spot_img
spot_img
spot_img
spot_img
spot_img
spot_img

ಘಟಪ್ರಭಾದಲ್ಲಿ ಅರಭಾಂವಿಮಠದ ಶ್ರೀಗಳಿಗೆ ಅದ್ಧೂರಿ ಸ್ವಾಗತ

Published on

spot_img

ವರದಿ- ವಿವೇಕ್ ಕುದರಿಮಠ
ಘಟಪ್ರಭಾ : ಸಮೀಪದ ಅರಭಾಂವಿಮಠದ ಶ್ರೀ ದುರದುಂಡೇಶ್ವರ ಮಠದ ನೂತನ ಜಗದ್ಗುರುಗಳಾದ ಶ್ರೀಮನಿಪ್ರಸ್ವ ಗುರುಬಸವಲಿಂಗ ಮಹಾಸ್ವಾಮಿಗಳ ಪುರ ಪ್ರವೇಶ ಕಾರ್ಯಕ್ರಮದ ಹಿನ್ನಲೆಯಲ್ಲಿ ಘಟಪ್ರಭಾ ಪಟ್ಟಣ ನಿವಾಸಿಗಳು ಸೋಮವಾರ ಅದ್ದೂರಿಯಿಂದ ಬರಮಾಡಿಕೊಂಡರು.
ಪುರ ಪ್ರವೇಶ ಕಾರ್ಯಕ್ರಮದ ನಿಮಿತ್ತವಾಗಿ ಶ್ರೀ ಗುರುಬಸವಲಿಂಗ ಮಹಾಸ್ವಾಮಿಜೀಗಳವರ ಭವ್ಯ ಮೆರವಣಿಗೆಯು ಮಲ್ಲಾಪೂರ ಪಿ.ಜಿ. ಕಾಳಮ್ಮದೇವಿ ದೇವಸ್ಥಾನದಿಂದ ಪ್ರಾರಂಭವಾಗಿ ಪಟ್ಟಣದ ಮುಖ್ಯ ರಸ್ತೆ ಮೂಲಕ ಘಟಪ್ರಭಾ ಪಟ್ಟಣದ ದಾನಮ್ಮದೇವಿಯ ದೇವಸ್ಥಾನದವರೆಗೆ ಅದ್ದೂರಿಯಾಗಿ ಜರುಗಿತು.

ಮೆರುವಣಿಗೆಯಲ್ಲಿ ಊರಿನ ನೂರಾರು ಮುತೈದೆಯರು ಕಳಸ ಹಾಗೂ ಆರತಿ ತಟ್ಟೆಯೊಂದಿಗೆ ಭಾಗವಹಿಸಿದ್ದರು. ಈ ವೇಳೆ ವಿವಿಧ ದೇಶಿ ವಾಧ್ಯಗಳು ಭಾಗವಹಿಸಿ ಮೆರುವಣಿಗೆಯ ಮೆರುಗು ಹೆಚ್ಚಿಸಿದವು, ಹಾಗೂ ನೂರಾರು ಯುವಕರು ಶ್ರೀಗಳ ಪುರ ಪ್ರವೇಶದ ನಿಮಿತ್ಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆ ನಂತರ ದಾನಮ್ಮದೇವಿ ದೇವಸ್ಥಾನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಶ್ರೀಗಳು ಭಕ್ತಾಧಿಗಳಿಗೆ ಗುರುವಿನ ಸ್ಥಾನದ ಬಗ್ಗೆ ಅತ್ಯಂತ ವಿಸ್ತಾರವಾಗಿ ಆಶೀರ್ವಚನ ನೀಡುವ ವೇಳೆ ಮಹಾಪ್ರಸಾದ ಬಗ್ಗೆ ಶ್ರೀಗಳು ವಿಸ್ತಾರವಾಗಿ ನೆರೆದಿರುವ ಭಕ್ತಾಧಿಗಳಿಗೆ ತಿಳಿ ಹೇಳಿದರು. ದೇವರು ದೊಡ್ಡವನಲ್ಲ, ಗುರು ದೊಡ್ಡವನಲ್ಲ, ಇಲ್ಲಿ ಸೇರಿರುವ ಭಕ್ತಾಧಿಗಳೇ ದೊಡ್ಡವರೆಂದು ಶ್ರೀಗಳು ಹೇಳಿದರು. ತದನಂತರ ಮಹಾಮಂಗಳಾರುತಿ ಮತ್ತು ಮಹಾ ಪ್ರಸಾದ ನಡೆಯಿತು.

ಈ ಸಮಾರಂಭದಲ್ಲಿ ಸ್ಥಳೀಯ , ಹೊಸಮಠದ ಪೀಠಾಧಿಕಾರಿಗಳಾದ ಶ್ರೀ ವಿರುಪಾಕ್ಷ ಮಹಾಸ್ವಾಮಿಗಳು,ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಸೇರಿದಂತೆ ಅನೇಕ ಹಿರಿಯರು ಉಪಸ್ಥಿತರಿದ್ದರು‌.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!