spot_img
spot_img
spot_img
spot_img
spot_img
spot_img

ಬೆಳಗಾವಿ : ಕಲ್ಯಾಣಮಂಟಪದಲ್ಲೇ ಹೈಡ್ರಾಮಾ – ಹಸೆಮಣೆ ಏರಬೇಕಿದ್ದ ಸರ್ಕಾರಿ ನೌಕರ ಜೈಲುಪಾಲು

Published on

spot_img

ಬೆಳಗಾವಿ: ಮದುವೆ ದಿನ ಕಲ್ಯಾಣಮಂಟಪದಲ್ಲೇ ಸರ್ಕಾರಿ ನೌಕರನೊಬ್ಬ (Government Employee) ವರದಕ್ಷಿಣೆಗೆ (Dowry) ಬೇಡಿಕೆಯಿಟ್ಟು ಹೈಡ್ರಾಮಾ ನಡೆಸಿ ಪೊಲೀಸರ ಅತಿಥಿಯಾದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

ಬೆಳಗಾವಿ ಡಿಸಿ ಕಚೇರಿಯಲ್ಲಿ ಎಸ್‌ಡಿಸಿ ಆಗಿರುವ ಸಚಿನ್ ಪಾಟೀಲ್ ಹೈಡ್ರಾಮಾ ನಡೆಸಿದ ವರ. ಈತ ಕಲ್ಯಾಣಮಂಟಪದಲ್ಲಿ ನಡೆಯುತ್ತಿದ್ದ ಅರಿಶಿಣ ಕಾರ್ಯಕ್ರಮದಲ್ಲಿ 200 ಗ್ರಾಂ ಚಿನ್ನಾಭರಣ, 10 ಲಕ್ಷ ನಗದು ನೀಡುವಂತೆ ವಧುವಿನ ಮನೆಯವರಿಗೆ ಡಿಮ್ಯಾಂಡ್ ಇಟ್ಟಿದ್ದಾನೆ. ವರನ ಡಿಮ್ಯಾಂಡ್‌ಗೆ ವಧುವಿನ ಸಂಬಂಧಿಕರು, ಮದುವೆಯಲ್ಲಿ ಪಾಲ್ಗೊಂಡ ಜನರು ತಬ್ಬಿಬ್ಬಾಗಿದ್ದಾರೆ. ಅಲ್ಲದೇ ನಾವು ಬಡವರು ಇಷ್ಟೊಂದು ಹಣ, ಚಿನ್ನಾಭರಣ ಎಲ್ಲಿಂದ ಕೊಡೋದು ಎಂದು ವಧುವಿನ ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಈ ವೇಳೆ ವರದಕ್ಷಿಣೆ ಕೊಡದ ಹಿನ್ನೆಲೆ ಹಳದಿ ಕಾರ್ಯಕ್ರಮ ನಡೆಯುವಾಗಲೇ ಮಂಟಪದಿಂದ ವರ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ನಾನು ಹಳದಿ ಕಾರ್ಯದಲ್ಲಿ ಪಾಲ್ಗೊಳ್ಳಲ್ಲ ಎಂದು ಹೈಡ್ರಾಮ ನಡೆಸಿದ್ದಾನೆ. ಈ ವೇಳೆ ಮದುವೆ ದಿನ ವಿಚಿತ್ರವಾಗಿ ನಡೆದುಕೊಂಡ ವರನಿಗೆ ಹುಡುಗಿ ಮನೆಯವರು ಗೂಸಾ ನೀಡಿದ್ದು, ಕಲ್ಯಾಣ ಮಂಟಪದಿಂದ ಎಸ್ಕೇಪ್ ಆಗಲು ಯತ್ನಿಸಿದ್ದ ವರನನ್ನು ರೂಂನಲ್ಲೇ ಲಾಕ್ ಮಾಡಿದ್ದಾರೆ.

ಏನಿದು ಘಟನೆ?
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗ್ರಾಮವೊಂದರ ಯುವತಿ ಜೊತೆಗೆ ಸಚಿನ್ ಪಾಟೀಲ್ ನಿಶ್ಚಿತಾರ್ಥ ಆಗಿತ್ತು. ಇದ್ದ ಒಬ್ಬಳೇ ಹೆಣ್ಣುಮಗಳನ್ನು ಸರ್ಕಾರಿ ನೌಕರ ಎಂಬ ಕಾರಣಕ್ಕೆ ಸಚಿನ್‌ಗೆ ಕೊಡಲು ವಧುವಿನ ಪೋಷಕರು ನಿರ್ಧರಿಸಿದ್ದರು. ಇವರಿಬ್ಬರ ನಿಶ್ಚಿತಾರ್ಥ ಆರು ತಿಂಗಳ ಹಿಂದೆ ನಡೆದಿತ್ತು. ನಿಶ್ಚಿತಾರ್ಥ ಸಮಯದಲ್ಲೇ 25 ಸಾವಿರ ವರದಕ್ಷಿಣೆ, 50 ಗ್ರಾಂ ಚಿನ್ನಾಭರಣ ಕೊಡುವುದಾಗಿ ಮಾತುಕತೆ ಮಾಡಿದ್ದರು. ಇದರ ಜೊತೆಗೆ ಮದುವೆಯನ್ನು ತಾವೇ ಮಾಡಿಕೊಡುವುದಾಗಿ ಹುಡುಗಿ ಪೋಷಕರು ತಿಳಿಸಿದ್ದರು. ಈ ಮಾತುಕತೆಗೆ ಉಭಯ ಕುಟುಂಬಸ್ಥರೂ ಒಪ್ಪಿಗೆ ಸೂಚಿಸಿದ್ದರು. ಡಿಸೆಂಬರ್ 31ಕ್ಕೆ ಖಾನಾಪುರದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಯವಾಗಿತ್ತು. ಎಲ್ಲಾ ಸಂಬಂಧಿಕರು, ಸ್ನೇಹಿತರಿಗೆ ಆಹ್ವಾನ ಪತ್ರಿಕೆಯನ್ನು ನೀಡಲಾಗಿತ್ತು. ಇದೀಗ ಹಸೆಮಣೆ ಏರಬೇಕಿದ್ದ ವರ ಜೈಲುಪಾಲಾಗಿದ್ದಾನೆ.

ಮದುವೆ ದಿನವೇ ಹೈಡ್ರಾಮಾ ಮಾಡಿದ ಸರ್ಕಾರಿ ನೌಕರ ಹಿಂಡಲಗಾ ಜೈಲು ಪಾಲಾಗಿದ್ದು, ಸಚಿನ್ ಪಾಟೀಲ್‌ನನ್ನು ವಶಕ್ಕೆ ಪಡೆದು ಖಾನಾಪುರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಿಶ್ಚಿತಾರ್ಥದ ಬಳಿಕ ಸಚಿನ್ ಯುವತಿ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಆಗಾಗ ಮನೆಗೆ ಹೋಗಿ ನಾಲ್ಕೈದು ಸಲ ಯುವತಿ ಜೊತೆಗೆ ದೈಹಿಕ ಸಂಪರ್ಕ ಸಾಧಿಸಿದ್ದ ಸಚಿನ್ ಆಕೆಯ ಸಹೋದರರು, ಸಂಬಂಧಿಕರ ಬಳಿ 1 ಲಕ್ಷ ಸಾಲವನ್ನೂ ಪಡೆದಿದ್ದ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ವರದಕ್ಷಿಣೆ ಕೊಡಲು ಒಪ್ಪದಿದ್ದಾಗ ಯುವತಿಗೂ ಜೀವ ಬೆದರಿಕೆ ಹಾಕಿದ್ದಾನೆ. ಇದೀಗ ಸಚಿನ್ ಪಾಟೀಲ್ ವಿರುದ್ಧ ಖಾನಾಪುರ ಠಾಣೆಯಲ್ಲಿ ಮೂರು ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 303 (ಕೊಲೆ ಬೆದರಿಕೆ), ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಐಪಿಸಿ ಸೆಕ್ಷನ್ 420 (ವಂಚನೆ) ಪ್ರಕರಣ ದಾಖಲಾಗಿದೆ. ಸೋಮವಾರ ಪೊಲೀಸರು ಆರೋಪಿ ಸಚಿನ್ ಪಾಟೀಲ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕೃಪೆ

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!