ವಿವೇಕವಾರ್ತೆ: ಶಸ್ತ್ರಸಜ್ಜಿತರಾಗಿ ಇಬ್ಬರು ಉಗ್ರರು ತೆರಳುತ್ತಿದ್ದ ಕಾರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಇಸ್ರೇಲ್ ಪೊಲೀಸರು (Isreal Police) ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹಾಲಿವುಡ್ (Hollywood) ಆಕ್ಷನ್ ಥ್ರಿಲ್ಲರ್‌ನಂತಿರುವ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.
ಯುದ್ಧಪೀಡಿತ ಇಸ್ರೇಲ್‌ನಲ್ಲಿ ಉಗ್ರರ ಅಟ್ಟಹಾಸ ಮಿತಿಮೀರಿದೆ. ಶಸ್ತ್ರಧಾರಿ ಉಗ್ರರು, ಜನರನ್ನು ಕಾರಿನಲ್ಲಿ ಹೊತ್ತೊಯ್ಯುತ್ತಿದ್ದರು. ಈ ವೇಳೆ ಉಗ್ರರನ್ನು ಬೆನ್ನಟ್ಟಿದ ಇಸ್ರೇಲ್ ಪೊಲೀಸ್ ಬೈಕ್ ಚಲಾಯಿಸುತ್ತಲೇ ಉಗ್ರರ ಮೇಲೆ ಗುಂಡು ಹಾರಿಸಿದ್ದಾರೆ. ವೇಗವಾಗಿ ಹೋಗುತ್ತಿದ್ದ ಕಾರು ಕೊನೆಗೆ ರಸ್ತೆಯಲ್ಲಿ ನಿಂತಿದೆ. ಈ ವೇಳೆ ಮತ್ತೆ ಇಸ್ರೇಲ್ ಪೊಲೀಸರು ಕಾರಿನಲ್ಲಿದ್ದ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಇಬ್ಬರು ಉಗ್ರರು ಹತರಾಗಿದ್ದಾರೆ.
ಗಾಜಾ (Gaza) ಸಮೀಪದ ನಗರದ ನೆಟ್‌ವಿಯೋಟ್‌ನ ಹೊರಗೆ ನಡೆದ ಗುಂಡಿನ ಚಕಮಕಿಯಲ್ಲಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಹಾಲಿವುಡ್ ಸಿನಿಮಾಗಳ ಸಾಹಸ ದೃಶ್ಯಗಳನ್ನು ಮೀರಿಸುವಂತಿದೆ ಈ ದೃಶ್ಯ. ಇದನ್ನು ಇಸ್ರೇಲ್ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಪೊಲೀಸ್ ಮತ್ತು ಗಡಿ ಪೊಲೀಸ್ ಅಧಿಕಾರಿಗಳು ಶನಿವಾರ ನೆಟಿವೋಟ್‌ನ ಹೊರಗೆ ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ವೀರೋಚಿತವಾಗಿ ಸದೆಬಡಿದಿದ್ದಾರೆ. ನಮ್ಮ ನಾಗರಿಕರನ್ನು ಭಯೋತ್ಪಾದನೆಯಿಂದ ರಕ್ಷಿಸಲು ನಾವು ಮುಂಚೂಣಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಪೊಲೀಸರು ಬರೆದುಕೊಂಡಿದ್ದಾರೆ. ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
Related Content
ಚಲಿಸುತ್ತಿದ್ದ ಕಾರಿನ ಮೇಲೆ ಪೊಲೀಸರು ಮೊದಲು ಗುಂಡಿನ ದಾಳಿ ನಡೆಸುತ್ತಾರೆ. ಇಸ್ರೇಲ್ ಪೊಲೀಸ್‌ವೊಬ್ಬರು ಬೈಕ್ ಚಲಾಯಿಸುತ್ತಲೇ ಹಾರಿನೆಡೆಗೆ ಗುಂಡು ಹಾರಿಸುತ್ತಾರೆ. ಇವರ ಪಕ್ಕದಲ್ಲಿ ಪೊಲೀಸರ ಕಾರು ಸಹ ಉಗ್ರರ ಕಾರನ್ನು ಚೇಸ್ ಮಾಡುತ್ತಿರುತ್ತದೆ. ಗುಂಡಿನ ದಾಳಿಗೆ ಸಿಲುಕಿ ಉಗ್ರರ ಕಾರು ರಸ್ತೆ ಬದಿಯಲ್ಲಿ ನಿಲ್ಲುತ್ತದೆ. ಆಗ ತಕ್ಷಣ ಅಲರ್ಟ್ ಆಗಿ ಪೊಲೀಸರು, ಶಸ್ತ್ರಧಾರಿಗಳ ಕಾರಿನ ಬಳಿ ಬಂದು ಗುಂಡಿನ ದಾಳಿ ನಡೆಸುತ್ತಾರೆ. ಶೂಟೌಟ್‌ನಲ್ಲಿ ಇಬ್ಬರು ಉಗ್ರರು ಹತ್ಯೆಯಾಗುತ್ತಾರೆ.
Police and Border Police officers heroically neutralized two armed terrorists outside of Netivot on Saturday. We will continue working on the front lines to defend our civilians from terror pic.twitter.com/PQk9KiiKoT
— Israel Police (@israelpolice) October 9, 2023
ಇಸ್ರೇಲಿ ಪೊಲೀಸರು ಮತ್ತು ಸೈನಿಕರು ದೇಶದ ದಕ್ಷಿಣ ಭಾಗದಲ್ಲಿ ನಾಗರಿಕರನ್ನು ಹತ್ಯೆಗೈಯುತ್ತಿರುವ ಮತ್ತು ಒತ್ತೆಯಾಳಾಗಿಸಿಕೊಂಡಿರುವ ಪ್ಯಾಲೇಸ್ಟಿನಿಯನ್ (Palestine) ಗುಂಪುಗಳ ವಿರುದ್ಧ ಹೋರಾಡುತ್ತಿದ್ದಾರೆ.