ವಿವೇಕವಾರ್ತೆ :ನಮಗೆ ಖಡ್ಗ ತೋರಿಸುತ್ತೀರಾ? ನಮ್ಮವರು ಖಡ್ಗ ತೆಗೆದುಕೊಂಡರೆ ಡೈರೆಕ್ಟ್ ಆಗಿ ಪಾಕಿಸ್ತಾನಕ್ಕೆ ಹೋಗುತ್ತೀರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ.
ಯಾದಗಿರಿಯ (Yadgir) ಶಹಾಪುರದಲ್ಲಿ ಹಿಂದೂ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಮಾತನಾಡಿದ ಶಾಸಕ ಯತ್ನಾಳ್, ನೀವು ತಾಲಿಬಾನ್‌ಗಳಿಗೆ ಸಪೋರ್ಟ್ ಮಾಡುವ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ. ನಾವು ಶಾಂತಿಯುತ ಗಣೇಶ ವಿಸರ್ಜನೆ ಮಾಡುತ್ತಿದ್ದೇವೆ. ಆದರೆ ಕೋಲಾರದಲ್ಲಿ ಖಡ್ಗ ಪ್ರದರ್ಶನ ಮಾಡಿದರು.
ಶಿವಮೊಗ್ಗದಲ್ಲಿ ಔರಂಗಜೇಬ್, ಟಿಪ್ಪುವಿನ ಭಾವಚಿತ್ರ ಹಾಕಿ ನಮ್ಮ ಸಮಾಜಕ್ಕೆ ಸವಾಲು ಹಾಕಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ಪರ ಸರ್ಕಾರವಿದೆ. ನಮಗೆ ಖಡ್ಗ ತೊರಿಸುತ್ತೀರಾ? ನಮ್ಮವರು ಖಡ್ಗ ತೆಗೆದುಕೊಂಡರೆ ಡೈರೆಕ್ಟ್ ಪಾಕಿಸ್ತಾನಕ್ಕೆ ಹೋಗುತ್ತೀರಿ. ಸನಾತನ ಧರ್ಮ ಎಲ್ಲಿಯವರೆಗೆ ಇರುತ್ತದೆ ಅಂಬೇಡ್ಕರ್ ಅವರ ಸಂವಿಧಾನ ಇರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ತಾಲಿಬಾನ್‌ಗಳಿಗೆ ಸಪೋರ್ಟ್ ಮಾಡುವ ವಾತಾವರಣ ರಾಜ್ಯದಲ್ಲಿ ನಿರ್ಮಾಣ ಆಗಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆ ವೇಳೆಯೇ ಎನ್‌ಕೌಂಟರ್ ನಡೆಸಿದ್ದರೆ ಕರ್ನಾಟಕದಲ್ಲಿ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸನಾತನ ಧರ್ಮ ನಾಶ ಮಾಡಬೇಕೆನ್ನುವವರಿಗೆ ಬುದ್ಧಿ ಕಲಿಸಬೇಕಿದೆ. ನಾವು ಹೀಗೆ ಸುಮ್ಮನೆ ಇದ್ದರೆ ಶಿವಮೊಗ್ಗದಲ್ಲಿ (Shivamogga) ಗಲಾಟೆ ಆಗಿದೆಯಲ್ಲ, ಆ ರೀತಿ ಆಗುತ್ತದೆ ಎಂದರು.
ಡಿಜೆ ಹಳ್ಳಿ ಕೆಜಿ ಹಳ್ಳಿ ಘಟನೆಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದಾಗ ಆಗಲೇ ಎನ್‌ಕೌಂಟರ್ ಮಾಡಿದ್ದರೆ ಕರ್ನಾಟಕದಲ್ಲಿ ಈ ಪರಿಸ್ಥಿತಿ ಇರುತ್ತಿರಲಿಲ್ಲ. ಆವಾಗ ಬೊಮ್ಮಾಯಿ ಅವರಿಗೆ ನಾಲ್ಕು ಹೊಡೆಯಲು ಹೇಳಿದೆ. ನಾಲ್ಕು ಹೊಡದರೆ ಕಂಟ್ರೋಲ್ ಆಗುತ್ತದೆ ಎಂದು ಹೇಳಿದೆ ಎಂದರು.
ಗೃಹ ಸಚಿವ ಜಿ. ಪರಮೇಶ್ವರ್ ಶಿವಮೊಗ್ಗ ಘಟನೆ ಬಗ್ಗೆ ಉಡಾಫೆ ಉತ್ತರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಗೃಹ ಸಚಿವರು ಅಳುಬುರಕರು ಆಗುತ್ತಿದ್ದಾರೆ. ಇಂತಹವರು ಗೃಹ ಸಚಿವರಾದರೆ ಪೊಲೀಸ್ ಇಲಾಖೆ ನೈತಿಕವಾಗಿ ಕುಸಿಯುತ್ತಿದೆ ಎಂದು ಟೀಕಿಸಿದರು.