ವಿವೇಕವಾರ್ತೆ : ಮಕ್ಕಳು ತಮ್ಮ ಕಾರ್ಯ ಸಾಧನೆಗಾಗಿ ಎಷ್ಟು ಚುರುಕಾಗಿರುತ್ತಾರೆ ಎನ್ನುವುದಕ್ಕೆ ಈಗ ವೈರಲ್ ಆಗಿರೋ ಪತ್ರವೇ ಸಾಕ್ಷಿ.
ಬಾಲಕ ಸಿನೆಮಾ ನೋಡುವ ಆಸೆಯ ಹಿನ್ನಲೆಯಲ್ಲಿ ತನ್ನ ತಂದೆಗೆ ಪತ್ರವನ್ನು ಬರೆದಿದ್ದಾನೆ. ಸದ್ಯ ಆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಐರನ್ ಮ್ಯಾನ್ (Iron Man)” ಸಿನಿಮಾ ವೀಕ್ಷಿಸಲು ಅನುಮತಿ ನೀಡದೆ ಹೋದರೇ ನಿಮ್ಮ ಸಾವು ಖಚಿತ ಎಂದು ಎಂಟು ವರ್ಷದ ಬಾಲಕನೊಬ್ಬ ತನ್ನ ತಂದೆಗೆ ಬೆದರಿಕೆ ಪತ್ರವೊಂದನ್ನು ಬರೆದಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತ್ರವನ್ನು ಸ್ವತಃ ಬಾಲಕ ತನ್ನ ಕೈಬರಹದಲ್ಲೇ ಬರೆದಿದ್ದಾನೆ. “ಆತ್ಮೀಯ ಜೋಯಲ್ ಬೆರ್ರಿ, ನಿಮ್ಮ ಮಕ್ಕಳಿಗಾಗಿ ನೀವು ಇಂದು ರಾತ್ರಿ ಐರನ್ ಮ್ಯಾನ್ ಅನ್ನು ವೀಕ್ಷಿಸಲು ಅವಕಾಶ ನೀಡಬೇಕು. ಅನುಮತಿ ನೀಡದೇ ಹೋದರೇ ನಿಮ್ಮ ಸಾವು ಖಚಿತ”. ಎಂದು ಬರೆದಿದ್ದಾನೆ. ಮತ್ತು ಬರಹದ ಕೆಳಗೆ From, government ಅಂತ ಬರೆದಿದ್ದಾನೆ. ಬಾಲಕ ಬರೆದಿರುವುದರ ಅರ್ಥವೆನೆಂದರೆ, ಇದು ಸರ್ಕಾರವೇ ನಿಮಗೆ ಬರೆಯುತ್ತಿರುವ ಪತ್ರ ಇದನ್ನು ಕಡೆಗಣಿಸಬೇಡಿ. ಮಕ್ಕಳಿಗೆ ಸಿನಿಮಾ ನೋಡಲು ಅನುಮತಿ ನೀಡಬೇಕು ಎನ್ನುವುದು ಪತ್ರ ಬರೆದಿರುವುದರ ಉದ್ದೇಶವಾಗಿದೆ.
ಮಗ ಬರೆದ ಪತ್ರವನ್ನು ತಂದೆ ಬೆರ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ 82 ಸಾವಿರಕ್ಕೂ ಹೆಚ್ಚಿನ ಲೈಕ್ ಪಡೆದುಕೊಂಡಿದೆ.
https://twitter.com/JoelWBerry/status/1705580818855248308/photo/1?ref_src=twsrc%5Etfw%7Ctwcamp%5Etweetembed%7Ctwterm%5E1705580818855248308%7Ctwgr%5E1e37a0dec9a5717649da8edf5dcd18d77803b4a8%7Ctwcon%5Es1_&ref_url=https%3A%2F%2Fjanaspandhan.com%2Fjsn%2F159779