ಹೈನುಗಾರಿಕೆ ಇಂದು ನೆನ್ನೆಯದಲ್ಲ ಮನುಷ್ಯ ಭೂಮಿ ಉಳುಮೆ ಆರಂಭಿಸಿದ ದಿನದಿಂದಲೂ ಕೂಡ ಕೃಷಿ ಕೆಲಸಕ್ಕೆ ಅನುಕೂಲವಾಗಲಿ ಎಂದು ಹಸುಗಳನ್ನು ಸಾಕುತ್ತಾ, ಅದೇ ಹಸುವಿನಿಂದ ಹಾಲನ್ನು ಪಡೆದು ತನ್ನ ಆಹಾರದ ಕೊರತೆ ನೀಗಿಸಿಕೊಂಡಿದ್ದಾನೆ ಕಾಲ ಬದಲಾದಂತೆಲ್ಲ ಹಸುಗಳನ್ನು ಸಾಕುವುದರಲ್ಲೂ ಸಾಕಷ್ಟು ಮಾರ್ಪಟಾಗಿ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಎನ್ನುವುದು ಇಂದು ಬೃಹತ್ ಕ್ಷೇತ್ರವಾಗಿ ಬೆಳೆದಿದೆ.
ಹೈನುಗಾರಿಕೆಗೆ ಸರ್ಕಾರಗಳಿಂದ ಕೂಡ ಪ್ರೋತ್ಸಾಹ ಸಿಗುತ್ತಿದ್ದು ಕೃಷಿಗೆ ಪೂರಕವಾಗಿ ಮಾತ್ರವಲ್ಲದೆ ಹೈನುಗಾರಿಕೆಯೊಂದನ್ನೇ ಅವಲಂಬಿಸಿ ಯಶಸ್ವಿಯಾದ ಕುಟುಂಬಗಳ ಉದಾಹರಣೆಯೂ ನಮ್ಮ ಸುತ್ತಮುತ್ತಲೇ ಸಾಕಷ್ಟಿದೆ. ಈ ರೀತಿ ನೀವು ಕೂಡ ಹೈನುಗಾರಿಕೆ ಬಗ್ಗೆ ಆಸಕ್ತಿ ಹೊಂದಿದ್ದರೆ ನಮ್ಮ ದೇಶದ ಈ ಒಂದು ವಿಶೇಷ ತಳಿ ಹಸು ಸಾಕಿ ನಿಮ್ಮ ಬದುಕೇ ಬದಲಾಗುತ್ತದೆ.
ಇದನ್ನು ಓದಿ : ಹೃದಯಾಘಾತದ ಮುನ್ಸೂಚನೆ ಇದು, ಈ ಲಕ್ಷಣಗಳು ಕಂಡರೆ ನಿರ್ಲಕ್ಷಿಸಲೇಬೇಡಿ.!
ಥಾರ್ಪಾರ್ಕರ್ (Tharparkar Cow) ಎಂದು ಕರೆಯಲಾಗುವ ಈ ವಿಶೇಷ ತಳಿಯು ವರ್ಷಕ್ಕೆ 3000 ಲೀಟರ್ ಇಳುವರಿ ಕೊಡುತ್ತದೆ. ಈ ತಳಿಯು ಶುದ್ಧ ಭಾರತೀಯ ತಳಿಯ ಹಸುವಾಗಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಸಿಂದಿಯಾ ಭಾಗದಲ್ಲಿ ಯಥೇಚ್ಛವಾಗಿ ಈ ತಳಿ ಹಸು ಕಾಣಬಹುದಾಗಿದೆ.
ಆದರೆ ಮೂಲತಹ ರಾಜಸ್ಥಾನದ ಥಾರ್ ಮರುಭೂಮಿ ಭಾಗದಿಂದಲೇ ಬಂದ ಹಸು ಆದ್ದರಿಂದ ಹಸುವಿನ ಹೆಸರಿನೊಂದಿಗೆ ಥಾರ್ ಸೇರಿಕೊಂಡಿದೆ ಎನ್ನುವ ಪ್ರತೀತಿಯೂ ಇದೆ. ರಾಜಸ್ಥಾನದ ಜೈಪುರ್, ಜೋಧಾಪುರ್ ಗುಜರಾತ್ ನ ಕಚ್ಛ್ ಈ ತಳಿಯ ಸಂತಾನೋತ್ಪತ್ತಿ ಭಾಗ ಎನ್ನುತ್ತಾರೆ.
ಇಲ್ಲಿಂದ ದೇಶದ ಇನ್ನಿತರ ಭಾಗಗಳಿಗೆ ಕೂಡ ಕೊಂಡು ಹೋಗುತ್ತಾರೆ ರೈತರು ಆಯಾ ಪ್ರಾಂತ್ಯಗಳಿಗೆ ಅನುಗುಣವಾಗಿ ವೈಟ್ ಸಿಂಧಿ, ಗ್ರೇ ಸಿಂಧಿ, ಥಾರಿ ಎಂದು ಕರೆಯುತ್ತಾರೆ. ಮಧ್ಯಮ ಎತ್ತರದ ಶುದ್ಧ ಬಿಳಿ ಬಣ್ಣದಲ್ಲಿ, ಗ್ರೇ ಬಣ್ಣದಲ್ಲಿ, ಸ್ವಲ್ಪ ಕಂದು ಬಣ್ಣ ಮಿಶ್ರಿತ ಬಿಳಿ ಹಸುಗಳಾಗಿರುತ್ತವೆ.
ಇದನ್ನು ಓದಿ : ದಿನ ಭವಿಷ್ಯ: ಅನಿರೀಕ್ಷಿತವಾಗಿ ಬರುವ ಹಣ ನಿಮ್ಮ ಕಷ್ಟಗಳನ್ನು ಕಡಿಮೆ ಮಾಡುತ್ತೆ, ವಿವಾದಗಳು ಇತ್ಯರ್ಥವಾಗುತ್ತವೆ
ಮುಖ ಹಾಗೂ ಬಾಲದ ಕೊನೆಯಲ್ಲಿ ಬಣ್ಣ ಬಹಳ ಗಾಢವಾಗಿರುತ್ತದೆ, ತುಂಬಾ ಬಲಶಾಲಿಯಾದ ಹಸುವಾಗಿದೆ. ಮುಖ ಉದ್ದವಾಗಿದ್ದು ಕೊಂಬುಗಳು ಮಧ್ಯಮ ಹೈಟ್ ನಲ್ಲಿ ಇರುತ್ತವೆ. ಎಷ್ಟೇ ಹಸುವಿನ ನಡುವೆ ಇದ್ದರೂ ಈ ಥಾರ್ ಪಾರ್ಕರ್ ಹಸುವಿನ ತಳಿ ಕಂಡು ಹಿಡಿಯಬಹುದು.
ನಾಡು ಹಸು ಸಾಕಬೇಕು, ನಾಡು ಹಸು ಆಗಿದ್ದರೂ ಯಥೇಚ್ಛವಾಗಿ ಇಳುವರಿ ಕೊಡಬೇಕು ಎಂದು ಬಯಸುವವರು ಈ ತಳಿ ಸಾಕಬಹುದು. ಇದರ ಹಾಲು ಕೊಡುವ ಕಾಲ ಲ್ಯಾಟಿಸ್ ಅವಧಿ ಕೇವಲ ಮೂರೇ ತಿಂಗಳು, ಈ ಮೂರು ತಿಂಗಳಲ್ಲಿ ದಿನಕ್ಕೆ 10 ಲೀಟರ್ ನಂತೆ ಅತಿ ಹೆಚ್ಚು ಪೌಷ್ಟಿಕಾಂಶಯುಕ್ತ ಹಾಲನ್ನು ನೀಡುತ್ತದೆ.
ಇದನ್ನು ಓದಿ : ಲಿವ್ ಇನ್ ಗೆಳತಿಯ ಮೇಲೆ ರೇಪ್; 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ಕಿರಾತಕ
ಈ ತಳಿಯ ಹಸುವಿನ ಹಾಲಿನಲ್ಲಿ ಕೊಬ್ಬು ಹಾಗೂ ಒಮೆಗಾ ತ್ರೀ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಈ ಹಾಲಿಗೆ ವಿಪರೀತ ಬೇಡಿಕೆ ಇದೆ. ಈ ಹಸುವನ್ನು ಡಬಲ್ ಧಮಾಕ ಕೊಡುವ ಹಸು ಎಂದು ಕರೆಯುತ್ತಾರೆ ಯಾಕೆಂದರೆ ಇಳುವರಿಯೊಂದಿಗೆ ಜಮೀನು ಕೆಲಸಕ್ಕೂ ಸಾಗಣೆ ಕೆಲಸಕ್ಕೂ ಅನುಕೂಲಕ್ಕೆ ಬರುತ್ತದೆ.
ಹಾಲು ಪೋಷಕಾಂಶ ಯುಕ್ತವಾಗಿದೆ, ಒಂದು ಹಸು ಜೀವಿತಾವಧಿಯಲ್ಲಿ 15 ಕರುಗಳಿಗೆ ಜನ್ಮ ನೀಡುತ್ತದೆ. ಮತ್ತೊಂದು ಸಮಾಧಾನಕರ ಸಂಗತಿ ಏನೆಂದರೆ ಬೇಸಿಗೆ ಕಾಲ ಮಳೆಗಾಲ ಚಳಿಗಾಲ ಯಾವುದೇ ಕಾಲ ಬರಲಿ ಎಲ್ಲ ವಾತಾವರಣಕ್ಕೂ ಒಗ್ಗಿಕೊಳ್ಳುತ್ತವೆ.
ಇದನ್ನು ಓದಿ : ಚಿಕ್ಕೋಡಿ: ಕೃಷ್ಣಾ ನದಿ ಸೇತುವೆ ಮೇಲಿಂದ ಬಿದ್ದ ಕಾರು – ಮೂವರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ
ರೈತ ಏನಾದರೂ ಹೈನುಗಾರಿಕೆಯಿಂದ ಲಾಭ ಮಾಡಬೇಕು ಎಂದುಕೊಂಡಿದ್ದರೆ ಅಥವಾ ಮನೆಯಲ್ಲಿ ಮನೆ ಬಳಕೆಗೆ ಒಂದೆರಡು ಹಸು ಸಾಕಬೇಕು ಎಂದುಕೊಂಡಿದ್ದರೆ ಈ ಥಾರ್ಪಾರ್ಕರ್ ತಳಿ ಆರಿಸಿ ಎನ್ನುವುದು ನಮ್ಮ ಸಲಹೆ.