ವಿವೇಕವಾರ್ತೆ :ಮಳೆಗಾಗಿ ಬಜಗೂರು ಗ್ರಾಮಸ್ಥರು ವಿಶಿಷ್ಟ ಆಚರಣೆ ಮಾಡಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಬಜಗೂರು ಗ್ರಾಮದಲ್ಲಿ ಮಳೆಗಾಗಿ ಚಿಕ್ಕ ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ.
ನೂರಾರು ವರ್ಷಗಳಿಂದ ಇಲ್ಲಿನ ಜನ ಇದೇ ಪದ್ದತಿ ಆಚರಿಸಿಕೊಂಡು ಬರುತ್ತಿದ್ದಾರೆ. 8 ದಿನಗಳ ಕಾಲ ಕಳಸ ಪೂಜೆ, 9ನೇ ದಿನ ಚಂದಮಾಮನ ಪೂಜೆ ಮಾಡಿ ಈ ಆಚರಣೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಚಿಕ್ಕ ಮಕ್ಕಳಿಗೆ ಮದುವೆ ಮಾಡಿಸಿ ವಿಶಿಷ್ಟ ಆಚರಣೆ ಮಾಡಲಾಗಿದೆ.
ಇಬ್ಬರು ಬಾಲಕಿಯರಿಗೆ ಗಂಡು, ಹೆಣ್ಣಿನ ವೇಷ ಧರಿಸಿ ಆಚರಣೆ ಮಾಡಲಾಗುತ್ತದೆ. ಅದರಂತೆ ಮದುಮಗನಾಗಿ ಸಿಂಧು, ಮದುಮಗಳಾದ ಕೃತಿಕ ಮದುವೆ ಆಗಿದ್ದಾರೆ.