ವಿವೇಕವಾರ್ತೆ : ಬಾಗಲಕೋಟೆ ಜಿಲ್ಲೆಯ ಕಾರಲ್ಲೇ ಕುಳಿತಾಗ ಹೃದಯಾಘಾತ ಸಂಭವಿಸಿ ಜಿಲ್ಲಾ ಆರ್ ಎಸ್.ಎಸ್ ಮುಖಂಡರೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ನಿವಾಸಿ ಸಿದ್ದು ಚಿಕ್ಕದಾನಿ (35) ಎಂಬುವರಿಗೆ ಹೃದಯಾಘಾತವಾಗಿ ಕಾರಲೇ ಪ್ರಾಣಬಿಟ್ಟ ವ್ಯಕ್ತಿ.
ಕಾರಿಗೆ ಡೀಸೆಲ್ ಹಾಕಿಸಿಕೊಂಡು, ಪೆಟ್ರೋಲ್ ಬಂಕ್ ನಿಂದ ಹೊರಡಲು ಮುಂದಾದ ಮಾಡಿದ್ದರು. ಸ್ಟಾರ್ಟ್ ಆದ ಕಾರ್ ಪೆಟ್ರೋಲ್ ಬಂಕ್ ಆವರಣದಲ್ಲೇ ಇರುವಾಗಲೇ ಸಿದ್ದು ಅವರಿಗೆ ಹೃದಯಾಘಾತ ವಾಗಿದೆ,
ಇಡೀ ರಾತ್ರಿ ಪೆಟ್ರೋಲ್ ಬಂಕ್ ಅವರಣದಲ್ಲೇ ಕಾರು ಇದ್ದದ್ದನ್ನ ಬೆಳಿಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಗಮನಿಸಿ, ಕಾರು ಬಾಗಿಲು ತೆರೆದು ನೋಡಿದಾಗ ಸಿದ್ದು ಚಿಕ್ಕದಾನಿ ಅವ್ರು ಸಾವನ್ನಪ್ಪಿರುವದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಆಗಮಿಸಿದ ಮುಧೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..