ಹಿಂದೂ ಧರ್ಮದಲ್ಲಿ, ಮಹಿಳೆಯರಿಗೆ ‘ದೇವತೆ’ ಎಂಬ ಸ್ಥಾನಮಾನವನ್ನ ನೀಡಲಾಗಿದ್ದು, ಅವರನ್ನ ಗೌರವಿಸೋದು ಎಲ್ಲಾ ಭಾರತೀಯರ ಧರ್ಮವಾಗಿದೆ. ಅದು ಕರ್ತವ್ಯವೂ ಹೌದು. ಆದ್ರೆ, ಇಂದಿನ ಸಮಾಜದಲ್ಲಿ, ಜನರು ಈ ಎಲ್ಲಾ ವಿಷಯಗಳನ್ನ ಅನುಸರಿಸುತ್ತಿಲ್ಲ.
ಈಗ ಕೆಲವು ಪುಂಡರು, ಹುಡುಗಿಯರು ಮತ್ತು ಮಹಿಳೆಯರ ಬಗ್ಗೆ ಅಸಹ್ಯವಾದ ಕಾಮೆಂಟ್’ಗಳನ್ನ ಮಾಡುವುದು ಫ್ಯಾಷನ್ ಆಗಿದೆ. ಅವ್ರು ಮಹಿಳೆಯರ ಮೇಲೆ ಅಶ್ಲೀಲ ಕಾಮೆಂಟ್ ಮತ್ತು ಅಶ್ಲೀಲ ಸನ್ನೆಗಳನ್ನು ಮಾಡದಿದ್ರೆ, ಅವ್ರಿಗೆ ಸಮಾಧಾನ ಆಗೋದಿಲ್ಲ. ಪೊಲೀಸ್ ಆಡಳಿತವು ಅಂತಹ ಜನರ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದು, ಅಗತ್ಯವಿದ್ದಾಗ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದೆ. ಆದ್ರೆ, ಇದರ ಹೊರತಾಗಿಯೂ, ಅವರು ಸುಧರಿಸದಿದ್ದಾಗ, ಅಂತಹ ಜನರಿಗೆ ಐಪಿಸಿ ಅಡಿಯಲ್ಲಿ ಕಠಿಣ ಶಿಕ್ಷೆಗೆ ಅವಕಾಶವಿದೆ ಅನ್ನೋದು ನಿಮಗೆ ತಿಳಿದಿದೆಯೇ.?
ವಾಸ್ತವವಾಗಿ, ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ (NCIB) ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದೆ ಮತ್ತು ಅದರ ಬಗ್ಗೆ ಪ್ರಮುಖ ಮಾಹಿತಿಯನ್ನ ನೀಡಿದೆ. ‘ ಚಮ್ಮಕ್ ಚಲ್ಲೋ, ಐಟಂ, ಮಾಟಗಾತಿ, ಚಾರಿತ್ರ್ಯಹೀನಳು ಅಂತೆಲ್ಲಾ ನಿಂದಿಸಿದ್ರೆ ಅಥವಾ ಅಶ್ಲೀಲ ಸನ್ನೆಗಳನ್ನ ತೋರಿಸಿ ಅವಮಾನಿಸಿದರೇ, ಐಪಿಸಿಯ ಸೆಕ್ಷನ್ 509 ರ ಅಡಿಯಲ್ಲಿ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದು’ ಎಂದು ಟ್ವೀಟ್’ನಲ್ಲಿ ತಿಳಿಸಲಾಗಿದೆ.
ಎನ್ಸಿಐಬಿಯ ಈ ಟ್ವೀಟ್ ನೋಡಿ.!
https://twitter.com/NCIBHQ/status/1603615122836312064?t=5waBQ-EVGsDxG7Ka6nLG1A&s=19