ಯುವತಿ ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡ ಹಮಾಸ್ ಉಗ್ರರು

Published on

spot_img
spot_img

ವಿವೇಕವಾರ್ತೆ: ಇಸ್ರೇಲ್‍ನಲ್ಲಿ (Isreal) ಹಮಾಸ್ ಉಗ್ರರು (HamasTerrorist) ನಡೆಸುತ್ತಿರುವ ರಕ್ತಪಾತ ಮುಂದುವರಿದಿದೆ. ಅನೇಕ ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡು ಹಮಾಸ್ ಉಗ್ರರು ಬೆದರಿಕೆ ಹಾಕುತ್ತಿದ್ದಾರೆ. ಹೀಗೆ ಉಗ್ರರ ಕೈಗೆ ಸಿಲುಕಿರುವವರಲ್ಲಿ ಅಮೆರಿಕ (America) ಮೂಲದ ಯುವತಿ ಹಾಗೂ ಆಕೆಯ ತಾಯಿ ಕೂಡ ಇದ್ದಾರೆ.

ಚಿಕಾಗೋದ 18 ವರ್ಷದ ನಟಾಲಿ ರಾನನ್ ಗಾಜಾಕ್ಕೆ ಕರೆದೊಯ್ಯಲ್ಪಟ್ಟಿದ್ದಾರೆ. ಈಕೆ ಹಮಾಸ್‍ನಿಂದ ಒತ್ತೆಯಾಳಾಗಿಸಿಕೊಂಡಿರುವ ಯುಸ್ ನಾಗರಿಕರಲ್ಲಿ ಒಬ್ಬರಾಗಿದ್ದಾರೆ. ನಟಾಲಿ ತನ್ನ ತಾಯಿ ಜುಡಿತ್ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಇಬ್ಬರನ್ನೂ ಉಗ್ರರು ಅಪಹರಿಸಿದ್ದಾರೆ.


ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಯುದ್ಧದಲ್ಲಿ 60 ಕ್ಕೂ ಹೆಚ್ಚು ಪ್ರಜೆಗಳು ಸಾವನ್ನಪ್ಪಿದ್ದಾರೆ. ಯುದ್ಧದಲ್ಲಿ ಈವರೆಗೆ ಅಮೆರಿಕಾದ 9 ಮಂದಿ ಸಾವಿಗೀಡಾಗಿದ್ದಾರೆ. ಕೆನಡಾ – 1 (ಇಬ್ಬರು ಕಾಣೆ), ಗ್ರೇಟ್ ಬ್ರಿಟನ್ – 10 ಕ್ಕೂ ಹೆಚ್ಚು ಮಂದಿ ಸಾವು ಅಥವಾ ಕಾಣೆಯಾಗಿದ್ದಾರೆ. ಫ್ರಾನ್ಸ್ – 1 ಸಾವು (ಹಲವಾರು ಕಾಣೆ), ಥೈಲ್ಯಾಂಡ್ – 12 ಸಾವು (11 ಕಾಣೆ), ನೇಪಾಳ – 10 ಸಾವನ್ನಪ್ಪಿದ್ದಾರೆ.

ಜರ್ಮನಿ – ದೃಢೀಕರಿಸದ/ಕಾಣೆಯಾದ ಸಾವಿನ ಸಂಖ್ಯೆ, ರಷ್ಯಾ – 1, ಕಾಂಬೋಡಿಯಾ – 1, ಚೀನಾ – ಸಾವು/ಹಾನಿಗಳ ಸಂಖ್ಯೆಯನ್ನು ದೃಢೀಕರಿಸಲಾಗಿಲ್ಲ. ಬ್ರೆಜಿಲ್ – 3 ಮಂದಿ ಗಾಯಗೊಂಡಿದ್ದಾರೆ. ಪರಾಗ್ವೆ – 2 ಸಾವು ಅಥವಾ ಕಾಣೆ, ಉಕ್ರೇನ್ – ಇಬ್ಬರು ಮೃತಪಟ್ಟಿದ್ದಾರೆ. ಮೆಕ್ಸಿಕೋದ ಇಬ್ಬರು ಕೈದಿಗಳು, ಐಲೆರ್ಂಡ್‍ನ ಒಬ್ಬರು ಗಾಯಗೊಂಡಿದ್ದಾರೆ. ತಾಂಜಾನಿಯಾದ ಇಬ್ಬರು ಗಾಯಗೊಂಡಿದ್ದಾರೆ.

ಕೃಪೆ

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!