ಜಾತಕದಲ್ಲಿ ಬರುವ ದೋಷಗಳ ಮಾಹಿತಿ ಅದರ ಸಮಸ್ಯೆ ಮತ್ತು ಪರಿಹಾರ ಇಲ್ಲಿದೆ…

Published on

spot_img
spot_img

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಯಾವುದೇ ವ್ಯಕ್ತಿಯ ಹುಟ್ಟಿದ ದಿನಾಂಕ ಮತ್ತು ಸಮಯ ಆಧಾರದಿಂದ ಜಾತಕ ಬರೆಯಲಾಗುವುದು, ಅದರ ಅನುಗುಣವಾಗಿ ನಕ್ಷತ್ರ, ಚರಣ, ರಾಶಿ, ತಿಳಿಯುವುದು ಸಹಜ. ಜಾತಕದಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುವ ದೋಷಗಳು ಈ ಕೆಳಗಿನಂತಿವೆ…

(1) ಗ್ರಹಣ ದೋಷ: ಜನ್ಮ ಕುಂಡಲಿಯಲ್ಲಿ ರವಿ ಮತ್ತು ಚಂದ್ರ ಸಂಯೋಗರಾಹು-ಕೇತುವಿನೊಂದಿಗೆ ಆದಾಗ ಈ ದೋಷ ಸೃಷ್ಟಿಯಾಗುವುದು. ಈ ದೋಷದಿಂದ ಕೆಳಕಂಡ ಸಮಸ್ಯೆಗಳು ಕಾಡುವವು. ಭಯಭೀತಿ ,ದುಃಸ್ವಪ್ನಗಳು, ಕೆಲಸದ ಏಕಾಗ್ರತೆ ಕೊರತೆ, ಕೆಲಸಗಳು ಅರ್ಧಕ್ಕೆ ಮೊಟಕುಗೊಳಿಸುವುದು, ದುಡುಕು ನಿರ್ಧಾರ.

(2) ಕೇಮ ಧ್ರುವ ದೋಷ: ಜನ್ಮ ಕುಂಡಲಿಯಲ್ಲಿ ಚಂದ್ರನಿರುವ ಮನೆಯ ಮುಂದೆ ಮತ್ತು ಹಿಂದೆ ಯಾವುದೇ ಗ್ರಹ ಇಲ್ಲದಿದ್ದಾಗ ಈ ದೋಷ ಉಂಟಾಗುತ್ತದೆ. ಈ ದೋಷವು ಚಂದ್ರನಿಗೆ ಸಂಬಂಧಿಸಿದ ದೋಷವಾಗಿದೆ.

(3)ಅಮಾವಾಸ್ಯೆ ದೋಷ: ಜನ್ಮ ಕುಂಡಲಿಯಲ್ಲಿ ಚಂದ್ರನಿರುವ ಸ್ಥಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಚಂದ್ರ ಮನಸ್ಸಿಗೆ ಕಾರಕನಾಗಿರುತ್ತಾನೆ. ಹಾಗಾಗಿ ಜನ್ಮಕುಂಡಲಿಯಲ್ಲಿ ರವಿ ಮತ್ತು ಚಂದ್ರ ಗ್ರಹಗಳು ಒಂದೇ ಮನೆಯಲ್ಲಿ ಸ್ಥಿತವಾಗಿದ್ದರೂ ಅಮಾವಾಸ್ಯೆ ದೋಷ ಉಂಟಾಗುತ್ತದೆ. ಈ ದೋಷದಿಂದ ಅನೇಕ ರೀತಿಯ ಸಮಸ್ಯೆಗಳು ಎದುರಿಸುವ ಪ್ರಸಂಗ ಬರುವುದು. ಆರೋಗ್ಯದ, ಹಣಕಾಸು, ವೈರಾಗ್ಯ, ಜೀವನದಲ್ಲಿ ಜಿಗುಪ್ಸೆ ಮುಂತಾದ ಸಮಸ್ಯೆಗಳು ಬರುವುದು.

(4) ಕುಜ ದೋಷ: ನಿಮ್ಮ ಜನ್ಮಕುಂಡಲಿಯಲ್ಲಿ ಲಗ್ನದಿಂದ ನಾಲ್ಕನೇ, ಏಳನೇ ಎಂಟನೇ ಮತ್ತು 12ನೇ ಮನೆಯಲ್ಲಿ ಮಂಗಳ ಇದ್ದರೆ ಕುಜ ದೋಷ ಉಂಟಾಗುತ್ತದೆ, ಈ ಕುಜದೋಷಕ್ಕೆ ಮಂಗಳ ದೋಷ ಎಂದೂ ಸಹ ಕರೆಯಬಹುದು. ಟಿ ದೋಷವಿದ್ದಾಗ ನಿಮ್ಮ ಮದುವೆ ವಿಳಂಬ, ವಿವಾಹದಲ್ಲಿ ತೊಂದರೆ, ಸ್ತ್ರೀಯರಿಗೆ ವಿಧವೆಪಟ್ಟ, ಪುರುಷರಿಗೆ ವಿಧವಾಪಟ್ಟ ಸಮಸ್ಯೆಗಳು ಬರುವುದು ಸಹಜ.

(5)ಪಿತೃ ದೋಷ; ನಿಮ್ಮ ಜನ್ಮಕುಂಡಲಿಯಲ್ಲಿ ರವಿ,ಚಂದ್ರ, ರಾಹು ಅಥವಾ ಶನಿ ಗ್ರಹಗಳಲ್ಲಿ ಯಾವುದಾದರೂ ಎರಡು ಗೃಹಗಳು ಒಂದೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು. ಈ ದೋಷದಿಂದ ಬಂಜೇತನ ನಮಸ್ತೆ ಕಾಡಲಿದೆ. ವಿಶೇಷವಾಗಿ ನಿಮ್ಮ ಪೂರ್ವಜರ ಅಂತ್ಯಸಂಸ್ಕಾರ ಸರಿಯಾದ ಕ್ರಮದಲ್ಲಿ ಮಾಡದಿದ್ದರೆ ಈ ಪಿತೃ ದೋಷ ಉಂಟಾಗುವುದು.

(6) ರಾಹು- ಗುರು ಸಂಧಿ ದೋಷ: ಗುರು ಮತ್ತು ರಾಹು ಸಂಯೋಗದಿಂದ ಈ ದೋಷ ಉಂಟಾಗುತ್ತದೆ. ರಾಹು ಮತ್ತು ಗುರು ಗ್ರಹದ ಸಂಧಿಯನ್ನು ಚಾಂಡಾಲ ದೋಷವೆಂದು ಕರೆಯುತ್ತಾರೆ. ದೋಷದಿಂದ ದುಷ್ಟರ ಸಹವಾಸ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಅಶಾಂತಿ. ಬಂಧು ಬಳಗ ದಿಂದ ವೈರಾಗ್ಯ. ಶಾಂತಿಯನ್ನು ಮಾಡಿಕೊಂಡಲ್ಲಿ ದೋಷದಿಂದ ಮುಕ್ತಿ ಪಡೆಯಬಹುದು.

(7) ಕಾಳಸರ್ಪ ದೋಷ: ನಿಮ್ಮ ಜನ್ಮಕುಂಡಲಿಯಲ್ಲಿ ರಾಹು-ಕೇತು ವಿನೊಂದಿಗೆ ಉಂಟಾಗುವ ದೋಷವೇ ಕಾಳಸರ್ಪದೋಷ. ಈ ದೋಷ ಹೊಂದಿದವರು ರಾಜಯೋಗಕ್ಕೆ ಸಮಾನ. ಈ ದೋಷದಿಂದ ಸಂತಾನದಲ್ಲಿ ಗರ್ಭ ನಷ್ಟ, ಮದುವೆ ವಿಳಂಬ, ಕುಟುಂಬ ಕಲಹ, ಹಣಕಾಸಿನಲ್ಲಿ ತೊಂದರೆ, ವ್ಯಾಪಾರ-ವಹಿವಾಟದಲ್ಲಿ ಏರುಪೇರು, ಅನುಭವಿಸುವ ಪ್ರಸಂಗ ಬರುವುದು.

(8) ಪ್ರೇತ ದೋಷ: ನಿಮ್ಮ ಜನ್ಮಕುಂಡಲಿಯಲ್ಲಿ ಒಂದೇ ಮನೆಯಲ್ಲಿ ಚಂದ್ರನೊಂದಿಗೆ ರಾಹು ಸಂಯೋಗ ಒಂದಿದ್ದರೆ ಪ್ರೇತ ದೋಷ ಉಂಟಾಗುವುದು. ಅಷ್ಟೇ ಅಲ್ಲದೆ 5ನೇ ಮತ್ತು 9ನೇ ಮನೆಯಲ್ಲಿ ಯಾವುದಾದರೂ ಕೂರ ಗ್ರಹವಿದ್ದರೆ, ಕೆಟ್ಟ ಶಕ್ತಿಯ ಪ್ರಭಾವ ಒಳಗಾಗುತ್ತೀರಿ. ಭೂತ, ಪ್ರೇತ ಪಿಶಾಚಿಗಳಿಂದ ಭಯ.

(9)ಶನಿ ದೋಷ: ಶನಿ ಗ್ರಹ ಒಲಿದರೆ ಹೆಚ್ಚಿನ ಫಲ ನಿರೀಕ್ಷೆ ಮಾಡುವಿರಿ. ಶನಿ ದೋಷ ಇದ್ದರೆ ಕೆಲವೊಮ್ಮೆ ಅಶುಭ ಫಲ ಪಡೆಯುವಿರಿ. ಈ ಶನಿದೋಷ ಇದ್ದಾಗ ಸಮಾಜದಲ್ಲಿ ಅಪಮಾನ, ಪ್ರಯತ್ನ ವಿಫಲ, ಮಂಗಳ ಕಾರ್ಯ ವಿಳಂಬ, ವ್ಯಾಪಾರದಲ್ಲಿ ತೀವ್ರ ನಷ್ಟ ಅನುಭವಿಸಿವಿರಿ.

Source link

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!