spot_img
spot_img
spot_img
spot_img
spot_img
spot_img

ನಿಮ್ಮ Phone ಕಳೆದುಹೋದ್ರೆ Google Pay /Paytm /phone pay ಅಕೌಂಟ್‌ ಬ್ಲಾಕ್‌ ಮಾಡುವುದು ಹೇಗೆ.? ಇಲ್ಲಿದೆ ನೋಡಿ

Published on

spot_img

ಇತ್ತೀಚೆಗೆ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳು ಇರುವುದರಿಂದ ಆನ್‌ಲೈನ್ ಮೂಲಕ ಬ್ಯಾಂಕ್​ ವಹಿವಾಟುಗಳನ್ನು ಮಾಡುವವರ ಪ್ರಮಾಣವೂ ಹೆಚ್ಚಾಗಿದೆ. ವಿಶೇಷವಾಗಿ ಗೂಗಲ್​ ಪೇ, ಅಮೆಜಾನ್ ಪೇ, ಪೇಟಿಯಂ ಮತ್ತು ಫೋನ್ ಪೇ ನಂತಹ ಯುಪಿಐ ಆಧಾರಿತ ಅಪ್ಲಿಕೇಶನ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಆದರೆ, ಒಂದುವೇಳೆ ನಿಮ್ಮ ಸ್ಮಾರ್ಟ್​​ಫೋನ್ ಕಳೆದುಹೋದರೆ, ಎಲ್ಲಾದರು ಕಳ್ಳತನವಾದರೆ ಏನು ಗತಿ?, ಈ ಸಂದರ್ಭ ಮೊಬೈಲ್​ನಲ್ಲಿದ್ದ ಫೋನ್ ಪೇ, ಗೂಗಲ್ ಪೇ ಅಕೌಂಟ್ ಅನ್ನು ಏನು ಮಾಡುವುದು. ಈ ರೀತಿಯ ಗೊಂದಲ ಅನೇಕರಿಗೆ ಇರಬಹುದು. ಹೀಗಾದಾಗ ನಿಮ್ಮ ಈ ಅಕೌಂಟ್ ಅನ್ನು ಯಾವರೀತಿ ಸುರಕ್ಷಿತವಾಗಿಸಬಹುದು ಎಂಬುದನ್ನು ನಾವು ತಿಳಿಸುತ್ತೇವೆ.

ನಿಮ್ಮ ಸ್ಮಾರ್ಟ್​​ಫೋನ್​ನಲ್ಲಿರುವ ಯುಪಿಐ ಆ್ಯಪ್​ಗಳಲ್ಲಿ ನೀವು ಬ್ಯಾಂಕ್ ಅಕೌಂಟ್ ಅನ್ನು ಲಿಂಕ್ ಮಾಡಿರುತ್ತೀರಿ. ಇದರಲ್ಲಿ ಸಾಕಷ್ಟು ಹಣ ಕೂಡ ಇರಬಹುದು. ಒಂದುವೇಳೆ ನಿಮ್ಮ ಮೊಬೈಲ್ ಕಳೆದು ಹೋದಾಗ ಅಥವಾ ಕಳುವಾದಾಗ ಕೆಲ ಟ್ರಿಕ್ ಉಪಯೋಗಿಸಿ ಅವರು ಯುಪಿಐ ಆ್ಯಪ್ ಓಪನ್ ಮಾಡಿ ಹಣವನ್ನು ದೋಚುವ ಸಾಧ್ಯತೆಗಳಿರುತ್ತದೆ. ಇದಕ್ಕಾಗಿ ನಿಮ್ಮ ಫೋನ್ ಕಳೆದು ಹೋಯಿತು ಎಂದ ಕೂಡಲೇ ಮೊದಲು ನಿಮ್ಮ ಯುಪಿಐ ಅಕೌಂಟ್ ಅನ್ನು ಬ್ಲಾಕ್ ಮಾಡಿ.

ಪೇಟಿಯಂ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?:

  • ಮೊದಲಿಗೆ Paytm ಪೇಮೆಂಟ್ಸ್ ಬ್ಯಾಂಕ್ ಸಹಾಯವಾಣಿ 01204456456 ಗೆ ಕರೆ ಮಾಡಿ.
  • ಇದರಲ್ಲಿ “ಕಳೆದುಹೋದ ಫೋನ್” ಆಯ್ಕೆಯನ್ನು ಆರಿಸಿ.
  • ನಂತರ “ಬೇರೆ ಸಂಖ್ಯೆಯನ್ನು ನಮೂದಿಸಿ” ಆಯ್ಕೆಮಾಡಿ ಮತ್ತು ನಿಮ್ಮ ಕಳೆದುಹೋದ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ.
  • ಈಗ ಎಲ್ಲ ಡಿವೈಸ್ ಅನ್ನು ಲಾಗ್ ಔಟ್ ಮಾಡುವ ಆಯ್ಕೆ ಒತ್ತಿ.
  • ಹಾಗೆಯೆ Paytm ವೆಬ್‌ಸೈಟ್‌ಗೆ ಹೋಗಿ ಮತ್ತು 24×7 ಸಹಾಯವನ್ನು ಆಯ್ಕೆಮಾಡಿ.
  • ‘Report a Fraud’ ಆಯ್ಕೆಮಾಡಿ ಮತ್ತು ಅಲ್ಲಿ ಕಾಣಿಸುವ ಕ್ಯಾಟಗರಿಯನ್ನು ಸೆಲೆಕ್ಟ್ ಮಾಡಿರಿ.
  • ಈಗ ಪುಟದ ಕೆಳಭಾಗದಲ್ಲಿ ಲಭ್ಯವಿರುವ ‘Message Us’ ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
  • ಇಲ್ಲಿ ನೀವು, ಇದು ನನ್ನದೇ ಪೇಟಿಯಂ ಖಾತೆ ಎಂಬುದಕ್ಕೆ ಪುರಾವೆಯನ್ನು ನೀಡಬೇಕು. ಅದು Paytm ಖಾತೆಯ ವಹಿವಾಟುಗಳೊಂದಿಗೆ ನಡೆದ ಡೆಬಿಟ್/ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಆಗಿರಬಹುದು ಅಥವಾ Paytm ಖಾತೆಯ ವಹಿವಾಟಿಗೆ ದೃಢೀಕರಣ ಇಮೇಲ್ ಅಥವಾ SMS ಆಗಿರಬಹುದು.
  • ಬಳಿಕ ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ. ಹಾಗೂ Paytm ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುತ್ತದೆ.

ಗೂಗಲ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?:

  • ಗೂಗಲ್ ಪೇ ಬಳಕೆದಾರರು 18004190157ಗೆ ಕರೆ ಮಾಡಿ.
  • ಇದು ಕಸ್ಟಮರ್ ಸರ್ವಿಸ್ ನಂಬರ್ ಆಗಿದ್ದು ಅವರು ಸಲಹೆ ನೀಡಿದ ರೀತಿ ನಡೆದುಕೊಳ್ಳಬೇಕು.

ಫೋನ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?:

  • ಫೋನ್ ಪೇ ಬಳಕೆದಾರರು 08068727374 ಅಥವಾ 02268727374 ನಂಬರ್​ಗೆ ಕರೆ ಮಾಡಿ.
  • ಅಲ್ಲಿ ನಿಮಗೆ ಸಂಬಂಧಿಸಿದ ನಂಬರ್ ಅನ್ನು ಆಯ್ಕೆ ಮಾಡಿ.
  • ಬಳಿಕ ಖಚಿತ ಪಡಿಸಿಕೊಳ್ಳಲು ನಿಮ್ಮ ಫೋನ್ ನಂಬರ್​ಗೆ OTP ಸೆಂಡ್ ಆಗುತ್ತದೆ.
  • ಆಗ ನಾನು ಯಾವುದೇ OTP ಸ್ವೀಕರಿಸಿಲ್ಲ ಎಂಬ ಆಯ್ಕೆಯನ್ನು ಒತ್ತಿರಿ.
  • ಸಿಮ್ ಕಳೆದು ಹೋಗಿದೆ ಅಥವಾ ಮೊಬೈಲ್ ಕಳೆದು ಹೋಗಿದೆ ಎಂಬ ಆಯ್ಕೆ ಸೆಲೆಕ್ಟ್ ಮಾಡಿ.
  • ನಂತರ ನಿಮ್ಮ ಫೋನ್ ನಂಬರ್, ಇ–ಮೇಲ್, ವಿಳಾಸ, ಕೊನೆಯ ಪೇಮೆಂಟ್ ಕುರಿತ ಮಾಹಿತಿ ಸೇರಿದಂತೆ ಕೆಲ ದಾಖಲಾತಿ ನೀಡಿದ ಬಳಿಕ ಫೋನ್ ಪೇ ಅಕೌಂಟ್ ಬ್ಲಾಕ್ ಆಗುತ್ತದೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!