ಕೃಷ್ಣ ಅಲಿಯಾಸ್ ಹಾವಳಿ ಕೃಷ್ಣ ಗ್ಯಾಂಗ್ನ (Havali Krishna Gang) ಸಹಚರ ಅಜಯ್ ಅಲಿಯಾಸ್ ಮೆಂಟಲ್ ಕಾಲಿಗೆ ಗುಂಡೇಟು (Police Firing) ನೀಡಿ ಆತನನ್ನು ಬಂಧಿಸಲಾಗಿತ್ತು. ಸದ್ಯ ಆರೋಪಿ ಅಜಯ್ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.
ಅಜಯ್ ಅಲಿಯಾಸ್ ಮೆಂಟಲ್ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ (Bannerughatta, Anekal) ನಿವಾಸಿ. ಕುಖ್ಯಾತ ಬೈಕ್ ಕಳ್ಳನಾಗಿದ್ದ (Thieve) ಈತ ಪೊಲೀಸರಿಗೆ (Police) ಚಳ್ಳೆ ಹಣ್ಣು ತಿನ್ನಿಸಿ ಕೃತ್ಯ ನಡೆಸಿ ಪರಾರಿಯಾಗುತ್ತಿದ್ದನು. ಆದ್ರೆ ಭಾನುವಾರ ಅಜಯ್ ಗ್ರಹಚಾರ ಕೆಟ್ಟಿತ್ತು. ಆಟೋ ಚಾಲಕನನ್ನು ಕಿಡ್ನಾಪ್ ಮಾಡಿ (kidnap Case) ಒಂದು ಲಕ್ಷ ಹಣ ಪಡೆದಿದ್ದ ಪ್ರಕರಣದಲ್ಲಿ ಜಿಗಣಿ ಪೊಲೀಸರು (Jigani Police) ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಬಂಧನದ ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಅಜಯ್ ಮಾಡಿರುವ ಅಪರಾಧಗಳ ಸಂಖ್ಯೆ ಕಂಡು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ, ರಾಮನಗರ ತುಮಕೂರು ಸೇರಿದಂತೆ ಹದಿಮೂರು ಠಾಣೆಗಳಲ್ಲಿ ಅಜಯ್ ವಿರುದ್ಧ ಬರೋಬ್ಬರಿ 31 ಪ್ರಕರಣಗಳು ದಾಖಲಾಗಿದ್ದು, ಮೊಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದಾನೆ. ಇಷ್ಟಾದರೂ ಇವನ ಹೆಸರಿನಲ್ಲಿ ಯಾವುದೇ ಠಾಣೆಯಲ್ಲಿ ಈತ ರೌಡಿ ಶೀಟರ್ ಪಟ್ಟಿ ತೆರೆದಿಲ್ಲ ಎಂಬುದು ಅಚ್ಚರಿಯಾಗಿದೆ.
ಅಜಯ್ ವಿರುದ್ಧ 31 ಪ್ರಕರಣಗಳು ದಾಖಲು
ಇನ್ನೂ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ತುಮಕೂರು ವ್ಯಾಪ್ತಿಯಲ್ಲಿ ಕಿಡ್ನಾಪ್, ಡಕಾಯಿತಿ , ರಾಬರಿ ಮತ್ತು ಬೈಕ್ ಕಳವು ಸೇರಿದಂತೆ 31 ಪ್ರಕರಣಗಳು ಆರೋಪಿ ಅಜಯ್ ಮೇಲೆ ದಾಖಲಾಗಿವೆ.
ಗಾಂಜಾ ಮತ್ತಿನಲ್ಲಿ ಅಪರಾಧ ಕೃತ್ಯ
ಇಲ್ಲಿಯವರೆಗೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ, ಇವನು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದನ್ನು ಚಾಳಿಯಾಗಿಸಿಕೊಂಡಿದ್ದಾನೆ. ಜೊತೆಗೆ ಆರೋಪಿಗಳು ಗಾಂಜಾ ಮತ್ತಿನಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚಾಗುತ್ತಿತ್ತು. ಮುಂದಿನ ದಿನಗಳಲ್ಲಿ ಗಾಂಜಾ ಪೆಡ್ಲರ್ಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ .
ಒಬ್ಬ ಆರೋಪಿ ಬೆರಳೆಣಿಕೆಯಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ರೌಡಿ ಪಟ್ಟಿ ತೆರೆದು ಜೈಲಿಗಟ್ಟಲಾಗುತ್ತದೆ. ಆದ್ರೆ ಆರೋಪಿ ಅಜಯ್ 31 ವಿವಿಧ ತೀವ್ರ ಸ್ವರೂಪದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಇಲ್ಲಿಯವರೆಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ಪೊಲೀಸ್ ವ್ಯವಸ್ಥೆ ಬಗ್ಗೆ ಅನುಮಾನ ಮೂಡುತ್ತಿದೆ .