ಸಾಧಕರೂರಿನಲ್ಲಿ ಅವರನ್ನೆ ಕಡೆಗಣಿಸಿ ಕಾರ್ಯಕ್ರಮ ಮಾಡುವುದು ತರವೆ?

WhatsApp Group Join Now
Telegram Group Join Now
Instagram Account Follow Now

ಬೆಳಗಾವಿ: ರಾಜ್ಯೋತ್ಸವ ಕಾರ್ಯಕ್ರಮ ಅಂದರೆ ಸಾಕು ನಮ್ಮ ಬೆಳಗಾವಿ ನಮ್ಮ ಬೆಳಗಾವಿ ಎಂಬ ಮೈನವಿರೆಳಿಸುವ ಹಾಡು ನೆಲಮೂಗಿಲುಗಳನ್ನ ಒಂದೂಗುಡಿಸುತ್ತದೆ. ಈ ಹಾಡು ಮಾಡಿದವನನ್ನು ಝಾಲಾಛ್ ಪೈಜಾ ಪುಂಡರು ಹಾನಿ ಮಾಡುವ ಉದ್ದೇಶದಿಂದ ಹುಡುಕದಿರುವ ಜಾಗಗಳಿಲ್ಲ. ಅಂಥ ಕಠಿಣ ಸಮಯದಲ್ಲಿ ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಬಚಾವಾದ ಯುವಕ ಈ ಅಶೋಕ ಭಜಂತ್ರಿ. ಇವರಿಗೆ ಸರ್ಕಾರ ಹಾಗೂ ಅನೇಕ ಸಂಘಸಂಸ್ಥೆಗಳು ಬೆಳಗಾವಿ ಕೋಗಿಲೆ. ತೇಜ ರತ್ನ, ವಿಶ್ವ ಜೋತ್ಯಿ, ರೇಣುಕ ಶ್ರೀ, ನಮ್ಮೂರ ಹೈದ, ಗೋಲ್ಡನ್ ಇಂಡಿಯನ್ ಆಪ ದಿ ಇಯರ್ ಸೇರಿದಂತೆ ಅನೇಕ ಪ್ರಶಸ್ತಿ ನೀಡಿ ಗೌರವಿಸಿವೆ.

ಅಶೋಕ ಭಜಂತ್ರಿ ತಳ ಸಮುದಾಯದ ಬಡ ಕುಟುಂಬದ ಒಬ್ಬ ಯುವಕ ಆತನ ಕುಟುಂಬ ಶಹನಾಯಿ ನುಡಿಸುತ್ತಾ ತಮ್ಮ ಜೀವನ ನಡೆಸುತಿದ್ದರು. ಅಧುನಿಕತೆಯ ಭರಾಟೆಯಲ್ಲಿ ಅಂತಹ ಬಡ ಕಲಾವಿದರನ್ನ ಕರೆಯಿಸುವುದು ಬಿಟ್ಟು ಅಧುನಿಕ ಸಂಗೀತ ವಾದ್ಯಗಳತ್ತ ಹೊರಳಿ ಅವರನ್ನು ಕರೆಸುವುದನ್ನು ನಿಲ್ಲಿಸಿದೆವು. ಯಾವ ಶಹನಾಯಿಯ ಮಧುರ ಸಂಗೀತದಡಿಯಲ್ಲಿ ನಮ್ಮ ಅಪ್ಪ ಅಜ್ಜ ಮುತ್ತಜ್ಜ ತಮ್ಮ ಮದುವೆ ಸೇರಿದಂತೆ ಊರಿನ ಪ್ರತಿ ಜಾತ್ರೆ ಹಬ್ಬ ಹರಿದಿನಿಗಳನ್ನ ಕಳೆಗಟ್ಟಿಸುವದರೊಂದಿಗೆ ಅವಿಸ್ಮರಣೀಯ ಕ್ಷಣ ಕಳೆಯುವುದಕ್ಕೆ ಕಾರಣರಾಗಿದ್ದವೊ ಅವರನ್ನೆ ಮರೆಯಾಗುವ ಅಶೋಕನಂತ ಯುವಕ ಶಹನಾಯಿ ಊಟ ಹಾಗೂ ಬದುಕಿನ ಬಂಡಿ ಎಳೆಯಲು ಸಾಧ್ಯವಿಲ್ಲ ಎಂದಾಯಿತೊ ಆಗಲೆ ಅಪ್ಪ ಹಾಕಿದ ಆಲದ ಮರ ಅಂತ ಶಹನಾಯಿಗೆ ಜೋತು ಬಿಳದೆ ಅಧುನಿಕ ಶ್ಯಾಕ್ಸೋಪೋನ್ ಹಿಡಿದು ಇಂದು ಸಂಗೀತ, ಚಿತ್ರರಂಗ, ಹಂಸಲೇಖ, ಸಾಧುಕೋಕಿಲ ಸೇರಿದಂತೆ ಅನೇಕಾನೇಕ ಸಂಗೀತ ನಿರ್ದೇಶಕರು ತಾವು ಸಂಗೀತ ನೀಡುವಾಗ ಸೋನು ಸಂಗೀತ ಅಕಾಡೆಮಿಯ ಅಶೋಕನೆ ಬೇಕು ಎಂಬ ಮಟ್ಟಕ್ಕೆ ಬೆಳೆದ. ಯಾವ ಅಡವಿ ಸಿದ್ಧನ ಅಡಿದಾವರೆಗಳಿಗೆ (ಮಠದ ಕಾರ್ಯಕ್ರಮ) ತಮ್ಮ ಕಲೆ ಅರ್ಪಿಸಿದ್ದರೊ ಅವರಿಂದಲೆ ಅದೆ ಅಂಕಲಗಿಯಲ್ಲಿ ನಡೆಯುವ ಕನ್ನಡ ಸಮ್ಮೇಳನದಲ್ಲಿ ಕಡೆಗಣಿಸಲ್ಪಟ್ಟರು.

ಇನ್ನು ಅಂಕಲಗಿ ಅಡವಿ ಸಿದ್ಧೇಶ್ವರರ ಕುರಿತಾದ ಪ್ರಥಮ ಧ್ವನಿ ಸುರುಳಿ ಹೊರತಂದ ರಾಷ್ಟ್ರ ಪ್ರಶಸ್ತಿ ವಿಜೇತ ಶರಣ ಶ್ರೀ ಸುರೇಶ ಉರುಬಿನಟ್ಚಿ ಅವರನ್ನು ಕೂಡ ಕಡೆಗಣಿಸಲಾಗಿದೆ.

ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಸ್ಥಳಿಯ ಕಲಾವಿದರನ್ನ ಕಡೆಗಣಿಸುವ ಅವಶ್ಯಕತೆಯಾದರು ಎನಿತ್ತು?

ಈ ಕಾರ್ಯಕ್ರಮ ಒಂದು ಸಾಹಿತ್ಯ ಕಾರ್ಯಕ್ರಮ ಎನ್ನುವುಕಿಂತ ರಾಜಕೀಯ ಕಾರ್ಯಕ್ರಮವಾಗಿದೆ. ಕಲೆ ಸಾಹಿತ್ಯ ಸಂಸ್ಕೃತಿಯ ಗಂಧಗಾಳಿ ತಿಳಿಯದವರನ್ನ ಸಾಧಕರೊಂದಿಗೆ ಸಾಧಕರ ಸೋಗಿನಲ್ಲಿ ಮೆರೆಸುವುದು ಅಕ್ಷಮ್ಯ. ಮುಂದೆ ಇಂತಹ ತಪ್ಪುಗಳಾಗಬಾರದು. ಈಗಲೂ ಕಾಲ ಮಿಂಚಿಲ್ಲ ಈ ಇಬ್ಬರು ಕಲಾವಿದರು ಸೇರಿದಂತೆ ಬಾಕಿ ಉಳಿದಿರುವ ಶ್ರೀಮಂತ ಸಂಸ್ಕೃತಿಯ ಕುಂದರನಾಡಿನ ಯಾವ ಯಾವ ಕಲಾವಿದರು ಉಳಿದಿದ್ದಾರೊ ಅವರನ್ನ ಗೌರವಯುತವಾಗಿ ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಿ ನಾಳೆಯ ದಿನಪತ್ರಿಕೆಗಳಲ್ಲಿ ಅವರ ಹೆಸರು ಅಚ್ಚಾಗುವಂತೆ ಆಯೋಜಕರು ನೋಡಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಎಡವಟ್ಟು ಆಗದಿರುವಂತೆ ನೋಡೆಕೊಳ್ಳುವುದುದು ಉತ್ತಮ.

ಶರಣ ಶ್ರೀ ಸುರೇಶ ಉರುಬಿನಟ್ಚಿ
ಶರಣ ಶ್ರೀ ಸುರೇಶ ಉರುಬಿನಟ್ಚಿ

 

ಮಲ್ಲಿಕಾರ್ಜುನ ದುಂಡಪ್ಪ ಚೌಕಶಿ
ವಕೀಲರು, ಬರಹಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು

WhatsApp Group Join Now
Telegram Group Join Now
Instagram Account Follow Now

Vivek Kudarimath, Chief Editor Vivekvarthe, Journalist, Video Editor, Content Writer, CEO Of VPG Digital Private Limited

Leave a Comment