spot_img
spot_img
spot_img
spot_img
spot_img
spot_img

ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ನರೇಗಲ್​​ ಕಾನ್ಸ್​ಟೇಬಲ್ ಸಸ್ಪೆಂಡ್

Published on

spot_img

ವಿವೇಕವಾರ್ತೆ : ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪೊಲೀಸ್​ ಠಾಣೆಯ ಪಿಎಸ್‌ಐ ನಿಖಿಲ್ ಕಾಂಬ್ಳೆ, ಕಾನ್ಸ್​ಟೇಬಲ್​ ಶಂಕರ್ ನಾಲಕರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ರಕ್ಷಣೆ ಕೊಡಬೇಕಿದ್ದ ಪೊಲೀಸರೇ (Naregal Police Station) ಕಾಲೇಜು ವಿದ್ಯಾರ್ಥಿನಿ (Student) ಜೊತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡ ಗದಗ ಪೊಲೀಸ್​ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಇಬ್ಬರನ್ನೂ ಅಮಾನತು (Suspend) ಮಾಡಿದ್ದಾರೆ. ಆದರೆ ಮತ್ತೊಂದೆಡೆ PSI ನಿಖಿಲ್ ವಿದ್ಯಾರ್ಥಿನಿಗೆ ಕಿರುಕುಳ ಆರೋಪ ತಳ್ಳಿಹಾಕಿದ್ದಾರೆ.

ವಿದ್ಯಾರ್ಥಿನಿಗೆ ಕಿರುಕುಳ ಆರೋಪ ತಳ್ಳಿಹಾಕಿದ PSI ನಿಖಿಲ್

ಇನ್ನು PSI ನಿಖಿಲ್ ಅವರು ವಿದ್ಯಾರ್ಥಿನಿ ಮಾಡಿದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ನಾನು ಫೋನ್ ಕರೆ ಮಾಡಿಲ್ಲ, ಮೆಸೇಜ್‌ ಕೂಡ ಮಾಡಿಲ್ಲ. ನನ್ನ ವಿರುದ್ಧ ಯಾಕೇ ಆರೋಪ‌ ಮಾಡ್ತಿದ್ದಾರೋ ಗೊತ್ತಿಲ್ಲ. ವಿದ್ಯಾರ್ಥಿನಿ ನನ್ನ ವಿರುದ್ಧ ಮಾಡಿರುವ ಆರೋಪ ಶುದ್ಧ ಸುಳ್ಳು. ನನ್ನದೇನೂ ತಪ್ಪಿಲ್ಲ ಎಂದು ಖಾಸಗಿ ವಾಹಿನಿಗೆ ಅಮಾನತಾದ ಪಿಎಸ್‌ಐ ನಿಖಿಲ್ ಕಾಂಬ್ಳೆ ಹೇಳಿಕೆ ನೀಡಿದ್ದಾರೆ.

ಘಟನೆ ಹಿನ್ನೆಲೆ

ಪಡ್ಡೆ ಹಡುಗರು ಕಾಲೇಜ್ ವಿದ್ಯಾರ್ಥಿನಿಯರಿಗೆ ಸೊನ್ನೆ ಮಾಡಿ ಚುಡಾಯಿಸೋದು ಕಾಮನ್. ಆದರೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಪೊಲೀಸ್ ಕಾನ್ಸ್​ಟೇಬಲ್ ನಿಂದ ಈ ಘಟನೆ ನಡೆದಿದೆ. ಕಾಲೇಜ್ ವಿದ್ಯಾರ್ಥಿನಿಗೆ ಪಿಎಸ್‌ಐ, ಪೊಲೀಸ್, ಕಾನ್ಸ್​ಟೇಬಲ್ ಕಿರುಕುಳ ನೀಡ್ತಾಯಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನರೇಗಲ್ ಪೊಲೀಸ್ ಠಾಣೆಯ ಪಿಎಸ್‌ಐ ನಿಖಿಲ್ ಕಾಂಬ್ಳೆ ಹಾಗೂ ಪೊಲೀಸ್ ಕಾನ್ಸ್​ಟೇಬಲ್ ಶಂಕರ ನಾಲಕರ್ ವಿರುದ್ಧ ವಿದ್ಯಾರ್ಥಿನಿ ಗಂಭೀರವಾದ ಆರೋಪ‌ ಮಾಡಿದ್ದಾಳೆ. ನಿತ್ಯ ನರೇಗಲ್ ಪಟ್ಟಣದಿಂದ ಹುಬ್ಬಳ್ಳಿಗೆ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿ ಪೊಲೀಸ್ ಠಾಣೆ ಬಳಿಯೇ ಬಸ್ ಹತ್ತ ಬೇಕು. ಬಸ್​ಗಾಗಿ ಕಾಯುವಾಗ ಪಿಎಸ್‌ಐ ನಿಖಿಲ್ ಅವಳನ್ನು ಚೂಡಾಯಿಸಿದ್ದಾರಂತೆ. ವಿದ್ಯಾರ್ಥಿನಿಯ ಗೆಳತಿಯ ಹತ್ತಿರ ನೊಂದ ವಿದ್ಯಾರ್ಥಿನಿ ಮೊಬೈಲ್ ನಂಬರ್ ಪಡೆದುಕೊಂಡು ಪಿಎಸ್‌ಐ ಕಾಲ್ ಮಾಡಿದ್ದಾರೆ. ಆದರೆ ಯುವತಿ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಇನ್ನೂ ಪೊಲೀಸ್ ಕಾನ್ಸ್​ಟೇಬಲ್ ಶಂಕರ್ ನಾಲಕರ್ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾರ್ಥಿನಿ ಮೊಬೈಲ್ಗೆ ಅಶ್ಲೀಲ ಮೆಸೇಜ್ ಮಾಡೋ‌ ಮೂಲಕ, ಕಿರುಕುಳ ನೀಡುತ್ತಿದ್ದಾರೆ ಎಂದು ನೊಂದ ವಿದ್ಯಾರ್ಥಿನಿ ಅಳಲು ತೊಡಿಕೊಂಡಿದ್ದಾಳೆ.

ಇನ್ನೂ ಪೊಲೀಸ್ ಕಾನ್ಸ್​ಟೇಬಲ್ ವಿದ್ಯಾರ್ಥಿನಿಗೆ ಮಾಡಿರೋ ಮೆಸೇಜ್ ನೋಡಿದ್ರೆ, ಪೊಲೀಸ್ ಇಲಾಖೆಯ ಮಾನ ಮರ್ಯಾದೆಯನ್ನು ಹಾಳು ಮಾಡಿದ್ದಾನೆ. ನಿಮ್ಮ ಪಿಎಸ್‌ಐ ಮುಂದೆ ಹೇಳ್ತಿನಿ ಅಂದ್ರೆ, ಅವನಿಗೆ ನಾನೇ ಹಣ ತೆಗೆದುಕೊಂಡು ಬಂದು ಕೊಡೋದು ಅವನು ಏನೂ ಮಾಡಲ್ಲಾ. ಹಾಗೇ ನಿಮ್ಮ ಎಸ್ಪಿ ಅವರ ಗಮನಕ್ಕೆ ತರುತ್ತೇನೆ ಅಂದ್ರು ಈ ಪೊಲೀಸ್ ಕಾನ್ಸ್​ಟೇಬಲ್ ಅವರಿಗೂ ಏನೂ ಮಾಡೋಕ ಆಗಲ್ಲಾ ಅಂತ ಮೇಸೆಜ್ ಮಾಡಿದ್ದಾನೆ. ಒಟ್ನಲ್ಲಿ ನೀನು ನನಗೆ ಬೇಕು ಅಂತಾ ಮೆಸೇಜ್ ಮಾಡಿದ್ದಾನೆ. ಹೀಗಾಗಿ ನಾವು ಯಾರ ಕಡೇ ಹೋಗಬೇಕು ಅಂತಾ ಯುವತಿ ಅಳಲು ತೋಡಿಕೊಂಡಿದ್ದಾಳೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!