Israel Palestine War : ಇಸ್ರೇಲ್‌ನಲ್ಲಿ ಉಗ್ರರ ಅಟ್ಟಹಾಸ ; ಪ್ರತಿ ಮನೆ ಮನೆಗೆ ನುಗ್ಗಿ ಮಕ್ಕಳು, ಮಹಿಳೆಯರ ಹತ್ಯೆ ; ವಿಡಿಯೊ ವೈರಲ್.!

Published on

spot_img
spot_img

ವಿವೇಕವಾರ್ತೆ : ಕಳೆದ ಒಂಬತ್ತು ದಿನದಿಂದ ಪ್ರಾರಂಭವಾದ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರ ದಿನೇದಿನೆ ಜೋರಾಗುತ್ತಿದೆ. ಈ ನಡುವೆ ಇಸ್ರೇಲ್‌ಗೆ ನುಗ್ಗಿರುವ ಹಮಾಸ್‌ ಉಗ್ರರು ಮನೆ ಮನೆಗೆ ತೆರಳಿ ನಾಗರಿಕರನ್ನು ಹತ್ಯೆ ಮಾಡುತ್ತಿದ್ದಾರೆ. ಹತ್ಯೆ ಮಾಡುವ ಭೀಕರ ವಿಡಿಯೊ ಈಗ ವೈರಲ್‌ ಆಗಿದೆ.

 ಒಂದೆಡೆ, ಗಾಜಾ ನಗರದ ಮೇಲೆ ದಾಳಿ ಮಾಡುವ ಮೂಲಕ ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲು ಇಸ್ರೇಲ್‌ ಸೇನೆಯು ಗಾಜಾ ಗಡಿಯಲ್ಲಿ ಸಕಲ ರೀತಿಯಲ್ಲಿ ಸನ್ನದ್ಧವಾಗಿದ್ದು, ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು 10ನೇ ದಿನಕ್ಕೆ ಕಾಲಿಟ್ಟಿದೆ.

ಇಸ್ರೇಲ್ ಸೇನೆಯಿಂದ ಪ್ರಮುಖ ಕಮಾಂಡರ್‌ಗಳ ಹತ್ಯೆಯ ಬಳಿಕ ಕುತ್ಸಿತಗೊಂಡಿರುವ ಹಮಾಸ್‌ ಉಗ್ರರು ಇಸ್ರೇಲ್‌ನಲ್ಲಿ ಮನೆ ಮನೆಗೆ ನುಗ್ಗಿ ಜನರನ್ನು ಹತ್ಯೆ ಮಾಡುತ್ತಿದ್ದಾರೆ.

ಅಷ್ಟೆಅಲ್ಲದೇ ಹಮಾಸ್‌ ಉಗ್ರರು ಇಸ್ರೇಲ್‌ ಗಡಿಯೊಳಗೆ ನುಗ್ಗಿ, ಬೈಕ್‌ಗಳ ಮೇಲೆ ಎಲ್ಲೆಂದರಲ್ಲಿ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಮನೆಯಲ್ಲಿರುವ ಮಕ್ಕಳು, ಹೆಣ್ಣುಮಕ್ಕಳು ಹಾಗು ಹಿರಿಯರು ಎಂದು ಸಹ ನೋಡದೆ ಎಲ್ಲರ ಮೇಲೂ ಗುಂಡು ಹಾರಿಸಿದ್ದಾರೆ.

ಉಗ್ರರು ದಾಳಿ ಮಾಡಿದ ಮನೆಯಲ್ಲಿ ಒಬ್ಬರೂ ಜೀವಂತವಾಗಿ ಉಳಿದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ಬಳಿಕವೇ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗೆ ಮನೆ ಮನೆಗೆ ದಾಳಿ ಮಾಡಿ, ಗುಂಡು ಹಾರಿಸಿದ ವಿಡಿಯೊವನ್ನು ಇಸ್ರೇಲ್‌ ಡಿಫೆನ್ಸ್‌ ಫೋರ್ಸಸ್‌ “X” ನಲ್ಲಿ ಹಂಚಿಕೊಂಡಿದೆ.

ಹಮಾಸ್‌ ಉಗ್ರರ ನೆಲೆವೀಡಾಗಿರುವ ಗಾಜಾ ನಗರದ ಮೇಲೆ ಸಂಪೂರ್ಣವಾಗಿ ದಾಳಿ ನಡೆಸಲು ಇಸ್ರೇಲ್‌ ಸೇನೆ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಗಾಜಾ ನಗರ ಬಿಟ್ಟು ಹೊರಡಿ ಎಂದು ನಾಗರಿಕರಿಗೆ ಇಸ್ರೇಲ್‌ ನೀಡಿದ ಗಡುವು ಮುಗಿದಿದ್ದು, ಪೂರ್ಣ ಪ್ರಮಾಣದ ದಾಳಿ ನಡೆಸಲು ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳು, ಬಂಕರ್‌ಗಳು ಗಡಿಯಲ್ಲಿ ಸಜ್ಜಾಗಿವೆ.

ಯಾವ ಕ್ಷಣದಲ್ಲಿ ಬೇಕಾದರೂ ಗಾಜಾ ನಗರದ ಮೇಲೆ ಇಸ್ರೇಲ್‌ ಸೈನಿಕರು ದಾಳಿ ಆರಂಭಿಸಬಹುದು ಎಂದು ತಿಳಿದುಬಂದಿದೆ. (ಎಜೇನ್ಸಿಸ್)

https://twitter.com/i/status/1713685914575044809

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!