spot_img
spot_img
spot_img
spot_img
spot_img

ರಾಮಾಯಣದ ಬಗ್ಗೆ ನಿಮಗೆಷ್ಟು ಗೊತ್ತು..? ನಿಮಗೂ ತಿಳಿಯದ 24 ಸತ್ಯಗಳಿವು..!

Published on

spot_img

ರಾಮಾಯಣದ ಬಗ್ಗೆ ಕೆಲವರಿಗೆ ತಿಳಿದಿದ್ದರೆ, ಇನ್ನು ಕೆಲವರಿಗೆ ರಾಮಾಯಣದ ಬಗ್ಗೆ ತಿಳಿದಿಲ್ಲ. ಅದರಲ್ಲೂ ರಾಮಾಯಣದ ಸೂಕ್ಷ್ಮ ರಹಷ್ಯಗಳ ಬಗ್ಗೆ ತಿಳಿದವರು ಅತಿ ವಿರಳ. ರಾಮಾಯಣದ ರಹಸ್ಯಗಳಾವುವು..? ರಾಮಾಯಣದ ವಿಶೇಷತೆಯೇನು..? ಇಲ್ಲಿದೆ ರಾಮಾಯಣಕ್ಕೆ ಸಂಬಂಧಿಸಿದ 24 ನೈಜ ಸಂಗತಿಗಳು.

ಮಹಾಕಾವ್ಯವಾದ ರಾಮಾಯಣಕ್ಕೆ ಅನೇಕ ರೂಪಗಳಿವೆ. ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಥೆಗಳಿವೆ. ಕಾಂಬೋಡಿಯಾ ರಾಮಾಯಣ, ಭಾರತದ ರಾಮಾಯಣ, ಶ್ರೀಲಂಕಾ ರಾಮಾಯಣವನ್ನು ತಾಳೆ ಹಾಕಿ ನೋಡಿದರೆ ಅಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಅಂತಹ ಸತ್ಯ, ಜ್ಞಾನದ ವಿಶೇಷ ನಿಧಿ ರಾಮಾಯಣವಾಗಿದೆ. ರಾಮಾಯಣದ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಮಹಾಕಾವ್ಯದ ಸೂಕ್ಷ್ಮ ಭಾಗಗಳು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅಂತಹ ಆಸಕ್ತಿಕರ ಸಂಗತಿಗಳು ಈ ಲೇಖನದಲ್ಲಿವೆ.

ಮಂಥರೆ ಏಕೆ ಸೇಡು ತೀರಿಸಿಕೊಂಡಳು

ಮಂಥರೆ ಮಾತು ಕೇಳಿ ಕೈಕೆ ರಾಮನನ್ನು ವನವಾಸಕ್ಕೆ ಕಳಿಸಿದಳು. ಕುತೂಹಲಕಾರಿ ಸಂಗತಿ ಎಂದರೆ ಮೂಲ ರಾಮಾಯಣದಲ್ಲಿ ರಾಮನು ಬಾಲ್ಯದಲ್ಲಿದ್ದಾಗ ಆಟಿಕೆಯಲ್ಲಿ ಮಂಥರೆಗೆ ಹೊಡೆದಿರುತ್ತಾನೆ. ಅದರ ಸೇಡನ್ನು ಮಂಥರೆಯು ಕೈಕೆ ಮೂಲಕ ತೀರಿಸಿಕೊಳ್ಳುತ್ತಾಳೆ.

ಸೀತೆಯನ್ನು ಗೆಲ್ಲಲು ಬಿಟ್ಟ ಶ್ರೀರಾಮ

ಶ್ರೀ ರಾಮ ಮತ್ತು ಸೀತೆ ವನವಾಸವಿದ್ದಾಗ ಅವರಿಬ್ಬರೂ ಈಜು ಸ್ಪರ್ಧೆಗೆ ಮುಂದಾದರು. ಲಕ್ಷ್ಮಣ ಇದಕ್ಕೆ ತೀರ್ಪುಗಾರನಾಗಿದ್ದ. ರಾಮನು ಸೀತೆಗಿಂತ ವೇಗವಾಗಿ ಈಜುತ್ತಿದ್ದ. ಸೀತೆಗೆ ತನ್ನ ವೇಗವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಆಗ ರಾಮನು ತಾನೇ ಬೇಕೆಂದು ತನ್ನ ಈಗುವ ಗತಿಯನ್ನು ನಿಧಾನಗೊಳಿಸಿ ಸೀತೆ ಗೆಲ್ಲುವಂತೆ ಮಾಡಿದನು. ಸೀತೆಯ ಗೆಲುವಿನ ಖುಷಿಯನ್ನು ನೋಡಲು ರಾಮ ಬಯಸಿದ್ದ ಎನ್ನಲಾಗಿದೆ.

ಹನುಮನನ್ನು ರಾಮ ಆಯ್ದುಕೊಂಡಿದ್ದೇಕೆ?

ಸೀತೆಯನ್ನು ಹುಡುಕಲು ಸುಗ್ರೀವನು ತನ್ನ ಸೈನ್ಯವನ್ನು ಎಲ್ಲಾ ದಿಕ್ಕುಗಳಲ್ಲಿಯೂ ಕಳುಹಿಸುತ್ತಿದ್ದಾಗ, ಹನುಮನು ಒಂದು ಮೂಲೆಯಲ್ಲಿ ಆಸಕ್ತಿಯಿಲ್ಲದೆ ಕುಳಿತಿದ್ದನು, ಒಬ್ಬ ರಾಜಮಹಿಳೆಗೆ ಸೇವೆ ಮಾಡುವುದು ಅರ್ಥಹೀನ ಎಂದು ಅಂದುಕೊಂಡಿದ್ದನು. ಸೀತೆಯ ಮೌಲ್ಯವನ್ನು ಅರ್ಥ ಮಾಡಿಸುವ ನಿಟ್ಟಿನಲ್ಲಿ ರಾಮನು ಹನುಮನನ್ನು ಆಯ್ದುಕೊಂಡು ದಕ್ಷಿಣ ದಿಕ್ಕಿಗೆ ಹೋಗಲು ಹೇಳಿದನು.

ಲಕ್ಷ್ಮಣ ಏಕೆ ರಾಮನೊಂದಿಗೆ ವೈಕುಂಠಕ್ಕೆ ಹೋಗಲಿಲ್ಲ.?

ರಾಮ ಮತ್ತು ಲಕ್ಷ್ಮಣ ಮತ್ತೆ ವೈಕುಂಠಕ್ಕೆ ಹೋಗುವ ಸಮಯ ಯಮನು ಋಷಿಯ ವೇಷದಲ್ಲಿ ಬಂದು ರಾಮನನ್ನು ಖಾಸಗಿಯಾಗಿ ಭೇಟಿಯಾಗಲು ಕೇಳಿಕೊಂಡನು. ಈ ಭೇಟಿ ಖಾಸಗಿಯಾಗಿರಬೇಕು ಎಂದು ಬಯಸಿದ ಇಬ್ಬರೂ ಒಳಗೆ ಬರುವವರು ಯಾರೇ ಆದರೂ ಅವರಿಗೆ ಮರಣ ದಂಡನೆ ವಿಧಿಸಬೇಕೆಂದು ಹೇಳಿದರು. ಸ್ವಲ್ಪ ಹೊತ್ತಿನಲ್ಲಿ ದುರ್ವಾಸ ಮುನಿಗಳು ಅಲ್ಲಿಗೆ ಬಂದರು. ಬಾಗಿಲ ಬಳಿ ಕಾವಲು ಕಾಯುತ್ತಿದ್ದ ಲಕ್ಷ್ಮಣನನ್ನು ತನ್ನನ್ನು ಒಳಗೆ ಬಿಡುವಂತೆ ಕೇಳಿಕೊಂಡರು. ಆದರೆ, ಲಕ್ಷ್ಮಣ ಅದಕ್ಕೆ ಒಪ್ಪಲಿಲ್ಲ. ಒಳಗೆ ಬಿಡದಿದ್ದರೆ ಇಡೀ ಅಯೋಧ್ಯೆಯನ್ನು ನಾಶ ಮಾಡುವುದಾಗಿ ದುರ್ವಾಸರು ಹೇಳಿದರು. ಇದನ್ನು ಕೇಳಿದ ಲಕ್ಷ್ಮಣ ತನ್ನ ಊರು ನಾಶವಾಗುವುದಕ್ಕಿಂತ ತನ್ನ ಮರಣದಂಡನೆ ಆಗುವುದೇ ಸರಿಯೆಂದು ಬಗೆದು ರಾಮ-ಋಷಿ ರೂಪದಲ್ಲಿದ್ದ ಯಮ ಇರುವ ಕೋಣೆಗೆ ಬಂದ. ಆಗ ರಾಮನಿಗೆ ತನ್ನ ಸಹೋದರನಿಗೇ ಮರಣ ದಂಡನೆ ವಿಧಿಸುವ ಸವಾಲು ಎದುರಾಯಿತು. ದುರ್ವಾಸರನ್ನು ಈ ಕುರಿತು ಕೇಳಿದಾಗ ಪ್ರೀತಿಪಾತ್ರರನ್ನು ನಿರಾಕರಿಸುವುದೂ ಮರಣದಂಡನೆಗೆ ಸಮಾನ ಎಂದು ಹೇಳಿದರು. ಅದಕ್ಕಾಗಿಯೇ ರಾಮ ಲಕ್ಷ್ಮಣನನ್ನು ಬಿಟ್ಟು ವೈಕುಂಠಕ್ಕೆ ಒಬ್ಬನೇ ಹೋದ ಎಂದುಪುರಾಣಗಳು ಹೇಳುತ್ತವೆ.

ಆದರೂ ರಾಮ ಒಬ್ಬನೇ ಹೋಗಲಿಲ್ಲ

ರಾಮನು ವೈಕುಂಠಕ್ಕೆ ಹೊರಟಾಗ, ಅವನು ಅಯೋಧ್ಯೆಯಿಂದ ಪ್ರತಿಯೊಬ್ಬರ ಆತ್ಮವನ್ನೂ ತನ್ನೊಂದಿಗೆ ಕರೆದೊಯ್ದನು. ಅಯೋಧ್ಯೆಯ ರಾಜಪ್ರಭುತ್ವವನ್ನು ವಹಿಸಿಕೊಳ್ಳುವ ಮೊದಲು ಉತ್ತರಾಧಿಕಾರಿಗಳು ಜನರೇ ಇಲ್ಲದೆ ಆಳ್ವಿಕೆ ನಡೆಸುವ ಸಂದರ್ಭ ಎದುರಾಯಿತು.

ಈ ರಾಮಾಯಣದ ಪ್ರಕಾರ ರಾಮ ಮಹಾ ಪಾಪ ಮಾಡಿದ

ಶ್ರೀಲಂಕಾದಲ್ಲಿ ಚಾಲ್ತಿಯಲ್ಲಿರುವ ವಿಭಿನ್ನ ರಾಮಾಯಣದ ಪ್ರಕಾರ ರಾಮನು ಮಹಾ ಪಾಪವನ್ನು ಮಾಡಿದ. ಪತ್ನಿಯನ್ನು ಗಡಿ ಪಾರು ಮಾಡಿ ದೊಡ್ಡ ಅಪಚಾರ ಎಸಗಿದ ಎಂದು ಹೇಳಲಾಗುತ್ತದೆ. ರಾವಣನು ರಾಜನಾಗಿದ್ದರೂ ಸೀತೆಯನ್ನು ಅಪಹರಿಸಿದ್ದಕ್ಕೆ ಶ್ರೀಲಂಕಾದಲ್ಲಿ ವಿಭಿನ್ನವಾದ ಕಥೆಯನ್ನು ವಿವರಿಸುತ್ತಾರೆ.

ಲಂಕಾ ರಾಮಾಯಣದ ಪ್ರಕಾರ ರಾವಣ ಸೀತಾಪಹರಣ ಮಾಡಿದ್ದೇಕೆ?

ಲಂಕಾ ರಾಮಾಯಣದ ಪ್ರಕಾರ ರಾಮ, ಲಕ್ಷ್ಮಣ ಹಾಗೂ ಸೀತೆ ವನವಾಸದಲ್ಲಿದ್ದಾಗ ರಾವಣನ ಸಹೋದರಿ ಶೂರ್ಪನಖಿ ರಾಮನನ್ನು ನೋಡಿ ಆಕರ್ಷಿತಳಾಗುತ್ತಾಳೆ. ತನ್ನ ಪ್ರೇಮ ಪ್ರಸ್ತಾವನೆಯನ್ನು ರಾಮನ ಮುಂದಿಟ್ಟಾಗ ತನ್ನ ಸಹೋದರ ಲಕ್ಷ್ಮಣ ಇನ್ನೂ ರೂಪವಂತ ಅವನನ್ನು ಒಮ್ಮೆ ನೋಡಿ ಬಾ ಎಂದು ಬೆನ್ನ ಹಿಂದೆ ಒಂದು ಸಂದೇಶ ಬರೆದು ಕಳಿಸಿದ. ಆ ಸಂದೇಶದಲ್ಲಿ ಶೂರ್ಪನಖಿಯ ಮೂಗು ಕತ್ತರಿಸುವಂತೆ ರಾಮ ಹೇಳಿದ್ದನು. ಅಣ್ಣನ ಆದೇಶದಂತೆ ಲಕ್ಷ್ಮಣನು ಆಕೆಯ ಮೂಗು ಕತ್ತರಿಸಿದಾಗ ವಿಷಯ ತಿಳಿದ ರಾವಣನು ಕುದ್ದುಹೋದನು. ಸಹೋದರಿಗೆ ತೊಂದರೆ ಕೊಡುವವರಿಗೆ ಯಾರಾದರೂ ಸುಮ್ಮನೆ ಬಿಡುತ್ತಾರಾ ಅದಕ್ಕಾಗಿಯೇ ರಾವಣನು ಸೀತೆಯನ್ನು ಅಪಹರಿಸಿದ ಎಂದು ಲಂಕಾ ರಾಮಾಯಣ ಹೇಳುತ್ತದೆ.

ರಾಮ ಕಟ್ಟಿದ ಗುಡಿಗೆ ರಾವಣನೇ ಅರ್ಚಕ!!

ಲಂಕಾ ರಾಮಾಯಣದ ಪ್ರಕಾರ ರಾವಣ ಒಬ್ಬ ಸಂಸ್ಕಾರವಂತ ಮನುಷ್ಯ, ಶಿವ ಭಕ್ತ ಎಂದು ಹೇಳಲಾಗುತ್ತದೆ. ರಾವಣನು ಅಂತಹ ದುಷ್ಟ ವ್ಯಕ್ತಿಯಾಗಿದ್ದರೆ, ರಾಮೇಶ್ವರದಲ್ಲಿ ರಾಮನು ಮಾಡಿದ ಗುಡಿಗೆಗೆ ಅವನು ಅರ್ಚಕನಾಗಲು ಒಪ್ಪುತ್ತಿರಲಿಲ್ಲ ಎಂದು ಹೇಳಲಾಗುತ್ತದೆ. ಅಂದಹಾಗೆ ಈ ಕಥೆ ನಿಮಗೆ ಗೊತ್ತಿದೆಯೇ? ರಾವಣನ ವಿರುದ್ಧದ ಯುದ್ಧದಲ್ಲಿ ವಿಜಯಶಾಲಿಯಾಗಬೇಕೆಂದು ಬಯಸಿ ರಾಮನು ಅದಕ್ಕಾಗಿ ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಲು ಬಯಸಿದ್ದನು. ಈಗ ಇದನ್ನು ಮಾಡಲು, ಒಬ್ಬ ಅರ್ಚಕನ ಅಗತ್ಯವಿತ್ತು, ಆದರೆ ಆ ದಿನಗಳಲ್ಲಿ ರಾಮೇಶ್ವರಂನಲ್ಲಿ ಯಾವುದೇ ಪುರೋಹಿತರು ಇರಲಿಲ್ಲ. ಆದುದರಿಂದ ಭಗವಾನ್ ರಾಮನಿಗೆ ಧಾರ್ಮಿಕ ವಿಧಿವಿಧಾನಗಳನ್ನು ಮಾಡಲು ಉತ್ತಮ ಅರ್ಚಕನ ಅಗತ್ಯವಿತ್ತು. ರಾವಣನು ಶಿವನ ಕಟ್ಟಾ ಭಕ್ತನಾಗಿದ್ದನು ಮತ್ತು ಹುಟ್ಟಿನಿಂದ ಬ್ರಾಹ್ಮಣನಾಗಿದ್ದನು. ರಾವಣನ ಸಂಸ್ಕಾರ ಭಕ್ತಿಯ ಬಗ್ಗೆ ಸಹೋದರ ವಿಭೀಷಣನಿಂದ (ರಾಮನ ಕಡೆಯಲ್ಲಿದ್ದ) ರಾಮನಿಗೆ ತಿಳಿಯಿತು. ಆದ್ದರಿಂದ ರಾಮೇಶ್ವರದಲ್ಲಿ ಪೂಜೆಗೆ ಅರ್ಚಕರಾಗಿ ಬರುವಂತೆ ಭಗವಾನ್ ರಾಮನು ರಾವಣನಿಗೆ ಆಹ್ವಾನ ಕಳುಹಿಸಿದನು.

ರಾಮನ ಆಹ್ವಾನ ಸ್ವೀಕರಿಸಿ ಬಂದ ರಾವಣ

ರಾವಣನು ರಾಮನ ಆಹ್ವಾನ ಸ್ವೀಕರಿಸಿ ಬಂದನು. ಆದರೆ ಅವನು ತನ್ನ ಹೆಂಡತಿ ಹಾಜರಾಗದೆ ಪೂಜೆ ಅಪೂರ್ಣವಾಗುವುದಿಲ್ಲ ಎಂದು ರಾಮನಿಗೆ ಹೇಳಿದನು. ಹೆಂಡತಿಯ ಉಪಸ್ಥಿತಿಯಿಲ್ಲದೆ ಯಾವುದೇ ಪೂಜೆ ಅಥವಾ ಯಜ್ಞವನ್ನು ಮಾಡಲು ಸಾಧ್ಯವಿಲ್ಲ. ನೀವು ಮತ್ತು ನಿಮ್ಮ ಪತ್ನಿ ಒಟ್ಟಿಗೆ ಪೂಜೆಗೆ ಕುಳಿತುಕೊಳ್ಳಬೇಕು ಇಲ್ಲದಿದ್ದರೆ ಪೂಜೆ ಸಾಧ್ಯವಿಲ್ಲ ಎಂದು ಹೇಳಿದ. ಇಲ್ಲದ ವಸ್ತುವನ್ನು ಪೂರೈಸುವುದು ಅರ್ಚಕನ ಕರ್ತವ್ಯ ಹಾಗಾಗಿ ಸೀತೆ ರೂಪದಲ್ಲಿ ಒಂದು ಬೊಂಬೆಯನ್ನು ತನ್ನ ಪಕ್ಕದಲ್ಲಿ ಕೂರಿಸುವಂತೆ ಕೇಳಿಕೊಂಡನು.

ರಾವಣನು ಪೂಜೆಗೆ ಸೀತೆಯನ್ನು ಕರೆತರುತ್ತಾನೆ. ಪೂಜೆಯ ನಂತರ, ಭಗವಾನ್ ರಾಮ ಮತ್ತು ಸೀತಾ ಅರ್ಚಕನ ರೂಪದಲ್ಲಿದ್ದ ರಾವಣನ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ. ಆಗ ರಾಮನನ್ನು ಕುರಿತು ಆವಣನಿ ವಿಜಯೀಭವ ಎಂದು ಆಶೀರ್ವಾದಿಸುತ್ತಾನೆ. ಸೀತೆಯನ್ನು ಕುರಿತು ಸುಮಂಗಲಿ ಭವ ಎಂದು ಆಶೀರ್ವಾದಿಸುತ್ತಾನೆ. ತನ್ನ ಪಾದಕ್ಕೆ ಎರಗಿದ ಯಾರಿಗಾದರೂ ಶುಭವನ್ನು ಹರಸುವುದು ಅರ್ಚಕನ ಕರ್ತವ್ಯವಾಗಿರುತ್ತದೆ. ರಾವಣ ಅದನ್ನು ಮುರಿಯದೆ ಇಬ್ಬರಿಗೂ ಆಶೀರ್ವಾದ ಮಾಡಿ ತಾನು ಮಾಡಿದ ಆಶೀರ್ವಾದಕ್ಕೆ ತಕ್ಕಂತೆ ಯುದ್ಧಭೂಮಿಯಲ್ಲಿ ಸೋಲುತ್ತಾನೆ.

ರಾವಣನಲ್ಲಿತ್ತು ಉತ್ತಮ ಗುಣ

ಇದು ಬಹಳ ರೋಮಾಂಚಕಾರಿ ಕಥೆ. ನಾವು ಯಾವಾಗಲೂ ರಾವಣನನ್ನು ಖಳನಾಯಕನಾಗಿ ನೋಡುತ್ತೇವೆ, ಆದರೆ ರಾವಣನಲ್ಲೂ ಅನೇಕ ಒಳ್ಳೆಯ ಗುಣಗಳಿವೆ. ಇದಕ್ಕಾಗಿಯೇ ರಾವಣನು ತನ್ನ ಕೊನೆಯ ಉಸಿರನ್ನು ಎಣಿಸುತ್ತಿದ್ದಾಗ ಲಕ್ಷ್ಮಣನನ್ನು ಕರೆದ ರಾಮ ಹೋಗಿ ರಾವಣನ ಪಾದ ಮುಟ್ಟಿ ಆಶೀರ್ವಾದ ಪಡೆದು ಅವನಲ್ಲಿರುವ ಜ್ಞಾನವನ್ನು ಸಂಪಾದಿಸು ಎಂದು ಹೇಳಿದನು. ತಾನು ಹೋಗಿ ಹಾಗೆ ಮಾಡಿದರೆ ರಾವಣನ ದೇಹವನ್ನು ಬಿಟ್ಟ ಆತ್ಮವು ತನ್ನಲ್ಲಿ ಸೇರಿಕೊಂಡುಬಿಡುತ್ತದೆ ಎನ್ನುವ ಕಾರಣಕ್ಕೆ ರಾಮನು ಆ ಕೆಲಸವನ್ನು ಲಕ್ಷ್ಮಣನಿಗೆ ಒಪ್ಪಿಸಿದ.

ಕೇಳಿದ್ದೀರಾ ರಾವಣ ಗೀತೆ?

ನಿಮಗೆ ಗೊತ್ತಾ, ರಾವಣ ಎಂಬ ಹೆಸರಿನ ಗೀತೆ ಇದೆ. ಇದನ್ನು ರಾವಣಗೀತೆ ಎಂದು ಕರೆಯಲಾಗುತ್ತದೆ. ಇರುವ ಐದು ಗೀತೆಗಳಲ್ಲಿ, ಅವುಗಳಲ್ಲಿ ಒಂದು. ನಮ್ಮಲ್ಲಿ ಶ್ರೀಮದ್ ಭಗವದ್ಗೀತೆ, ಅಷ್ಟವಕ್ರಗೀತೆ, ಉಧವಗೀತೆ ಮತ್ತು ಗುರುಗೀತೆ ಇರುವಂತೆ. ರಾವಣ ಗೀತಾ (ರಾವಣನ ಹಾಡು) ಎಂಬ ಇನ್ನೊಂದು ಗೀತೆ ಇದೆ. ಅದರಲ್ಲಿ ರಾವಣನು ಲಕ್ಷ್ಮಣನಿಗೆ ಅನೇಕ ಧರ್ಮೋಪದೇಶಗಳನ್ನು ಕಲಿಸುತ್ತಾನೆ. ರಾವಣನು ತನ್ನ ಬೋಧನೆಯನ್ನು ಪೂರ್ಣಗೊಳಿಸಿದ ನಂತರ, ಲಕ್ಷ್ಮಣನು ಭಗವಾನ್ ರಾಮನಿಗೆ ಬರಲು ಸಂಕೇತ ಕೊಡುತ್ತಾನೆ. ರಾಮನು ರಾವಣನ ಬಳಿಗೆ ಬಂದಾಗ, ಅವನ ಆತ್ಮವು ದೇಹವನ್ನು ಬಿಟ್ಟು ಪ್ರಕಾಶಮಾನವಾದ ಬೆಳಕಾಗಿ ಭಗವಾನ್ ರಾಮನೊಂದಿಗೆ ವಿಲೀನಗೊಳ್ಳುತ್ತದೆ. ಇದು ಆಧ್ಯಾತ್ಮ ರಾಮಾಯಣದ ಕಥೆ.

ಕೈಕೆ ಕೆಟ್ಟವಳಲ್ಲ

ಕೈಕೆ ವಾಸ್ತವದಲ್ಲಿ ಬಹಳ ಉದಾತ್ತ ಮಹಿಳೆ. ನಾವು ಸಾಮಾನ್ಯವಾಗಿ ಅವಳನ್ನು ಮೋಸದ ಮತ್ತು ದುಷ್ಟ ಮಹಿಳೆ ಎಂದು ಭಾವಿಸುತ್ತೇವೆ. ಆದರೆ ಅದು ಹಾಗಲ್ಲ. ಅವಳು ಕೆಟ್ಟ ಮಹಿಳೆ ಅಲ್ಲ. ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಮ ವನವಾಸ ಅನುಭವಿಸುವಂತೆ ಮಾಡಿದಳು. ಅದಕ್ಕಾಗಿಯೇ `ಸರ್ವಂ ವಾಸುದೇವಂ ಇತಿ ‘(ಎಲ್ಲವೂ ವಾಸುದೇವನ ಇಚ್ಛೆ) ಎಂದು ಹೇಳಲಾಗುತ್ತದೆ.

ಸಿಂಧು ಬಯಲಿನಲ್ಲೂ ರಾಮನ ಉಲ್ಲೇಖ?

ರಾಮಾಯಣ ಹೇಳುವಂತೆ ಹರಿಯಾಣ, ಪಂಜಾಬ್, ಸಿಂಧ್ ಮತ್ತು ಅಫ್ಘಾನಿಸ್ತಾನಗಳಲ್ಲಿ ರಾಮನ ಉಪಸ್ಥಿತಿಯ ಬಗ್ಗೆ ಉಲ್ಲೇಖವಿದೆ ಆದರೆ ಸಿಂಧೂ ನಾಗರಿಕತೆ ಬರವಣಿಗೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದ್ದರಿಂದ ರಾಮನ ಉಪಸ್ಥಿತಿಬಗ್ಗೆ ತಿಳಿಯುವುದು ಕಷ್ಟ. ಕೆಲವು ಬರವಣಿಗೆಗಳನ್ನು ತಾಳೆ ಹಾಕಿ ನೋಡಿದಾಗ ರಾಮನು ಒಬ್ಬ ಬುಡಕಟ್ಟು ನಾಯಕ ಎಂದು ತಿಳಿಯುತ್ತದೆ. ಪ್ರಸಿದ್ಧ ಇತಿಹಾಸಕಾರ ಡಿಯಾಕೋನಾಫ್‌ ಪ್ರಾಚೀನ ಹೆಸರುಗಳನ್ನು ಗುರುತಿಸಿದ್ದು ಇದರಲ್ಲಿ ರಾಮನ ಹೆಸರನ್ನು [xiv] ಎಂದು ಉಲ್ಲೇಖಿಸಿದ್ದಾರೆ. ಇವರು ಸಾಮಾನ್ಯ ದೇವತೆಗಳಾದ ಮಿತ್ರಾ, ಅಹುರಾ ಮಜ್ದಾ ಮುಂತಾದ ಹೆಸರುಗಳನ್ನೂ ಉಲ್ಲೇಖಿಸಿರುವುದು ಗಮನಾರ್ಹ ಸಂಗತಿ.

ರಾಮ ಒಂದು ಪವಿತ್ರ ಹೆಸರು

ಇಸ್ಲಾಮಿಕ್‌ ಪೂರ್ವ ಇರಾನ್‌ನಲ್ಲಿ ರಾಮ ಎಂಬುದು ಒಂದು ಪವಿತ್ರ ಹೆಸರಾಗಿತ್ತು. ಆರ್ಯ, ರಾಮ್‌, ಅನ್ನಾ ಎಂಬುವವರು ಪೂರ್ವಜರು ಎಂದು ಸುವರ್ಣಾಕ್ಷರದಲ್ಲಿ ಕೆತ್ತಲಾಗಿತ್ತು. ಇದು ಒಂದು ಆರಂಭಿಕ ದಾಖಲೆ. ಜೋರಾಷ್ಟರದ ಕ್ಯಾಲೇಂಡರ್‌ನಲ್ಲಿ ರಾಮ ಮತ್ತು ವಾಯು ಎನ್ನುವ ಎರಡು ಹೆಸರನ್ನು ಉಲ್ಲೇಖಿಸಲಾಗಿದ್ದು ಬಹುಶಃ ವಾಯು ಎಂಬುದು ಹನುಮ ಇರಬಹುದು ಎಂದು ಹೇಳಲಾಗುತ್ತದೆ. ರಾಮ್‌ ಬಜ್ರಾಂಗ್‌ ಎಂಬುದು ಕುರ್ದಿಶ್‌ ಬುಡಕಟ್ಟು ಸಮುದಾಯದ ಹೆಸರು. ರಾಮನ ಹೆಸರನ್ನು ಒಳಗೊಂಡ ಅನೇಕ ನಗರಗಳು ಇವೆ. ರಾಮ್‌ ಅರ್ದಶೀರ್‌, ರಾಮ್‌ ಹಾಮುರ್ಜ್ಡ್‌, ರಾಮ್‌ ಪೆರೋಝ್‌, ರೆಮಾ ಮತ್ತು ರುಮಗಮ್‌, ರಾಮ್‌ ಸಹರಿಸ್ತಾನ್‌ ಇವು ರಾಮನ ಹೆಸರನ್ನೊಳಗೊಂಡ ನಗರಗಳು. ರಾಮ್‌ ಅಲ್ಲಾ ಉಫ್ರಟಿಸ್‌ ಎನ್ನುವುದು ಪ್ಯಾಲೆಸ್ಟೈನ್‌ ಪಟ್ಟಣವೊಂದರ ಹೆಸರು.

ಸೀತೆ ಜನಕರಾಜನ ಮಗಳಲ್ಲ

ಸೀತಾ ಜನಕನ ಮಗಳಲ್ಲ. ಅವಳು ಭೂ ದೇವಿಯ ಮಗಳು. ಯಜ್ಞದ ಒಂದು ಭಾಗವಾಗಿ ಭೂಮಿಯನ್ನು ಉಳುಮೆ ಮಾಡುವಾಗ ಅವಳನ್ನು ರಾಜ ಜನಕನು ಪೆಟ್ಟಿಗೆಯಲ್ಲಿ ಸೀತೆಯನ್ನು ಕಂಡನು. ನಂತರ ಅವಳನ್ನು ಭೂ ದೇವಿಯ ವರವೆಂದು ಪರಿಗಣಿಸಿ ಅವಳನ್ನು ತನ್ನ ಮಗಳಾಗಿ ಸ್ವೀಕರಿಸಿದನು.

ಮರಳಿ ಕರೆಸಿಕೊಂಡ ಭೂದೇವಿ

ಸೀತೆಯನ್ನು ಸಾಮಾನ್ಯವಾಗಿ ಭೂವಿಯಲ್ಲಿ ಉದ್ಬವಿಸಿದವಳು ಎನ್ನುವ ನಂಬಿಕೆಯಿದೆ. ಆಕೆ ಭೂತಾಯಿಯ ಮಂಗಳು ಎನ್ನುತ್ತಾರೆ. ವನವಾಸದಿಂದ ಸೀತೆ ಹಿಂದಿರುಗಿ ಬಂದಾಗ ಕೊನೆಯಲ್ಲಿ, ಅಗ್ನಿ ಪರಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಸೀತೆಯನ್ನು ಭೂ ದೇವಿ ವಾಪಸ್‌ ಕರೆಸಿಕೊಂಡಳು.

ಸೀತೆ ಲಕ್ಷ್ಮಿ ದೇವಿಯ ಅವತಾರ

ರಾಮನನ್ನು ವಿಷ್ಣುವಿನ ಅವತಾರವೆಂದು ಹೇಗೆ ಪರಿಗಣಿಸಲಾಗುತ್ತದೆಯೋ ಸೀತೆಯನ್ನು ಕೂಡ ಲಕ್ಷ್ಮಿ ದೇವಿಯ ಅವತಾರವೆಂದು ಪರಿಗಣಿಸಲಾಗುತ್ತದೆ. ವಿಷ್ಣು ರಾಮನಾಗಿ ಭೂಮಿಯಲ್ಲಿ ಅವತರಿಸಿದಾಗ ಸೀತೆ ಲಕ್ಷ್ಮಿಯಾಗಿ ಭೂಮಿಯಲ್ಲಿ ಅವತರಿಸುತ್ತಾಳೆ. ಸಾಕ್ಷಾತ್‌ ಲಕ್ಷ್ಮಿ ದೇವಿಯ ಇನ್ನೊಂದು ರೂಪವೇ ಸೀತೆ.

ಹನುಮನ ಮೈ ಕೆಂಪಾಗಿದ್ದೇಕೆ?

ಒಮ್ಮೆ ಸೀತೆಯು ತನ್ನ ಹಣೆಗೆ ಕುಂಕುಮ ಇಟ್ಟುಕೊಳ್ಳುವುದನ್ನು ಹನುಮ ನೋಡಿದನು. ಏಕೆ ಹೀಗೆ ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುತ್ತಿದ್ದೀರಾ ಎಂದು ಕೇಳಿದಾಗ ಅದಕ್ಕೆ ಉತ್ತರಿಸಿದ ಸೀತೆಯು ರಾಮನ ದೀರ್ಘಾಯುಷ್ಯಕ್ಕಾಗಿ ಎಂದು ಹೇಳಿದಳು. ಇದನ್ನು ತಿಳಿದ ಹನುಮನು ಸಿಂಧೂರವನ್ನು ತನ್ನ ಮೈಗೆಲ್ಲಾ ಹಚ್ಚಿಕೊಂಡು ರಾಮನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದನು.

ಮೊದಲು ಶಿವ ಧನಸ್ಸು ಹೂಡಿದ್ದು ಸೀತೆ

ಶಿವ ಧನುಸ್ಸನ್ನು ಸೀತೆಯು ತನ್ನ ಬಾಲ್ಯದಲ್ಲಿ ಸುಲಭವಾಗಿ ಹೂಡಿದಳು. ಜನಕ ಮಹಾರಾಜನು ಇದನ್ನು ಗಮನಿಸಿ ಸೀತಾ ಸ್ವಯಂವರದಲ್ಲಿ ಧನಸ್ಸನ್ನು ಮುರಿಯುವ ಸವಾಲು ಹಾಕಿದ್ದನು.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಹೈಕೋರ್ಟ್​ನಿಂದ ಎಸಿಬಿ ರದ್ದು: ಎಸಿಬಿಯಲ್ಲಿದ್ದ ಹುದ್ದೆ ಲೋಕಾಯುಕ್ತ & ಪೊಲೀಸ್ ಇಲಾಖೆಗಳಿಗೆ ವರ್ಗಾವಣೆ!

ಬೆಂಗಳೂರು: ಹೈಕೋರ್ಟ್​ನಿಂದ   ಎಸಿಬಿ ರದ್ದು ಹಿನ್ನೆಲೆಯಲ್ಲಿ ಎಸಿಬಿಯಲ್ಲಿದ್ದ ಹುದ್ದೆಗಳನ್ನ ಲೋಕಾಯುಕ್ತ ಸಂಸ್ಥೆ ಮತ್ತು ಪೊಲೀಸ್ ಇಲಾಖೆಗಳಿಗೆ ಸರ್ಕಾರ ವರ್ಗಾವಣೆ ಮಾಡಿದೆ. ಎಸಿಬಿಯಲ್ಲಿದ್ದ ಒಟ್ಟು...

ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 2.67 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?

Pm Awas Yojana Subsidy:ನಮಸ್ಕಾರ ಸ್ನೇಹಿತರೇ ,ಇದೀಗ ನಮ್ಮ ದೇಶದಲ್ಲಿ ಜನರ ಸ್ವಂತ ಮನೆ ನಿರ್ಮಾಣದ ಕನಸಿಗೆ ಕೇಂದ್ರ...

IPL 2024:  ಕ್ರಿಕೆಟ್‌ ಅಭಿಮಾನಿಗಳು ಕುತೂಹಲದಿಂದ ಕಾದಿದ್ದIPL ಆರಂಭದ ದಿನಾಂಕ ಫಿಕ್ಸ್!

ಮುಂಬೈ: ಕ್ರಿಕೆಟ್‌ ಅಭಿಮಾನಿಗಳು ಕುತೂಹಲದಿಂದ ಕಾದಿದ್ದ, ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2024) ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಈ ಕುರಿತು...

ನಿಮ್ಮ ಮನೆಯಲ್ಲಿರುವ ತುಳಸಿ ಗಿಡ ಕಪ್ಪು ಬಣ್ಣಕ್ಕೆ ತಿರುಗಿದರೆ ಅದರ ಅರ್ಥ ಏನು ಗೊತ್ತಾ!?

ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ಕಂಡುಬರುತ್ತದೆ ಎಂದು ಅದನ್ನು ಪೂಜಿಸಲಾಗುತ್ತದೆ. ಅದಕ್ಕೆ ಭಗವಾನ್​​ ವಿಷ್ಣುವಿಗೂ ತುಳಸಿ ಎಂದರೆ ತುಂಬಾ...
error: Content is protected !!