SSLC, ಸೆಕೆಂಡ್ PU ಆದವರಿಗೆ ಭರ್ಜರಿ ಉದ್ಯೋಗಾವಕಾಶ ಇಲ್ಲಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಥಾಲಜಿ (NOP) ನೇಮಕಾತಿಗೆ ಮುಂದಾಗಿದೆ. ಒಟ್ಟು 19 ಹುದ್ದೆಗಳು ಖಾಲಿ ಇದ್ದು ಅರ್ಜಿ ಆಹ್ವಾನಿಸಲಾಗಿದೆ.
16 ಜನವರಿ 2023ರೊಳಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು. ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಂಸ್ಥೆ | ICMR NIP Recruitment 2022-23 | ಒಟ್ಟು ಹುದ್ದೆ – 19 |
ಕಿರಿಯ ವೈದ್ಯಕೀಯ ಅಧಿಕಾರಿ | ವೇತನ 60,000/- | 3 ಹುದ್ದೆಗಳು ಖಾಲಿ ಇವೆ |
ಲ್ಯಾಬ್ ಟೆಕ್ನಿಷಿಯನ್ | ವೇತನ 18,000/- | 5 ಹುದ್ದೆಗಳು ಖಾಲಿ ಇವೆ |
ಆರೋಗ್ಯ ಸಹಾಯಕ | ವೇತನ 17,000/- | 6 ಹುದ್ದೆಗಳು ಖಾಲಿ ಇವೆ |
ಫೀಲ್ಡ್ ಅಸಿಸ್ಟೆಂಟ್ | ವೇತನ 17,000/- | 5 ಹುದ್ದೆಗಳು ಖಾಲಿ ಇವೆ |
ವಿದ್ಯಾರ್ಹತೆ/ ಅರ್ಹತೆ
1) ಕಿರಿಯ ವೈದ್ಯಕೀಯ ಅಧಿಕಾರಿ: ಸಮುದಾಯ ಆರೋಗ್ಯ ರಕ್ಷಣಾ ಸೆಟಪ್‌ನಲ್ಲಿ ಕೆಲಸ ಮಾಡಿದ ಅನುಭವ ಇರಬೇಕು. ಟಿಬಿ ಮತ್ತು ಎಕ್ಸ್-ರೇಗಳನ್ನು ಅರ್ಥೈಸಲು ಸಾಧ್ಯವಾಗುತ್ತದೆ.
1) ಕಿರಿಯ ವೈದ್ಯಕೀಯ ಅಧಿಕಾರಿ: ಸಮುದಾಯ ಆರೋಗ್ಯ ರಕ್ಷಣಾ ಸೆಟಪ್‌ನಲ್ಲಿ ಕೆಲಸ ಮಾಡಿದ ಅನುಭವ ಇರಬೇಕು. ಟಿಬಿ ಮತ್ತು ಎಕ್ಸ್-ರೇಗಳನ್ನು ಅರ್ಥೈಸಲು ಸಾಧ್ಯವಾಗುತ್ತದೆ.
2) ಲ್ಯಾಬ್ ಟೆಕ್ನಿಷಿಯನ್: ವೈದ್ಯಕೀಯ ಲ್ಯಾಬ್ ಟೆಕ್ನಾಲಜಿಯಲ್ಲಿ ಎರಡು ವರ್ಷಗಳ ಡಿಪ್ಲೊಮಾ ಜೊತೆಗೆ 12 ನೇ ತೇರ್ಗಡೆ. ಎರಡು ವರ್ಷಗಳ ಅನುಭವವೂ ಅಗತ್ಯ.
3) ಆರೋಗ್ಯ ಸಹಾಯಕರು: 10ನೇ ತರಗತಿ ತೇರ್ಗಡೆಯಾಗಿರಬೇಕು. ಅಲ್ಲದೆ, ಸಂಬಂಧಿತ ಕ್ಷೇತ್ರದಲ್ಲಿ ಐದು ವರ್ಷಗಳ ಕೆಲಸದ ಅನುಭವ ಅಥವಾ ಐಟಿಐ ಮಾಡಿರಬೇಕು.
4) ಫೀಲ್ಡ್ ಅಸಿಸ್ಟೆಂಟ್: 10 ನೇ ಕ್ಲಾಸ್ ಪಾಸ್ ಆಗಿರಬೇಕು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16 ಜನವರಿ 2023
ಅಭ್ಯರ್ಥಿಗಳು ಇದನ್ನು ಮರೆಯಬಾರದು
ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ. ಅರ್ಜಿಯಲ್ಲಿ ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿ. ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ. ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.