷಕ್ಕಿಂತ ಅಧಿಕ – 9 ಅಭ್ಯರ್ಥಿಗಳು

error: Content is protected !!