spot_img
spot_img
spot_img
spot_img
spot_img
spot_img

ಡಿಸಿಎಂ ಜನಸ್ಪಂದನಾ ಕಾರ್ಯಕ್ರಮದಲ್ಲಿ ನಡೆದ ಇಂಟ್ರಸ್ಟಿಂಗ್‌ ಫ್ಯಾಕ್ಟ್‌ ಇಲ್ಲಿದೆ!

Published on

spot_img

ಬೆಂಗಳೂರು: ಕಣ್ಣು ಹಾಯಿಸಿದಷ್ಟು ದೂರವೂ ಜನವೋ ಜನ.. ಸಮಸ್ಯೆ ಬಗೆಹರಿಸುವಂತೆ ಸರತಿ‌ ಸಾಲಿನಲ್ಲಿ ನಿಂತಿರುವ ಸಾರ್ವಜನಿಕರು. ಬೆಂಗಳೂರು ವಿವಿಧ ಇಲಾಖೆಗಳ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಜನ‌ ಸಂಪರ್ಕ ಸಭೆ ನಡೆಸಿದ್ದಾರೆ. ಸಾವಿರಾರು ದೂರುಗಳನ್ನ ಸ್ವೀಕರಿಸಿ ಪರಿಶೀಲನೆ ನಡೆಸಿ, ಶೀಘ್ರವೇ ಸೂಕ್ತ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಡಿಸಿಎಂ ಖಡಕ್ ಸೂಚನೆ ನೀಡಿದ್ದಾರೆ.

ಬಾಗಿಲಿಗೆ ಬಂತು ಸರ್ಕಾರ, ಇರಲಿ ನಿಮ್ಮ ಸಹಕಾರ ಎಂಬ ಶೀರ್ಷಿಕೆಯಡಿ ಇಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಡಿಸಿಎಂ ಡಿಕೆ. ಶಿವಕುಮಾರ್ ಜನ ಸಂಪರ್ಕ ಸಭೆ ಆಯೋಜಿಸಿದ್ದರು. ಬೆಂಗಳೂರಿನ ಐಟಿಐ ಗ್ರೌಂಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್, ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಲಿಂಬಾವಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ಬಿಬಿಎಂಪಿ, ಬೆಸ್ಕಾಂ, ಬಿಡ್ಯುಎಸ್ ಎಸ್ ಬಿ, ಬಿಡಿಎ, ಬಿಎಂಆರ್ಸಿಎಲ್, ಕೊಳಗೇರಿ ಅಭಿವೃದ್ಧಿ ನಿಗಮ ಸೇರಿದಂತೆ ಎಲ್ಲ ಇಲಾಖೆಯ ಕುಂಕು ಕೊರತೆಯ ಅಹವಾಲುಗಳನ್ನ ಸ್ವೀಕರಿಸಲಾಯಿತು. ಇದರ ಜೊತೆಗೆ ಜೊತೆಗೆ‌ ಗ್ಯಾರಂಟಿ ಯೋಜನೆಗಳ ಸಮಸ್ಯೆಗಳನ್ನ‌ ಹೊತ್ತು ಕೆಲ ಜನರು ಆಗಮಿಸಿದ್ದರು.

ಮೊದಲು ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಕುಳಿತ ಬಳಿಯೇ ತೆರಳಿದ ಡಿಸಿಎಂ ಡಿಕೆ ಶಿವಕುಮಾರ್, ಒಬ್ಬೊಬ್ಬರ ಸಮಸ್ಯೆಯನ್ನೇ ಆಲಿಸಿದ ಡಿಸಿಎಂ,ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು. ಈ ವೇಳೆ ಕೆ.ಆರ್.ಪುರದ ಶಾಸಕ ಬೈರತಿ ಬಸವರಾಜ್ ಹಾಗೂ ಮಹಾದೇವಪುರದ ಶಾಸಕಿ ಮಂಜುಳಾ‌ ಲಿಂಬಾವಳಿ ಕೂಡ ಡಿಕೆಗೆ ಸಾಥ್ ನೀಡಿದ್ರು

ಹಿರಿಯ ನಾಗರಿಕರು ಹಾಗೂ ಅಂಗವಿಕಲರ ತಮ್ಮ‌ ಸಮಸ್ಯೆಯನ್ನ ಹೇಳಿಕೊಂಡ ಬಳಿಕ ಟೋಕನ್ ಪಡೆದುಕೊಂಡ ಮೂರು ಸಾವಿರಕ್ಕೂ ಹೆಚ್ಚು ಜನ ತಮ್ಮ ಏರಿಯಾದ ಕುಂದುಕೊರತೆಯನ್ನ ಡಿಕೆಶಿ ಗಮನಕ್ಕೆ ತಂದರೂ..ಸರತಿ ಸಾಲಿನಲ್ಲಿ ಬಂದ ಜನರು ತಮ್ಮ ಸಮಸ್ಯೆಗಳ ಡಿಕೆಶಿ ಮುಂದೆ ತೆರೆದಿಟ್ರು. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ ಡಿಸಿಎಂ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ರು. ಈ ವೇಳೆ ಎ ಖಾತ ಮಾಡಿಕೊಡುವುದಾಗಿ 1 ಲಕ್ಷ ವಂಚಿಸದ ಬಗ್ಗೆ ಡಿಸಿಎಂಗೆ ಮಹಿಳೆಯೊಬ್ಬರು ದೂರು ನೀಡಿದ್ರು. ಕೂಡಲೇ ಸ್ವಂದಿಸಿದ ಡಿಸಿಎಂ ಬಿಬಿಎಂಪಿ ಕಮಿಷನರ್ ಗಮನಕ್ಕೆ ತಂದು ಈಗಾಗಲೇ ತನಿಖೆ ನಡೆಸಿ ಸಂಬಂಧಪಟ್ಟರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ರು

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಕೂಡಲೇ ಸಂಬಂಧಪಟ್ಟ ವಲಯ ಅಧಿಕಾರಿಗಳಿಗೆ ತನಿಖೆಗೆ ಸೂಚಿಸಿದ್ದೇನೆ..ಬಿಬಿಎಂಪಿ ಅಧಿಕಾರಿಗಳೇ ಆಗಿದ್ದಾರೆ ಕೂಡಲೇ ಸಸ್ಪೆಂಡ್ ಮಾಡ್ತೀವಿ..ಖಾಸಗಿ ವ್ಯಕ್ತಿಗಳೇ ಆಗಿದ್ರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಅಂದ್ರು

ಜನರ ಅವಾಹಾಲು ಅರ್ಜಿ ಪರಿಶೀಲಿಸಿ, ಸಮಸ್ಯೆ ಆಲಿಸಿ, ಯಾವ ಇಲಾಖೆಗೆ ಸಂಬಂಧಪಡುತ್ತೆ ಅಂತ ಬರೆದು ಸಹಿ ಮಾಡಿ, ಆ ಇಲಾಖೆ ಕೌಂಟರ್ ಗೆ ತೆರಳುವಂತೆ ಸೂಚಿಸಿದ್ರು. ಬೆಂಗಳೂರಿನ‌ ನಗರಕ್ಕೆ ಒಳಪಡುವ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ‌ ಸೇರಿ ಸಂಬಂಧಪಟ್ಟ ಡಿಪಾರ್ಟಮೆಂಟ್ ಕೌಂಟರ್ ಗೆ ಹೋಗಿ ಜನ ದೂರನ್ನ ರಿಜಿಸ್ಟರ್ ಮಾಡಸಿದ್ರು.

ಈ ಕಾರ್ಯಕ್ರಮ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ…ಇವತ್ತು ಎಲ್ಲಾ ನಾಯಕರು ಪಕ್ಷಭೇದ ಮರೆತು ಇಂದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ..ಜನರ ಸಮಸ್ಯೆ ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಪರಿಹಾರ ನೀಡುವ ಕೆಲಸ ಮಾಡುತ್ತೇವೆ…ಇಡೀ ತಿಂಗಳು ಈ ಕಾರ್ಯಕ್ರಮ ನಡೆಯಲಿದೆ..ಜನರ ಸೇವೆ ಮಾಡುವ ಕೆಲಸ ಮಾಡುತ್ತೇವೆ ಅಂದ್ರು. ಇವು ಒಂದು ದಿನ ಮುಗಿಯುವ ಸಮಸ್ಯೆ ಅಲ್ಲ..ಇದನ್ನು ಫಾಲೋ ಮಾಡೋಕೆ ಒಂದು ಟೀಮ್ ಇದೆ.. ನಮ್ಮ ಅಧಿಕಾರಿಗಳು ತಿಂಗಳ ಆದರೂ ಫಾಲೋ ಅಫ್ ಮಾಡಿ ಸಮಸ್ಯೆಗೆ ಪರಿಹಾರ ನೀಡ್ತಾರೆ ಅಂತ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿದ್ರು.

ನಾಗರಿಕರ ಅಹವಾಲು ಹಾಗೂ ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆಗೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿನ 28 ವಿಧಾನಸಭಾ ಕ್ಷೇತ್ರಗಳು ನಡೆಯಲಿದೆ ಮಹತ್ವಪೂರ್ಣ ಕಾರ್ಯಕ್ರಮ ನಡೆಯಲಿದೆ. ಎರಡು ಅಥವಾ ಮೂರು ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಈ ಕಾರ್ಯಕ್ರಮ‌ ನಡೆಯಲಿದ್ದು, ಇವತ್ತು ನಡೆದ ಮೊದಲ ಮನೆ ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮ ಯಶಸ್ವಿಯಾಯ್ತು.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!