ಭಾರತೀಯ ವಿಜ್ಞಾನ ಸಂಸ್ಥೆಯುಹಿರಿಯ ಸಂಪಾದಕೀಯ ವ್ಯವಸ್ಥಾಪಕ ಮತ್ತು ಹಿರಿಯ ಸಂಪಾದಕೀಯ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 4 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನ ಅಧಿಕೃತ ವೆಬ್ಸೈಟ್ iisc.ac.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಹಿರಿಯ ಸಂಪಾದಕೀಯ ವ್ಯವಸ್ಥಾಪಕರು- 2 ಹುದ್ದೆಗಳು
ಹಿರಿಯ ಸಂಪಾದಕೀಯ ಸಹಾಯಕ- 2 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ- 4
ಉದ್ಯೋಗದ ಸ್ಥಳ:
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)- ಬೆಂಗಳೂರು
ಅರ್ಹತಾ ಮಾನದಂಡಗಳು:
ಸಂಪಾದಕೀಯ ವ್ಯವಸ್ಥಾಪಕ ಹುದ್ದೆ:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ/ಸ್ನಾತಕೋತ್ತರ ಪದವಿ ಅಥವಾ ಸಂಬಂಧಿತ ವಿಷಯದಲ್ಲಿ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಇದರ ಜೊತೆಗೆ ಪತ್ರಿಕೋದ್ಯಮ, ಬರವಣಿಗೆ/ವಿಜ್ಞಾನ ಬರವಣಿಗೆ, ಎಡಿಟಿಂಗ್ ಮತ್ತು ಕಾಪಿ ಎಡಿಟಿಂಗ್ನಲ್ಲಿ ಕನಿಷ್ಠ 06 ವರ್ಷಗಳ ಅನುಭವವನ್ನು ಹೊಂದಿರಬೇಕಾಗುತ್ತದೆ. ಹಾಗೆಯೇ ಸಾಮಾನ್ಯ ಜನರಿಗೆ ಸಂಬಂಧ ಪಟ್ಟಂತೆ ಕೆಲಗಳನ್ನು ಲೇಖನಗಳ ಬರೆದಿರಬೇಕು.
ಹಾಗೆಯೇ ಅತ್ಯುತ್ತಮ ಯೋಜನಾ ನಿರ್ವಹಣೆ, ಸಂವಹನ ಮತ್ತು ಸಂಘಟನಾ ಕೌಶಲ್ಯಗಳು, ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಪರಿಕರಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕಾಗುತ್ತದೆ.
ಮಾಸ್ಟರ್ ಆಫ್ ಸೈನ್ಸ್/ಫಿಲಾಸಫಿಯಾ ಡಾಕ್ಟರ್ (MS/Ph.D.) ಪದವಿಯನ್ನು ಮಾಡಿದವರೂ ಕೂಡ ಅರ್ಜಿ ಸಲ್ಲಿಸಬಹುದು.
ಹಿರಿಯ ಸಂಪಾದಕೀಯ ಸಹಾಯಕ ಹುದ್ದೆ:ಈ ಹುದ್ದೆಗಳಿಗೆ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.ಇದರ ಜೊತೆಗೆ ವೆಬ್ ಮತ್ತು ಪ್ರಿಂಟ್ ಪತ್ರಿಕೋದ್ಯಮದಲ್ಲಿ ವಿಜ್ಞಾನ ಬರವಣಿಗೆ ಅಥವಾ ಜರ್ನಲಿಸಂ, ಎಡಿಟಿಂಗ್ ಮತ್ತು ಕಾಪಿಡಿಟಿಂಗ್ ವಿಷಯಗಳಲ್ಲಿ ಕನಿಷ್ಠ 05 ವರ್ಷಗಳ ಅನುಭವವನ್ನು ಹೊಂದಿರಬೇಕಾಗುತ್ತದೆ.
ಅತ್ಯುತ್ತಮ ಲಿಖಿತ ಮತ್ತು ಮೌಖಿಕ ಸಂವಹನ ಕೌಶಲ್ಯಗಳು ಮತ್ತು ಸಂಘಟಣಾ ಕೌಶಲ್ಯಗಳನ್ನು ಹೊಂದಿರಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇನ್ನು ಮಾಸ್ಟರ್ ಆಫ್ ಸೈನ್ಸ್/ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್/ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್/ಫಿಲಾಸಫಿಯಾ ಡಾಕ್ಟರ್ (MS/MBA/PGDM/Ph.D.) ಪದವಿ ಜೊತೆಗೆ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ವಿಜ್ಞಾನ ಬರವಣಿಗೆ, ಎಡಿಟಿಂಗ್ ಮತ್ತು ಪಬ್ಲಿಷಿಂಗ್ನಲ್ಲಿ ಅನುಭವ ಹೊಂದಿರುವವರು ಕೂಡ ಅರ್ಜಿ ಸಲ್ಲಿಸಬಹುದು.
ಮಾಸಿಕ ವೇತನ:
ಸಂಪಾದಕೀಯ ವ್ಯವಸ್ಥಾಪಕ ಹುದ್ದೆ: ರೂ.70000 ರಿಂದ ರೂ.75000
ಹಿರಿಯ ಸಂಪಾದಕೀಯ ಸಹಾಯಕ: ರೂ.40000 ರಿಂದ ರೂ.45000
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿಲ್ಲ. ಹೀಗಾಗಿ ಹಿರಿಯ ಮತ್ತು ಅನುಭವಿ ಅಭ್ಯರ್ಥಿಗಳೂ ಕೂಡ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ಲೀಸ್ಟ್ ಮಾಡಲಾಗುತ್ತದೆ. ಇದಾದ ಬಳಿಕ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜನವರಿ 19, 2023.