spot_img
spot_img
spot_img
spot_img
spot_img
spot_img

ಚಿಕ್ಕ ವಯಸ್ಸಿನಲ್ಲಿ ನಡೆದ ಆ ಒಂದು ಘಟನೆ ಬಸ್ ಕಂಡಕ್ಟರ್ ಮಗಳನ್ನ IPS ಅಧಿಕಾರಿಯನ್ನಾಗಿ ಮಾಡಿತು..

Published on

ಚಿಕ್ಕ ವಯಸ್ಸಿನಲ್ಲಿ ನಡೆದ ಆ ಒಂದು ಘಟನೆ ಬಸ್ ಕಂಡಕ್ಟರ್ ಮಗಳನ್ನ IPS ಅಧಿಕಾರಿಯನ್ನಾಗಿ ಮಾಡಿತು..

WhatsApp Group Join Now
Telegram Group Join Now

ಜೀವನದಲ್ಲಿ ಸರಿಯಾದ ಗುರಿ, ತಕ್ಕ ಶ್ರಮವಿಲ್ಲದೆ ಯಶಸ್ವಿ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಇಂದು ಯಶಸ್ಸಿನ ಉತ್ತುಂಗದಲ್ಲಿರುವ ಯಾವೆಲ್ಲಾ ವ್ಯಕ್ತಿಗಳನ್ನ ನಾವು ನೋಡುತ್ತೇವೋ, ಅವರೆಲ್ಲಾ ತಮ್ಮ ಹುಟ್ಟಿನಿಂದಲೇ ಯಶಸ್ಸಿನೊಂದಿಗೆ ಬೆಳೆದವರಲ್ಲ. ಅವರೂ ಕೂಡ ತಮ್ಮ ಜೀವನದಲ್ಲಿ ತುಂಬಾ ಕಷ್ಟ, ಅವಮಾನ, ಅಪಮಾನಗಳನ್ನೆಲ್ಲಾ ಧೈರ್ಯದಿಂದ ಎದುರಿಸಿ, ನಿರಂತರ ಪರಿಶ್ರಮದ ಫಲವಾಗಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವತಿಯಿದ್ದಾಳೆ. ಆಕೆ ಭಾರತದ ಪ್ರತಿಷ್ಠಿತ ಉದ್ದೇಗಳಲ್ಲಿ ಒಂದಾಗಿರುವ ಐಪಿಎಸ್ ಉದ್ದೆಗೆ ಏರಿದ್ದೇ ಒಂದು ರೋಚಕ ಕತೆ..

ಹೌದು, ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಯುವತಿಯೇ ಉದಾಹರಣೆ. ಇನ್ನು ಈ ಯುವತಿಯ ಹೆಸರು ಶಾಲಿನಿ ಅಗ್ನಿಹೋತ್ರಿ ಎಂದು. ಈಕೆ ಹುಟ್ಟಿದ್ದು ಹಿಮಾಚಲ ಪ್ರದೇಶದ ಮಧ್ಯಮವರ್ಗದ ಕುಟುಂಬದಲ್ಲಿ. ಈಕೆಯ ತಂದೆ ಗವರ್ನಮೆಂಟ್ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಹೌಸ್ ವೈಫ್ ಆಗಿದ್ದಾರೆ. ಇನ್ನು ಶಾಲಿನಿ ಚಿಕ್ಕ ವಯಸ್ಸಿನಲ್ಲಿರುವಾಗಲೇ ತಾನು ಉನ್ನತ ಉದ್ದೆಗೇರಬೇಕು ಎಂಬ ಕಿಡಿ ಆಕೆಯಲ್ಲಿ ಹುಟ್ಟಿತ್ತು. ಇದಕ್ಕೆ ಕಾರಣ ಬಸ್ ನಲ್ಲಿ ನಡೆದ ಆ ಒಂದು ಪ್ರಸಂಗ. ಹೌದು, ಶಾಲಿನಿ ಬಾಲಕಿಯಾಗಿದ್ದಾಗ ಒಂದು ದಿನ ಬಸ್ ನಲ್ಲಿ ತನ್ನ ತಾಯಿಯೊಂದಿಗೆ ಪ್ರಯಾಣ ಮಾಡುತ್ತಿರುವ ವೇಳೆ, ಅವರ ತಾಯಿ ಕುಳಿತಿದ್ದ ಸೀಟ್ ಬಳಿ ಜಾಗ ಖಾಲಿ ಇದ್ದರೂ ಒಬ್ಬ ವ್ಯಕ್ತಿ ಅದರ ಮೇಲೆ ಕೈ ಇಟ್ಟು ಕುಳಿತಿದ್ದ.

ಬಾಲಕಿ ಶಾಲಿನಿ ಜಾಗ ಬಿಡುವಂತೆ ಆ ವ್ಯಕ್ತಿಗೆ ಎಷ್ಟೇ ಹೇಳಿದ್ರೂ ಸಹ ನೀನೇನು ಡಿಸಿ ನಾ ನಿನ್ನ ಮಾತು ಕೇಳಲಿಕ್ಕೆ ಎಂದು ಶಾಲಿನಿಯನ್ನೇ ಗ’ದರಿಬಿಡುತ್ತಾನೆ. ಇನ್ನು ಬಾಲಕಿಯಾಗಿದ್ದ ಶಾಲಿನಿಗೆ ಡಿಸಿ ಎಂಬ ಪದದ ಅರ್ಥ ತಿಳಿದಿರಲಿಲ್ಲ. ಆದರೆ ಆ ದಿನ ಶಾಲಿನಿಗೆ ಡಿಸಿ ಎಂದರೆ ಸಮಾಜದಲ್ಲಿ ಉನ್ನತ ಉದ್ದೆಯಲ್ಲಿರುವವರು, ಆ ಉದ್ದೆಗೆ ಎಲ್ಲರೂ ಬೆಲೆ ಕೊಡುವಂತಹ ಶಕ್ತಿ ಎದೆ ಎಂಬುದು ಗೊತ್ತಾಯಿತು. ಆ ಕ್ಷಣದಿಂದಲೇ ಶಾಲಿನಿ ತಾನು ಜೀವನದಲ್ಲಿ ಬೆಳೆದು ಇಂತಹ ಉನ್ನತ ಉದ್ದೆಗೆ ಏರಬೇಕು ಧೃಡ ನಿರ್ಧಾರಕ್ಕೆ ಬರುತ್ತಾಳೆ. ಇನ್ನು ಈ ಪ್ರಸಂಗವನ್ನ ಸ್ವತಃ ಶಾಲಿನಿ ಅಗ್ನಿಹೋತ್ರಿ ಅವರೇ ಹೇಳಿಕೊಂಡಿದ್ದಾರೆ.

ಇನ್ನು ಕುಗ್ರಾಮದಲ್ಲಿ ಬೆಳೆದ ಶಾಲಿನಿ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನಂ ಪಡೆಯುತ್ತಾರೆ. ಸಾಧಿಸಲೇಬೇಕೆಂಬ ಛಲ ಹೊಂದಿದ್ದ ಶಾಲಿನಿ UPSC ಸ್ಪರ್ಧಾತ್ಮಕ ಪರೀಕ್ಷೆ ಬರೆದುಉತ್ತಮ ರ್ಯಾಂಕ್ ನಲ್ಲಿ ತೇರ್ಗಡೆ ಆಗುತ್ತಾಳೆ ಕೂಡ. ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಬೇಕೆಂಬ ಕನಸು ಕಂಡಿದ್ದ ಶಾಲಿನಿ IPS ಅಧಿಕಾರಿಯಾಗಿ ಅಧಿಕ ಸ್ವೀಕರಿಸುತ್ತಾಳೆ. ಇನ್ನು ಶಾಲಿನಿ ಅಗ್ನಿಹೋತ್ರಿ ತನ್ನ IPS ತರಭೇತಿ ಸಮಯದಲ್ಲಿ ಗೃಹ ಇಲಾಖೆ ಕಡೆಯಿಂದ ಬೆಸ್ಟ್ ಟ್ರೈನಿ ಎಂಬ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಒಟ್ಟಿನಲ್ಲಿ ಶಾಲಿನಿಯಂತಹ ಹೆಣ್ಣುಮಕ್ಕಳ ಈ ಸಾಧನೆ ಎಷ್ಟೋ ಯುವಕ ಯುವತಿಯರ ಜೀವನಕ್ಕೆ ಸ್ಫೂರ್ತಿಯಾಗುವುದರಲ್ಲಿ ಸಂದೇಹವಿಲ್ಲ.

WhatsApp Group Join Now
Telegram Group Join Now
spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಸಿಸಿಬಿ ಪೊಲೀಸರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್!

ಮಂಗಳೂರು:- ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಕ್ಷಿಣ ಕನ್ನಡ...

ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಗೆಲುವು ನಿಶ್ಚಿತ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ

ಬೆಳಗಾವಿ: ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಬಿಜೆಪಿ...

ಪಬ್ಲಿಕ್ ನಲ್ಲೇ ರೂಂ ಗೆ ಬೇಗ ಬಾ ಎಂದು ಪತ್ನಿಗೆ ಆರ್ಡರ್ ಮಾಡಿದ ಕ್ರಿಕೆಟರ್ ಜಡೇಜಾ!

ಸಿಎಸ್ ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾ ಕಾಮೆಂಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ರವೀಂದ್ರ ಜಡೇಜಾ...

ಸಮಯ ಬಂದಾಗ ನಾನು ಸುಮಲತಾ ಜೊತೆ ಮಾತಾಡ್ತೀನಿ: HD ಕುಮಾರಸ್ವಾಮಿ!

ಬೆಂಗಳೂರು: ಸುಮಲತಾ ನನಗೆ ಶತ್ರು ಅಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಜೆ.ಪಿ.ನಗರದಲ್ಲಿ...
error: Content is protected !!