ತೆರೆದ ಟ್ರಕ್‌ನಲ್ಲಿ ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿದ ಹಮಾಸ್ ಉಗ್ರರು

Published on

spot_img
spot_img

ಟೆಲ್ ಅವಿವ್: ಇಸ್ರೇಲ್ (Israel) ಮೇಲೆ ಹಮಾಸ್ ಉಗ್ರರು (Hamas Militants) ನಡೆಸಿದ ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ದಾಳಿ ವೇಳೆ ಹಮಾಸ್ ಉಗ್ರರು ಇಸ್ರೇಲಿ ಮಹಿಳೆಯೊಬ್ಬರ (Israeli Woman) ಬೆತ್ತಲೆ ದೇಹವನ್ನು ತೆರೆದ ಟ್ರಕ್‌ನಲ್ಲಿ (Open Truck) ಮೆರವಣಿಗೆ (Parade) ಮಾಡಿ ಕ್ರೌರ್ಯ ಮೆರೆದಿದ್ದಾರೆ.

ದಾಳಿ ವೇಳೆ ಹುತಾತ್ಮರಾದ ಅಮಾಯಕ ನಾಗರಿಕರ ಮೃತದೇಹಗಳನ್ನು ತೆರೆದ ಟ್ರಕ್‌ನಲ್ಲಿ ಇರಿಸಿ ಮೆರವಣಿಗೆ ಮಾಡಿದ್ದು, ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಪ್ಯಾಲೆಸ್ಟಿನಿಯನ್ ನಾಗರೀಕರು ಮಹಿಳೆಯ ಮೃತದೇಹವನ್ನು ನಿಂದಿಸಿ ಬಳಿಕ ಉಗುಳುವುದನ್ನು ಈ ವೀಡಿಯೋದಲ್ಲಿ ನೋಡಬಹುದು. ನಂತರ ಕಪಾಳಮೋಕ್ಷ ಮಾಡುವುದನ್ನು ಸಹಾ ವೀಡಿಯೋದಲ್ಲಿ ಕಾಣಬಹುದು. ಕ್ಷಿಪಣಿ ದಾಳಿಯ ಬಳಿಕ ಪ್ಯಾಲೆಸ್ಟಿನಿಯಾದವರು ದಕ್ಷಿಣ ಇಸ್ರೇಲ್‌ಗೆ ನುಸುಳಿದ್ದು, ತೆರೆದ ಟ್ರಕ್‌ಗಳಲ್ಲಿ ಬೀದಿ ಬೀದಿ ಸುತ್ತುತ್ತಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ನಾಗರಿಕರನ್ನು ಕೊಲ್ಲುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಹಮಾಸ್ ಉಗ್ರರು 5ಂಕ್ಕೂ ಹೆಚ್ಚು ಇಸ್ರೇಲ್ ಸೈನಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ತಿಳಿದುಬಂದಿದೆ. ಹಲವು ವರ್ಷಗಳಲ್ಲಿ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಅತ್ಯಂತ ಬೃಹತ್ ದಾಳಿ ಇದಾಗಿದೆ ಎಂದು ಹೇಳಲಾಗುತ್ತಿದೆ. ಈ ದಾಳಿಯಲ್ಲಿ ಪ್ರಾಣ ಕಳೆದಕೊಂಡವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ.

ಶನಿವಾರ ಬೆಳಗ್ಗೆ ಗಾಜಾ ಪಟ್ಟಿಯಿಂದ ಇಸ್ರೇಲ್‌ಗೆ ಸುಮಾರು 5,000 ರಾಕೆಟ್‌ಗಳನ್ನು ಹಾರಿಸಿ ದಾಳಿ ನಡೆಸಲಾಯಿತು. ಕ್ಷಿಪಣಿ ದಾಳಿಯ ನೆಪದಲ್ಲಿ ಹಮಾಸ್ ಉಗ್ರರು ಇಸ್ರೇಲ್ ಗಡಿಯೊಳಗೆ ನುಸುಳಿದ್ದಾರೆ. ಸುಮಾರು 50-60 ಉಗ್ರರು ಇಸ್ರೇಲ್ ಗಡಿಯನ್ನು ಪ್ರವೇಶಿಸಿ ವಿಧ್ವಂಸಕತೆಯನ್ನು ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ.

ಕೃಪೆ

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!