ಜ. 8ಕ್ಕೆ ರಾಕಿಂಗ್ ‌ಸ್ಟಾರ್ ಫ್ಯಾನ್ಸ್​ಗೆ ಕಾದಿದೆ ಬಿಗ್ ಸರ್​ಪ್ರೈಸ್

ಸ್ಯಾಂಡಲ್​ವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲದಲ್ಲಿದೆ. ಯಶ್ 19ನೇ ಸಿನಿಮಾದ ಕುರಿತು ನಾನಾ ಸುದ್ದಿಗಳು ಹರಿದಾಡುತ್ತಲೇ ಇವೆ. ಯಶ್ 19ನೇ ಚಿತ್ರದ ನಿರ್ದೇಶನ ಯಾರು ಮಾಡುತ್ತಾರೆ, ಸಿನಿಮಾ ಯಾವಾಗ ಶುರುವಾಗಲಿದೆ ಎನ್ನುವ ಬಗ್ಗೆ ಹಲವು ಸುದ್ದಿಗಳು ಹಬ್ಬಿವೆ.

ಯಶ್ ನಟನೆಯ ಮುಂದಿನ ಸಿನಿಮಾವನ್ನನು ಕೆವಿಎನ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಲಿದೆ ಎಂಬ ಸುದ್ದಿ ಬಹುದಿನಗಳಿಂದ ಹರಿದಾಡುತ್ತಿದೆ. ಇದರ ಜೊತೆಗೆ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಕೂಡ ಇದೆ. ಇದಕ್ಕೀಗ ಮತ್ತಷ್ಟು ಪುಷ್ಠಿ ಸಿಕ್ಕಿದೆ.

ಇಂದು ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ನರ್ತನ್ ಅವರ ಹುಟ್ಟುಹಬ್ಬ. ಇವರ ಜನ್ಮದಿನಕ್ಕೆ ಕೆವಿಎನ್ ಪ್ರೊಡಕ್ಷನ್ ಹೌಸ್ ತಮ್ಮ ಸೋಸಿಯಲ್ ‌ಮೀಡಿಯಾ ಪೇಜ್​ನಲ್ಲಿ ನರ್ತನ್​ಗೆ ಕೆವಿನ್ ವಿಶ್ ಮಾಡಿದೆ. ಇದರಲ್ಲಿ ನಮ್ಮ ಡೈರೆಕ್ಟರ್ ಎಂದು ಬರೆದಿರುವುದು ಕುತೂಹಲ ಕೆರಳಿಸಿದೆ. ಈ ಮೂಲಕ ಯಶ್ 19 ಬಗ್ಗೆ ಚಿಕ್ಕ ಸುಳಿವು ನೀಡಿರುವ ಕೆವಿಎನ್ ಜನವರಿ 8 ಕ್ಕೆ ಯಶ್ ಹುಟ್ಟುಹಬ್ಬದ ದಿನ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶಿವರಾಜ್​ ಕುಮಾರ್ ಹಾಗೂ ಶ್ರೀಮುರಳಿ ನಟನೆಯ ‘ಮಫ್ತಿ’ ಸಿನಿಮಾ ನಿರ್ದೇಶನ ಮಾಡುವ ಮೂಲಕ ನರ್ತನ್ ಅವರು ಸಾಕಷ್ಟು ಗಮನ ಸೆಳೆದರು. ಅವರಿಗೆ ಈ ಚಿತ್ರ ಸಾಕಷ್ಟು ಖ್ಯಾತಿ ನೀಡಿತು. ಈಗ ಅವರು ನಿರ್ದೇಶನ ಮಾಡಲಿರುವ ಮುಂದಿನ ಚಿತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿದೆ.

error: Content is protected !!