ಬಡವರಿಗೆ & ಮಧ್ಯಮ ವರ್ಗದವರಿಗೆ ಕೈಗೆಟಕುವ ಬೆಲೆಯಲ್ಲಿ ಮನೆ ನಿರ್ಮಾಣ. ಕೇವಲ 70 ಸಾವಿರಕ್ಕೆ ಸಿದ್ಧವಾಗುತ್ತದೆ ವಾಸಕ್ಕೆ ಯೋಗ್ಯವಾದ ಮನೆಗಳು.

ಒಂದೇ ವಾರದಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಕಂಪನಿ, ಇಲ್ಲಿ 70000 ದಿಂದಲೂ ಕೂಡ ಮನೆ ಕಟ್ಟಿ ಕೊಡುತ್ತಾರೆ ಮನೆ ಎನ್ನುವುದು ಪ್ರತಿ ಮನುಷ್ಯನ ಮೂಲಭೂತ ಅವಶ್ಯಕತೆ. ಪ್ರತಿ ಮನುಷ್ಯ ಸುರಕ್ಷಿತವಾಗಿ ಆರೋಗ್ಯವಾಗಿ ನೆಮ್ಮದಿಯಿಂದ ಜೀವನ ಕಳೆಯಬೇಕು ಎಂದರೆ ಆತನಿಗೆ ಒಂದು ಸೂರು ಇರಲೇಬೇಕು. ಇತ್ತೀಚಿಗೆ ಮನೆ ನಿರ್ಮಾಣ ಒಂದು ಘನತೆಯಾಗಿ ಹೊರಹೊಮ್ಮಿದ್ದು ಕೋಟ್ಯಾಂತರ ರೂಪಾಯಿಗಳನ್ನು ಇದಕ್ಕೆ ಸುರಿಯುವವನು ಕೂಡ ಇದ್ದಾರೆ.

ಅದೇ ರೀತಿ ಮನೆ ನಿರ್ಮಿಸಲು ಹಣ ಇಲ್ಲದೆ ಜೋಪಡಿಗಳಲ್ಲಿ ವಾಸಿಸುವವರು ಇದ್ದಾರೆ. ಉದ್ಯೋಗಕ್ಕೆ ಸೇರಿದ್ದ ಮೊದಲ ಸಂಬಳದಿಂದಲೂ ಕೂಡ ಮನೆ ಕಟ್ಟುವುದಕ್ಕೆ ಹಣ ಉಳಿಸುವವರು ಇದ್ದಾರೆ. ಈಗ ಕರ್ನಾಟಕದಲ್ಲಿ ಒಂದು ಕಂಪನಿ ಶುರು ಆಗಿದ್ದು ಇದು ಹೆಚ್ಚು ಸಮಯ ತೆಗೆದುಕೊಳ್ಳದೆ ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಒಂದು ಉತ್ತಮವಾದ ವಾಸಿಸುವ ಯೋಗ್ಯವಾದ ಮನೆಯನ್ನು ಕಟ್ಟಿಕೊಡುತ್ತಿದೆ. ಈ ಕಂಪನಿ ಹೆಸರು ಉನ್ನತಿ.

ಕರ್ನಾಟಕದಲ್ಲಿ ಅನೇಕ ಜನರು ಈ ಹೆಸರು ಕೇಳುತ್ತಾರೆ. ಉನ್ನತಿ ಇಕೋ ಫ್ರೆಂಡ್ಲಿ ಪ್ರಿ ಫ್ಯಾಬ್ರಿಕೇಟೆಡ್ ಹೋಮ್ಸ್ ಎಂದು. ಇದು ಚಿಕ್ಕಮಂಗಳೂರಿನಲ್ಲಿ ಸ್ಥಾಪಿತವಾಗಿರುವ ಈ ಕಂಪನಿಯನ್ನು ಭಾಗ್ಯ ದೇವ್ ಎನ್ನುವ ಹೆಸರಿನ ಸಿವಿಲ್ ಇಂಜಿನಿಯರ್ ಕಟ್ಟಿ ಎಂದುಈ ಕರ್ನಾಟಕದಲ್ಲಿ ಹೆಸರುವಾಸಿಕೆ ಬರುವ ಹಾಗೆ ಮಾಡಿದ್ದಾರೆ. ಬಡವರು ಸಾಮಾನ್ಯ ವರ್ಗದವರು ಒಂದು ಕಡಿಮೆ ಮೊತ್ತದ ಹಣ ಇಟ್ಟುಕೊಂಡು ಮನೆ ಕಟ್ಟಿಕೊಳ್ಳಬೇಕು ಎನ್ನುವ ಕಾನ್ಸೆಪ್ಟ್ ಇಂದ ಈ ಯೋಜನೆ ಆರಂಭವಾಯಿತು.

ಈಗ ನಾಡಿನಾದ್ಯಂತ ಇವರು ಇಷ್ಟು ಫೇಮಸ್ ಆಗಲು ಕಾರಣ ಆಗಿದ್ದು ಈ ಯೋಜನೆಯಲ್ಲಿರುವ ಕೆಲವು ಅಂಶಗಳು ಅದೇನೆಂದರೆ ಅತಿ ಕಡಿಮೆ ದುಡ್ಡಿನಲ್ಲಿ ಇವರು ಮನೆ ನಿರ್ಮಾಣ ಮಾಡಿಕೊಡುತ್ತಾರೆ ಮತ್ತು ಅತಿ ಕಡಿಮೆ ಸಮಯ ತೆಗೆದು ಕೊಂಡು ಮನೆ ನಿರ್ಮಾಣ ಮಾಡಿಕೊಡುತ್ತಾರೆ ಎನ್ನುವುದು. ಈ ಮನೆಗಳನ್ನು ಆಸ್ಟ್ರೇಲಿಯ ಶೈಲಿಯ ರಾಪಿಡ್ ವಾಲ್ ಟೆಕ್ನಾಲಜಿ ರೀತಿಯಲ್ಲಿ ನಿರ್ಮಾಣ ಮಾಡುತ್ತಾರೆ.

ಪ್ರಿ ಕಾನ್ಸ್ಟಂಟ್ ಕಾಂಕ್ರೀಟ್ ವಾಲ್ ಗಳಿಂದ ಇದನ್ನು ನಿರ್ಮಿಸುತ್ತಾರೆ. ಮನೆ ನಿರ್ಮಿಸುವ ವಾತಾವರಣ ಹಾಗೂ ಗ್ರಾಹಕರ ಹಣಕಾಸಿನ ಪರಿಸ್ಥಿತಿ ಅದರದ ಮೇಲೆ ಒಂದು ಇಂಚು, ಒಂದುವರೆ ಇಂಚು ಅಥವಾ ಎರಡು ಇಂಚಿನ ಈ ರೀತಿ ಕಾಂಕ್ರೀಟ್ ವಾಲ್ ಅಲ್ಲಿ ನಿರ್ಮಿಸುತ್ತಾರೆ. ಮುಂಚೆ ಮಾಡಿ ಇಟ್ಟುಕೊಂಡಿದ್ದ ಪ್ರೀ ಫ್ಯಾಬ್ರಿಕೇಟೆಡ್ ಕಾಂಕ್ರೀಟ್ ವಾಲ್ ಗಳನ್ನು ಜೋಡಿಸುವ ಮೂಲಕ ಈ ಮನೆಯಲ್ಲಿ ನಿರ್ಮಾಣ ಮಾಡುತ್ತಾರೆ.

ಈಗ ಇಂತಹ ಮನೆಗಳು ಉನ್ನತಿ ಇಕೋ ಫ್ರೆಂಡ್ಲಿ ಪ್ರೀ ಫ್ಯಾಬ್ರಿಕೇಟೆಡ್ ಮನೆಗಳು ಎಂದು ಕರೆಸಿಕೊಳ್ಳುತ್ತಿವೆ. ಈ ರೀತಿ ವಾಲ್ ಮುಂಚೆ ರೆಡಿ ಮಾಡಿ ಇಟ್ಟುಕೊಂಡಿರುವುದರಿಂದ ಸಮಯ ಬಹಳ ಕಡಿಮೆ ತೆಗೆದುಕೊಳ್ಳುತ್ತದೆ, ಕೋಸ್ಟ್ ಕೂಡ ಕಡಿಮೆ ಆಗುತ್ತದೆ. ಆದರೆ ಗುಣಮಟ್ಟದಲ್ಲಿ ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳುವ ಅಗತ್ಯ ಇಲ್ಲ. ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಮನೆಗಳಾಗಿವೆ ಇವು.

ಕೇವಲ 70,000 ಖರ್ಚು ಮಾಡುವುದರಿಂದ ಕೂಡ ಈ ಕಂಪನಿಯಿಂದ ಮನೆ ಕಟ್ಟಿಸಿಕೊಳ್ಳಬಹುದು. 150 ರಿಂದ 200 sq/ft ಇರುವ ಒಂದು ಹಾಲ್ ಆಗೋ ಕಿಚನ್ ಇರುವಂತಹ ಮನೆ ಈ ಮೊತ್ತಕ್ಕೆ ನಿಮಗೆ ಕಟ್ಟಿಕೊಡುತ್ತಾರೆ. ಈ ಬಗ್ಗೆ ನ್ಯೂಸ್ ಪೇಪರ್ ಗಳಲ್ಲೆಲ್ಲ ಜಾಹಿರಾತು ಕೂಡ ಬಂದಿದೆ. 400 ರಿಂದ 500 sq/ft ಜಾಗದಲ್ಲಿ 1BHK ಮನೆಯನ್ನು ಒಂದೂವರೆ ಲಕ್ಷಕ್ಕೆ ಕಟ್ಟಿಕೊಡುತ್ತಾರೆ ಮತ್ತು 2BKH ನಿರ್ಮಾಣ ಮಾಡಿಕೊಡುತ್ತಾರೆ.

error: Content is protected !!