ವಿವೇಕವಾರ್ತೆ: ಬಾಹುಬಲಿ ಖ್ಯಾತಿಯ ಪ್ರಭಾಸ್ ಇತ್ತೀಚೆಗೆ ವಿವಾಹದ ವಿಚಾರವಾಗಿ ಸುದ್ದಿಯಾಗುತ್ತಿದ್ದು, ಈ ಹಿಂದೆ ಕನ್ನಡತಿ ಅನುಷ್ಕಾ ಶೆಟ್ಟಿ ಜೊತೆ ಸುತ್ತಾಡುವ ಮೂಲಕ ಇವರಿಬ್ಬರು ವಿವಾಹವಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಸಿನಿಮಾ ಕೂಡ ದೊಡ್ಡ ಹಿಟ್ ಆಗಿದ್ದರಿಂದ ಸಹಜವಾಗಿಯೇ ಅಭಿಮಾನಿಗಳು ಈ ಜೋಡಿಯನ್ನು ಇಷ್ಟಪಟ್ಟಿತ್ತು. ಇಬ್ಬರು ಮದುವೆಯಾದರೆ ತುಂಬ ಚೆನ್ನಾಗಿರುತ್ತದೆ ಎಂಬ ಚರ್ಚೆ ಹುಟ್ಟಿದ್ದಂತೂ ಸುಳ್ಳಲ್ಲ. ಅದಕ್ಕೆ ಪೂರಕವಾಗಿ ಸಾಕಷ್ಟು ಗಾಸಿಪ್‌ಗಳು ಹುಟ್ಟಿಕೊಂಡವು.
ಆಗಾಗ ಅನುಷ್ಕಾ ಮತ್ತು ಪ್ರಭಾಸ್ ಒಟ್ಟಿಗೆ ಕಾಣಿಸಿಕೊಳ್ಳುವುದು ಕೂಡ ಜಾಸ್ತಿ ಆಯ್ತು. ಅದು ಇನ್ನಷ್ಟು ಗಾಸಿಪ್‌ಗೆ ಕಾರಣವಾಯ್ತು. ಆದರೆ,ಬಹಳ ವರ್ಷದಿಂದ ಈ ವಿಚಾರವಾಗಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದಿ ಹರಿದಾಡುತ್ತಿದ್ದು, ಮೊನ್ನೆ ಮೊನ್ನೆಯಷ್ಟೇ ಈ ಇಬ್ಬರು ಜೋಡಿಯ ಫೋಟೋ ಜೊತೆಗೆ ಮಗುವಿನ ಫೋಟೋಗಳನೆಲ್ಲ ಸೇರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಇದೀಗ ಜನಪ್ರಿಯ ಆಂಗ್ಲ ವೆಬ್‌ಸೈಟ್ ಪ್ರಭಾಸ್ ಮದುವೆಯ ಬಗ್ಗೆ ಆಸಕ್ತಿದಾಯಕ ಲೇಖನವೊಂದನ್ನು ಬರೆದಿದೆ. ಮದುವೆಗೆ ಅಡ್ಡಿಯಾಗುತ್ತಿರುವ ಸಮಸ್ಯೆ ಏನೆಂದು ಬಹಿರಂಗಪಡಿಸಿದೆ.
ಚಿತ್ರರಂಗದ ಬಹಳ ಸುಂದರ ಜೋಡಿಯೆಂದರೆ ಪ್ರಭಾಸ್ ಮತ್ತು ಅನುಷ್ಕಾ. ಇವರಿಬ್ಬರ ಬಾಂಧವ್ಯ ನೋಡಿದ ಅಭಿಮಾನಿಗಳು ಇಬ್ಬರೂ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂದಿದ್ದಾರೆ. ಆದರೆ ತಮ್ಮ ನಡುವೆ ಸ್ನೇಹ ಬಿಟ್ಟರೆ ಬೇರೇನೂ ಇಲ್ಲ ಎಂದು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಕೆಲವೊಮ್ಮೆ ನಕ್ಕು ಸುಮ್ಮನಾಗಿದ್ದಾರೆ. ಆದರೆ, ಅವರಿಬ್ಬರೂ 10 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ.
ಪ್ರಭಾಸ್ ಹಾಗು ಅನುಷ್ಕಾ ಪ್ರೀತಿಗೆ ಅಡ್ಡ ಬಂದ ಜಾತಕ
ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಗೆ ಜಾತಕ ಅಡ್ಡ ಬಂದಿದೆ ಎಂದು ಕೆಲವು ವರದಿಗಳು ಹೇಳುತ್ತದೆ. ಇಂಗ್ಲಿಷ್ ವೆಬ್‌ಸೈಟ್‌ನ ಪ್ರಕಾರ, ಪ್ರಭಾಸ್ ಮತ್ತು ಅನುಷ್ಕಾ ಮದುವೆಯಾಗಲು ಬಯಸಿದ್ದಾರೆ ಎನ್ನಲಾಗಿದೆ. ಅದು ಸಾಧ್ಯವಾಗದಿದ್ದರೆ, ಅವರು ತಮ್ಮ ಜೀವನದುದ್ದಕ್ಕೂ ಏಕಾಂಗಿಯಾಗಿರಲು ಬಯಸುತ್ತಾರೆ ಎನ್ನಲಾಗಿದೆ.
ಅಲ್ಲದೆ, ಜಾತಕ ಹೊಂದಾಣಿಕೆಯಾಗದ ಕಾರಣ ಪ್ರಭಾಸ್ ಕುಟುಂಬಸ್ಥರು ಮದುವೆಗೆ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ. ಪ್ರಭಾಸ್ ಅವರ ತಾಯಿ ಹೆಚ್ಚಾಗಿ ಜಾತಕ ಮತ್ತು ದೇವರನ್ನು ನಂಬುತ್ತಾರಂತೆ. ಅವರಿಂದಲೇ ಪ್ರಭಾಸ್ ಮದುವೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.ಅನೇಕ ಸಿನಿಮಾಗಳಲ್ಲಿ ಅನುಷ್ಕಾ-ಪ್ರಭಾಸ್ ಜೋಡಿಯಾಗಿ ನಟಿಸಿದ್ದಾರೆ. ಇಬ್ಬರೂ ಮದುವೆಯಾದರೆ ಚೆನ್ನಾಗಿರುತ್ತೆ ಅನ್ನೋದು ಕುಟುಂಬದ ಆಸೆ ಮಾತ್ರವಲ್ಲ, ಅಭಿಮಾನಿಗಳ ಆಶಯ ಕೂಡ. ಹಾಗಾದ್ರೆ ಸದ್ಯದಲ್ಲೇ ಈ ಜೋಡಿ ಗುಡ್ ನ್ಯೂಸ್ ಕೊಡುತ್ತಾರಾ ಕಾದುನೋಡಬೇಕಿದೆ.