ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ‘ಜೆಡಿಎಸ್’ ಟಾಕ್ಸಿಕ್ ಸಿನಿಮಾದ ಟೀಸರ್ ಶೈಲಿಯನ್ನೇ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ರಾಜಕಾರಣದಲ್ಲಿ ಮೊದಲಿನಂತೆ ಸಕ್ರಿಯವಾಗಿಲ್ಲ ಎಂಬ ಆರೋಪಗಳು ಇದೆ.
ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿ ಕುಟುಕುವ ಹೆಚ್ ಡಿಕೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂಬ ಮಾತಿದೆ. ಇದೀಗ ಜೆಡಿಎಸ್ ಟಾಕ್ಸಿಕ್ ಸಿನಿಮಾದ ಟೀಸರ್ ರೀತಿಯನ್ನೇ ಎಐ ವಿಡಿಯೋವೊಂದನ್ನು ಹಂಚಿಕೊಂಡು ಮತ್ತೆ ಕುಮಾರಸ್ವಾಮಿ 2028 ಕ್ಕೆ ಮತ್ತೆ ರಾಜ್ಯ ರಾಜಕೀಯಕ್ಕೆ ಬರುವ ಸುಳಿವನ್ನ ರಿವೀಲ್ ಮಾಡಿದೆ.
ಹೆಚ್ ಡಿ ಕುಮಾರಸ್ವಾಮಿ ಫೇಸ್ ಬುಕ್ ಪೇಜ್ ಈ ವಿಡಿಯೋ ಕ್ರಿಯೇಟ್ ಮಾಡಿ ಕಾಂಗ್ರೆಸ್ ಗೂ ಟಾಂಗ್ ನೀಡಿದೆ. ಟಾಕ್ಸಿಕ್ ಸಿನಿಮಾ ಶೈಲಿಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಎಂಟ್ರಿಯನ್ನು ತೋರಿಸಿದೆ. ಮುಂದಿನ ವಿಧಾನಸಭೆ ವೇಳೆ ಹೆಚ್ಡಿಕೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿದ್ದು, ಹೆಚ್ಡಿಕೆ ಬೆಂಬಲಿಗರು ಫುಲ್ ಖುಷ್ ಆಗಿದ್ದಾರೆ. 2028 ರಿಂದ ರಾಜ್ಯ ರಾಜಕಾರಣದಲ್ಲಿ ಹೆಚ್ಡಿಕೆ ಇನ್ನಿಂಗ್ಸ್ ಆರಂಭವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
https://x.com/iamyashikarsy/status/2009623291242442898?ref_src=twsrc%5Etfw%7Ctwcamp%5Etweetembed%7Ctwterm%5E2009623291242442898%7Ctwgr%5E20c256140036e1ca9bad3a7fd6eb26eee376e930%7Ctwcon%5Es1_c10&ref_url=https%3A%2F%2Fapi-news.dailyhunt.in%2F
ಟೆಂಟ್’ನಲ್ಲಿ ನೀಲಿ ಸಿನಿಮಾ ತೋರಿಸಿದ “ದಂಧೆಕೋರನ ಆತ್ಮರತಿ” ಎಂತಹದ್ದು? : ಜೆಡಿಎಸ್ ವಾಗ್ಧಾಳಿ
ಸಿಡಿ ಫ್ಯಾಕ್ಟರಿ ಮಾಲೀಕನ “ಮನೆಹಾಳು ಆತ್ಮರತಿ” ಬಗ್ಗೆ @INCKarnataka ಮರೆತಿದೆ! ಟೆಂಟ್’ನಲ್ಲಿ ನೀಲಿ ಸಿನಿಮಾ ತೋರಿಸಿದ “ದಂಧೆಕೋರನ ಆತ್ಮರತಿ” ಎಂತಹದ್ದು? “ಕಲೆಕ್ಷನ್ ಗಿರಾಕಿಯ ಆತ್ಮರತಿ” ಇರುವುದು ಮಸಾಜ್ ಪಾರ್ಲರ್’ಗಳಲ್ಲಿ ಅಲ್ಲವೇ ? “ಹನಿಟ್ರಾಪ್ ಅಧ್ಯಕ್ಷನ ಆತ್ಮರತಿ”ಗೆ ಸಂಪುಟದ ಮಂತ್ರಿಗಳು, ಶಾಸಕರೇ ಬಲಿಪಶುಗಳಲ್ಲವೇ ? ದೀನ ದಲಿತರು, ಬಡವರು, ಮಹಿಳೆಯರ ಜಮೀನು ಕಬಳಿಸುವ ರಿಯಲ್ ಎಸ್ಟೇಟ್ ಏಜೆಂಟ್’ನ ಆತ್ಮರತಿ ಬಗ್ಗೆ ಬೆಂಗಳೂರಿಗೇ ಚಿರಪರಿಚಿತ. “ಸ್ವಾರ್ಥ ಸಾಧನೆಗೆ ಬ್ಲ್ಯಾಕ್ ಮೇಲ್” ಮಾಡುವ ಆತ್ಮರತಿಯ ರಾಜಕಾರಣಿಯ ಅನಾಚಾರಗಳ ದೊಡ್ಡ ಪಟ್ಟಿಯೇ ಇದೆ. ರೌಡಿ ರಾಜಕಾರಣಿಯ ಅನುಭವದ ಕೊಚ್ಚೆಗೆ ಯಾರು ತಾನೆ ಸಮ. ನಿಮಗೆ ಯಾರೂ ಪ್ರತಿಸ್ಪರ್ಧಿಗಳೇ ಇಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ರೋಲ್ ಕಾಲ್ ಅಧ್ಯಕ್ಷ? ಎಂದು ಜೆಡಿಎಸ್ ವಾಗ್ಧಾಳಿ ನಡೆಸಿದೆ.
https://x.com/JanataDal_S/status/2009836319686701104?ref_src=twsrc%5Etfw%7Ctwcamp%5Etweetembed%7Ctwterm%5E2009836319686701104%7Ctwgr%5Ef063dbc3cb58f2e8d768158e058757c7b0fd763d%7Ctwcon%5Es1_c10&ref_url=https%3A%2F%2Fapi-news.dailyhunt.in%2F




