spot_img
spot_img
spot_img
spot_img
spot_img

ಇಂತಹಾ ಅಮಾನುಷ ಕೊಲೆಗೆ ಭಾರತವೇ ಜವಾಬ್ದಾರಿ!!

Published on

spot_img

ಪಂಜಾಬ್ ನ ಜಲಂಧರ್ ಜಿಲ್ಲೆಯಲ್ಲಿ 1977 ರಲ್ಲಿ ಹುಟ್ಟಿದ್ದ ಹರ್ದೀಪ್ ಸಿಂಗ್ ನಿಜಾರ್ ಪ್ಲಂಬರ್ ಕೆಲಸ ಮಾಡುತ್ತಿದ್ದವನು, ಇವನು 1997ರಲ್ಲಿ ಕೆನಡಾಕ್ಕೆ ಹೋಗಿ ಅಲ್ಲಿದ್ದ ಖಾಲಿಸ್ತಾನಿ ಗುಂಪಿನ ಜೊತೆಗೆ ಚಾಲ್ತಿಯಾದನು ಅದೇ ಸಮಯದಲ್ಲಿ ಭಾರತಕ್ಕೂ ಹೋಗುತ್ತಾ ಬರುತ್ತಾ ಪಂಜಾಬಿನಲ್ಲಿ ಬಬ್ಬರ್ ಖಾಲ್ಸಾ ಇಂಟರ್ನಾಷನಲ್ ಸಿಖ್ ಸಪರೇಟಿಸ್ಟ್ ಗ್ರೂಪ್ (BKI) ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್ (KTF) ತಯಾರಿಸಿಕೊಂಡನು ,ಹ್ಞುಂ ಇಲ್ಲಿನವರೆಗೂ ಎಲ್ಲವೂ ನೆಟ್ಟಗೇ ಇತ್ತು. ಆಯಾ ರಾಜ್ಯದ ಪ್ರಜೆಗಳು ಅವರವರಿಗೆ ಬೇಕೆನಿಸಿದ ಹಕ್ಕೊತ್ತಾಯಗಳ ಹೋರಾಟ ಮಾಡಿಕೊಂಡು ಓಡಾಡುವುದು ಸಹಜ ಮತ್ತು ಅದೇ ಮಾನವೀಯ ಹಕ್ಕು ಕೂಡ ಎಂದು ಆ ರಾಜ್ಯ ಮತ್ತು ಭಾರತ ಸರ್ಕಾರ ಎಂಬ ದೇಶ ಎರಡೂ ಸುಮ್ಮನಿದ್ದವು.

ಆದರೂ ರೀಸರ್ಚ್ ಅಂಡ್ ಅನಾಲಿಸೀಸ್ ವಿಂಗ್ (RAW) ಎಂಬ ಬಾರತೀಯ ಗೂಢಚಾರ ಪಡೆ ಅಧಿಕಾರಿಗಳು ಹರ್ದೀಪ್ ಸಿಂಗ್ ನಿಜಾರ್ ನ ಬುಡ ಶೋಧಿಸಲು ಶುರು ಮಾಡಿದರು ಆಗ ಹಿಂದೂಗಳ ಮೇಲೆ ನಡೆದ ಆಕ್ರಮಣವೊಂದರಲ್ಲಿ ಈತ ಪರೋಕ್ಷ ರೂವಾರಿ ಎಂಬ ಮಾಹಿತಿಯೂ ದಕ್ಕಿತು ಆದರೆ ಒಂದು ದಿನ ಇದ್ದಕ್ಕಿದ್ದಂತೆ RAW ಸಂಗ್ರಹಿಸಿದ ಮಾಹಿತಿ ಏನೆಂದರೆ ಈ ಬಾಬರ್ ಖಾಲ್ಸಾ ಸಂಘಟನೆಗೆ ಫಂಡ್ ಬರುತ್ತಿದ್ದುದು ಪಾಕಿಸ್ತಾನದ ISI ನಿಂದ ಎಂಬ ವಿಚಾರ ತಿಳಿದದ್ದೇ ತಡ ಕೆಂಗಣ್ಣಾಗಿಸಿಕೊಂಡ RAWಮೊದಲಿಗೆ ಸಿಖ್ ಪ್ರತ್ಯೇಕತಾವಾದಿ ಯೊಬ್ಬನಿಗೆ ಪಾಕಿಸ್ತಾನದಿಂದ ಹಣ ಬರುತ್ತಿದೆ ಎಂದ ಮೇಲೆ ಈತನನ್ನು ಭಯೋತ್ಪಾದಕ ಎಂದು ಪರಿಗಣಿಸಲೇಬೇಕಾಯಿತು, ಈತನ ತಲೆಗೆ ಹತ್ತು ಲಕ್ಷ ರೂಪಾಯಿ ನಿಗದಿ ಮಾಡಿತ್ತು ಕೂಡ ನಂತರ ಈತನ ಫೈಲನ್ನು ಭಾರತ ಸರ್ಕಾರದ ಮುಂದಿಟ್ಟುಬಿಟ್ಟಿತು? ಆಗ ಭಾರತ ಸರ್ಕಾರ ಯಾವ ನಿರ್ಧಾರ ಕೈಗೊಂಡಿತ್ತು, ಕೈಗೊಂಡಿರಬಹುದು?

ಟಾರ್ಗೆಟ್ ಅಸಾಸಿನೇಸನ್ ?!!!
°°°°°
ಬೇರೊಂದು ದೇಶಕ್ಕೆ ನುಗ್ಗಿ ಅಲ್ಲಿ ಅಡಗಿ ಕೂತಿರುವ ಶತೃವನ್ನು ತರಿದು ಹಾಕುವುದು ಸಾಮಾನ್ಯವಾಗಿ ಇಸ್ರೇಲ್ ನ ಹವ್ಯಾಸ.ಈಗ ಥೇಟು ಇಂತಹದ್ದೇ ಆಟವನ್ನು ಭಾರತವು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರಯೋಗ ಮಾಡಿದೆ! ಆತನನ್ನು ಬೆನ್ನಟ್ಟುತ್ತಾ ಸಾಗಿದ್ದು ಒಂದೆರಡು ಊರುಗಳಲ್ಲ , ಭರ್ತಿ ಹನ್ನೊಂದೂವರೆ ಸಾವಿರ ಕಿಲೋಮೀಟರುಗಳು.

ವೆಸ್ಟ್ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಪ್ರಾಂತ್ಯದ ಸರ್ರೆ’ಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಆವರಣದ ಹೊರಗೆ ಜೂನ್ 18 ರ ರಾತ್ರಿ 8.30 ಕ್ಕೆ ಗುಂಡು ಹಾರಿಸಿದ ಶಬ್ದ ಕೂಡ ಬರದಂತೆ ಆತನನ್ನು ಕೊಲ್ಲಲಾಗಿತ್ತು, ಕೊಂದವರು ಮುಖ ಮುಚ್ಚಿಕೊಂಡಿದ್ದರಾದರೂ ಸರ್ವೈಲನ್ಸ್ ಕ್ಯಾಮರಾ ಪ್ರಕಾರ ಆ ಇಬ್ಬರು ಸೈಮಲ್ಟಿನ್ಯುಯಸ್ಲಿ ಅಲ್ಲಿ ನೆರೆದಿದ್ದ ಮತ್ತೂ ಹಲವು ಜನರ ಜೊತೆ ಸಂಪರ್ಕದಲ್ಲಿದ್ದರು, ರಿಪೋರ್ಟ್ ಪ್ರಕಾರ ಅಲ್ಲಿದ್ದ ಯಾರೂ ಕೂಡ ಲೋಕಲ್ ನೆಟ್ವರ್ಕ್ ಫೋನ್ ಸಂಪರ್ಕದಲ್ಲಿ ಇರಲಿಲ್ಲ ಆದರೆ ಯಾವುದೋ ಪ್ರತ್ಯೇಕ ತಾಂತ್ರಿಕ ಸಾಧನದೊಂದಿಗೆ ಎಲ್ಲರೂ ಒಬ್ಬರಿಗೊಬ್ಬರು ಸಂಪರ್ಕದಲ್ಲಿದ್ದರು ಹಾಗೂ ಕೊಲೆ ನಡೆದ ನಂತರ ಅವರು ತಪ್ಪಿಸಿಕೊಂಡು ಗುರುದ್ವಾರದ ಬಲದಿಂದ ಎದುರಿಗಿದ್ದ ಮುಖ್ಯ ರಸ್ತೆಯ ಕಡೆಗೆ ಸಾಗಿದ್ದಾರೆ.

ಸಾಮಾನ್ಯ ಜನರು ಯಾರೂ ಕೇವಲ 190 ಸೆಕೆಂಡಿನಲ್ಲಿ ಆ ಮುಖ್ಯ ರಸ್ತೆ ತಲುಪಲಾಗದು ಅದಕ್ಕೆಲ್ಲಾ ಫೋಟಗ್ರಫಿಕ್ ಮೆಮೋರಿ ಬೇಕಾಗುತ್ತದೆ ಅಂದರೆ ಟೋಟಲಿ ಪ್ಲಾನ್ಡ್ ಮರ್ಡರ್ ಅತ್ಯಂತ ಶುದ್ಧ ಪರಿಣಿತರಲ್ಲದೆ ಟಪಾಂಗುಚಿ ಕೊಲೆಗಾರು ಯಾರೂ ಇಷ್ಟು ನಿಖರ ಗುಣಮಟ್ಟದಲ್ಲಿ ಕೊಲ್ಲುವ ಪ್ರಯತ್ನ ಮಾಡಲಾರರು! ಇದಂತೂ ಅತ್ಯಂತ ಪರಿಣಿತರ ಕಸುಬು ಎಂದು ಕೆನಡಾ ಗೂಢಚಾರ ಪಡೆ ತಿಳಿಸಿದೆ. ಆಫ್ ಕೋರ್ಸ್ ಇದು ಭಾರತದ ಗೂಢಚಾರ ಪಡೆ RAW ಕೆಲಸವೇ ಆಗಿದೆ ಎಂದು ಪರೋಕ್ಷವಾಗಿ ಆರೋಪಿಸುತ್ತಿದೆ.

ಈಗ ಭಾರತ ಮಾಡಿದ್ದ ತಪ್ಪು!! ಎದ್ದು ಕಾಣುತ್ತಿದೆ, ಪಿಟಿ ಕೇಸು ಹಾಕಿ ಜಡಿಯಬೇಕೆಂದರೆ ಇದೊಂದು ಬೃಹತ್ ದೇಶ, ಸಕಲ ವೈಭವೋಪೇತ,ಸಮೃದ್ದ ಯುದ್ಧಾಯುಧಭೂಷಿತ ಸನ್ನದ್ಧ ಸೈನ್ಯ ಹೊಂದಿರುವ ಹಾಗೂ ಬಲಿಷ್ಟ ದೇಶ ಕೂಡ ಹಾಗಾಗಿ ಪಿಟಿ ಕೇಸು ಜಡಿಯಲಾಗದು ಜಗತ್ತಿನ ಬಲಾಢ್ಯರೆಂದೇ ಹೆಸರಾದ ರಷ್ಯಾ, ಅಮೇರಿಕಾ, ಚೀನಾ ದೇಶಗಳು ತೊಡೆ ಕಟ್ಟಿದ್ದರೆ ಹೇಗೆ ಪ್ರಪಂಚದ ಶೇ 44 ಭಾಗದ ವ್ಯವಹಾರ, ಜೀವನ ಏರುಪೇರಾಗುತ್ತದೆಯೋ ಅಷ್ಟೇ ತಾಕತ್ತಿನ ದೇಶ ಭಾರತ ಹೀಗಾಗಿ ನೇರವಾಗಿ ಯಾವತ್ತೂ ಹಣಿಯಲಾಗದು, ಆರೋಪ ಪೇರಿಸಲಾಗದು ಹಾಗೆ ಆರೋಪ ಹೇರಬೇಕೆಂದರೆ ಅಧಿಕೃತ ಸಾಕ್ಷ್ಯ ಬೇಕು? ಅದೆಲ್ಲಿದೆ? ಅಂತರಾಷ್ಟ್ರೀಯ ಮಟ್ಟದ ತರಬೇತಿ ಹೊಂದಿರುವ RAW ಕಮಾಂಡೋಗಳು ಸಾಕ್ಷ್ಯ ಬಿಟ್ಟು ಬರುವಷ್ಟು ದಡ್ಡರೇ?ಉಹ್ಞೂಂ, ಅಲ್ಲ!!

ಆದರೂ ಭಾರತ ಅಂತರಾಷ್ಟ್ರೀಯ ಕಾನೂನಿನ ಹದ್ದು ಮೀರಿದೆ, ಈ ಕೊಲೆಯನ್ನು ಭಾರತವು ತನ್ನ ಅಕೌಂಟಿಗೆ ಹಾಕಿಕೊಳ್ಳಬೇಕು. ಕ್ವಾಲಿಟಿ, ರಿಚ್, ಸೆಕ್ಯೂರ್ಡ್ ಎಂಬ ನಮ್ಮ ದೇಶಕ್ಕೆ ಪರೋಕ್ಷವಾಗಿ ಹೊಡೆತ ಕೊಟ್ಟಿದ್ದೀರಿ ಇದು ಭಾರತದ ಗೂಢಚಾರ ಪಡೆ RAW ಕೆಲಸ ಎಂದು ನಮಗೆ ಗೊತ್ತಿದೆ ಇಂತಹಾ ಅಮಾನುಷ ಕೊಲೆಗೆ ಭಾರತವೇ ಜವಾಬ್ದಾರಿ!! ಎಂದು ಕೆನಡಾ ಅಧ್ಯಕ್ಷರು ಲಬೋ ಲಬೋ ಹೊಯ್ದುಕೊಳ್ಳುತ್ತಿದ್ದಾರೆ.

ಇದು ಕೆನಡಾದಲ್ಲಿನ ಕಾದಂಬರಿ ಯಾದರೆ ಇತ್ತ ಪಾಕಿಸ್ತಾನದ ಲಾಹೋರಿನಲ್ಲಿ ವಾಕಿಂಗ್ ಹೋಗುತ್ತಿದ್ದ ಖಲಿಸ್ತಾನ್ ಕಮಾಂಡೋ ಫೋರ್ಸ್-ಪಂಜ್ವಾರ್ ಗುಂಪಿನ ಮುಖ್ಯಸ್ಥರಾಗಿದ್ದ ಪರಮ್‌ಜಿತ್ ಸಿಂಗ್ ಪಂಜ್ವಾರ್‌ನನ್ನುಕಳೆದ ಮೇ ತಿಂಗಳಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದರು.

ಕರಾಚಿಯ ಗುಲಿಸ್ಥಾನಿ ಇ ಜೌವಾರ್ ನ 16ನೇ ಬ್ಲಾಕ್ ನಲ್ಲಿ 46 ವರ್ಷದ ಶೇಕ್ ಜಿಯಾ ರ್ ರೆಹಮಾನ್ ಎಂಬಾತನನ್ನು 9mm ನ ಹನ್ನೊಂದು ಗುಂಡಿಕ್ಕಿ ಕೊಲ್ಲಲಾಗಿದೆ ಇದರ ಇನ್ವಸ್ಟಿಗೇಶನ್ ಮುಂದುವರೆಸಿರುವ ಪಾಕಿಸ್ತಾನವು ಈ ಮರ್ಡರಿಗೆ ಯುವತಿಯರನ್ನೂ ಬಳಸಲಾಗಿದೆ ಎಂಬ ಮಾಹಿತಿ ನೀಡಿದ್ದು ಇದು ನೇರವಾಗಿ ಭಾರತದ ಇಂಟಲಿಜೆನ್ಸ್ RAW ಕೈವಾಡ ಎಂದಿದೆ.

ಒಟ್ಟಿನಲ್ಲಿ ಭಾರತದ RAW ಬೇರೊಂದು ದೇಶಕ್ಕೆ ನುಗ್ಗಿ ಶತೃಗಳನ್ನು ಚಂಡಾಡಬಲ್ಲೆ ಎಂಬ ಸಂದೇಶ ಸ್ಪಷ್ಟವಾಗಿ ಕೊಟ್ಟಿದೆ. ಆದರೆ ಸದ್ಯದ ಅಂತರಾಷ್ಟ್ರೀಯ ವರದಿಗಳ ಪ್ರಕಾರ ಇವಿಷ್ಟೂ ಕೊಲೆಗೂ ನಮ್ಮ ದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ತಲೆ ಅಲ್ಲಾಡಿಸುತ್ತಲೇ ಇದೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಬೆಡ್ ರೂಂನಲ್ಲಿ ಅತ್ತಿಗೆಯ ಪ್ರಿಯಕರನನ್ನ ಹೊಡೆದು ಕೊಂದ ಮೈದುನ!

ವಿವೇಕವಾರ್ತೆ: ಪ್ರಿಯತಮೆಯ ಭೇಟಿ ಮಾಡಲು ಮನೆಗೆ ನುಗ್ಗಿದ ಪ್ರಿಯಕರನನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ...

ಮದ್ವೆಯಾದ 2 ವರ್ಷದಿಂದ ಸರಸಕ್ಕೆ ಒಪ್ಪದ ಗಂಡ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪತ್ನಿ

ವಿವೇಕವಾರ್ತೆ : ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್​ಐಆರ್​ ದಾಖಲಿಸಿರುವ ವಿಚಿತ್ರ...

ಹೈಕೋರ್ಟ್​ನಿಂದ ಎಸಿಬಿ ರದ್ದು: ಎಸಿಬಿಯಲ್ಲಿದ್ದ ಹುದ್ದೆ ಲೋಕಾಯುಕ್ತ & ಪೊಲೀಸ್ ಇಲಾಖೆಗಳಿಗೆ ವರ್ಗಾವಣೆ!

ಬೆಂಗಳೂರು: ಹೈಕೋರ್ಟ್​ನಿಂದ   ಎಸಿಬಿ ರದ್ದು ಹಿನ್ನೆಲೆಯಲ್ಲಿ ಎಸಿಬಿಯಲ್ಲಿದ್ದ ಹುದ್ದೆಗಳನ್ನ ಲೋಕಾಯುಕ್ತ ಸಂಸ್ಥೆ ಮತ್ತು ಪೊಲೀಸ್ ಇಲಾಖೆಗಳಿಗೆ ಸರ್ಕಾರ ವರ್ಗಾವಣೆ ಮಾಡಿದೆ. ಎಸಿಬಿಯಲ್ಲಿದ್ದ ಒಟ್ಟು...

ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 2.67 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?

Pm Awas Yojana Subsidy:ನಮಸ್ಕಾರ ಸ್ನೇಹಿತರೇ ,ಇದೀಗ ನಮ್ಮ ದೇಶದಲ್ಲಿ ಜನರ ಸ್ವಂತ ಮನೆ ನಿರ್ಮಾಣದ ಕನಸಿಗೆ ಕೇಂದ್ರ...
error: Content is protected !!