spot_img
spot_img
spot_img
spot_img
spot_img
spot_img

ಬಸ್​​ನಲ್ಲಿ ಓಡಾಡೋರಿಗೆ ಗುಡ್​ನ್ಯೂಸ್​​.. ಸಾರ್ವಜನಿಕರು ಓದಲೇಬೇಕಾದ ಸ್ಟೋರಿ ಇದು!

Published on

spot_img

ಶಕ್ತಿ‌ ಯೋಜನೆ ಜಾರಿ ಬಳಿಕ ಮಹಿಳೆಯರ ಓಡಾಟ ಎನೋ ಜಾಸ್ತಿಯಾಗಿದೆ. ನಿಜ ಆದರೆ ಅದ್ರ ಜೊತೆ ಜೊತೆಗೆ ಬಸ್ ಕೊರತೆಯಿಂದ‌ ಜನ ಪರದಾಟ ಕೂಡ ನಡೆಸ್ತಿದ್ದಾರೆ. ಸದಾ ತುಂಬಿ ತುಳುಕ್ತಿದ್ದ ಬಸ್‌ನಲ್ಲಿ ಬಸ್ ಸಂಚಾರ ಮಾಡೋದೆ ತಲೆನೋವಾಗಿತ್ತು. ಈಗ ಇದರ ಒತ್ತಡ ನಿವಾರಣೆಗೆ ಕೆಎಸ್​​ಆರ್​​ಟಿಸಿ ಮುಂದಾಗಿದೆ. ಹೊಸದಾಗಿ 800 ಬಸ್​ಗಳು ಜನರ ಸೇವೆಗೆ ಸೇರಲು ಸಜ್ಜಾಗಿದ್ದು, ಇವತ್ತು ಮೊದಲ‌ ಹಂತದಲ್ಲಿ ನೂರು ಬಸ್​ಗಳ ಸಂಚಾರಕ್ಕೆ ಗ್ರೀನ್‌ ಸಿಗ್ನಲ್ ಸಿಕ್ಕಿದೆ. ಈ‌ ಮೂಲಕ ಕಾಂಗ್ರೆಸ್ ಸರ್ಕಾರದ ಅಶ್ವಮೇಧ ಯಾಗ ಶುರುವಾಗಿದೆ.

ಬಣ್ಣ ಬಣ್ಣದ ಬಗೆ ಬಗೆಯ ಹೂವುಗಳಿಂದ ಸಿಂಗಾರಗೊಂಡಿರುವ ಅಶ್ವಮೇಧ ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಸಹಕಾರಿ ಕೂಡ. ಯೆಸ್​ ಈ ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್ ಬಸ್​ಗಳಿಗೆ ಇವತ್ತು ಚಾಲನೆ ಸಿಕ್ಕಿದೆ. ವಿಧಾನಸೌಧದ ಮುಂಭಾಗ ನೂರು ಬಸ್​ಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹಸಿರು ನಿಶಾನೆ ತೋರಿದ್ದಾರೆ. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ‌ ಕೆಎಸ್ಆರ್​​ಟಿಸಿ​ ಅಧ್ಯಕ್ಷ ಎಸ್ ಶ್ರೀನಿವಾಸ್ ಸಾಥ್ ನೀಡಿದ್ರು.

ಬಸ್​ಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಜನರ ಸುರಕ್ಷಿತ ಪ್ರಯಾಣಕ್ಕೆ ಬೇಕಾಗದ ಎಲ್ಲಾ ಸೌಲಭ್ಯ ಮಾಡಿಕೊಡುತ್ತೇವೆ. ಮಹಿಳಾ ಸಬಲೀಕರಣಕ್ಕಾಗಿ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿದ್ದೇವೆ. ಬೇರೆ ಯಾವ ಸರ್ಕಾರ ಆದರೂ ಮಾಡಿತ್ತಾ? ಬಿಜೆಪಿಯರನ್ನು ನಂಬಬೇಡಿ. ಅವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಅಂತ ಟೀಕಿಸಿದ್ರು. ಇನ್ನು, ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಮ್ಮ ಸಾರಿಗೆ ನಿಗಮ‌ ದೇಶದಲ್ಲೇ ಅತ್ಯುತ್ತಮ ಸೇವೆ ನೀಡುತ್ತಿದೆ. ಸಾರಿಗೆ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಅಶ್ವಮೇಧ ಬಸ್​ನ ಹಿಂದಿನ ಹಾಗೂ ಮುಂದಿನ ಗ್ಲಾಸ್​ಗಳು ಸಾಮಾನ್ಯ ಸಾರಿಗೆ ಬಸ್ ನಲ್ಲಿ ತುಂಬಾ ದೊಡ್ಡದಿದೆ. ಜೊತೆಗೆ ಗುಣಮಟ್ಟದ ಕುಷನ್ ಹಾಗೂ ರೆಕ್ಸಿನ್ ಒಳಗೊಂಡ 52 ಸೀಟ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಮೊಬೈಲ್ ಚಾರ್ಜ್ ಮಾಡಲು ಒಟ್ಟು 6 ಪಾಯಿಂಟ್ ಅಳವಡಿಕೆ. ಅಲ್ಲದೆ ಬಸ್ ವಿಂಡೋ ಪ್ರೇಮ್ ಹಾಗೂ ಗ್ಲಾಸ್ ಸಾಮಾನ್ಯ ಸಾರಿಗೆ ಬಸ್ ಕ್ಕಿಂತ ದೊಡ್ಡದಿದೆ.‌ ಇದರಿಂದ ಗಾಳಿ ಹಾಗೂ ಸಕತ್ ವಿವ್ಯೊ ಸಿಗುತ್ತೆ. ಪ್ರಯಾಣಿಕರು ನಿಂತಾಗ ಆಧಾರಕ್ಕೆ ಎರಡು ಸಾಲು ಗ್ರಾಬ್ ರೈಲ್ ಅಳವಡಿಕೆ‌ ಮಾಡಲಾಗಿದೆ. ಬಸ್ ಹಿಂದೆ ಹಾಗೂ ಮುಂದೆ ದೊಡ್ಡದಾದ ಎಲ್ಇಡಿ ಮಾರ್ಗಫಲಕ‌ ಅಳವಡಿಕೆ..ಚಾಲಕರಿಗಾಗಿ ಎರಡು ಹೈ ಕ್ವಾಲಿಟಿ ಕ್ಯಾಮರ ಹಾಕಲಾಗಿದೆ‌. ಬಸ್ ನಲ್ಲಿ ಜಿಪಿಎಸ್ ಟ್ರ್ಯಾಂಕಿಗ್ ಹಾಗೂ ಪ್ರಯಾಣಿಕರಿಗಾಗಿ ಪ್ಯಾನಿಕ್ ಬಟನ್ ಕೂಡ ಇದೆ. ಪ್ರಯಾಣಿಕರಿಗೆ ಮುಂದಿನ ನಿಲ್ದಾಣ ಮಾಹಿತಿ ನೀಡುವ ಧ್ವನಿವರ್ಧಕ ಹಾಕಲಾಗಿದೆ. ಇನ್ನೂ ಗಾಟ್ ನ ತಿರುವುಗಳಲ್ಲಿ ಬಸ್ ಸ್ವಯಂಚಾಲಿತ ಬ್ರೇಕ್ ಕಂಟ್ರೋಲ್ ವ್ಯವಸ್ಥೆಯೂ ಇದೆ.

ರಾಜ್ಯ ಸರ್ಕಾರ ಶಕ್ತಿ ಯೋಜನೆ ಒತ್ತಡ ಕಮ್ಮಿ ಮಾಡಲು ಹೈಟೆಕ್ ಬಸ್ ಖರೀದಿ ಮಾಡಿದೆ.‌ ಇವತ್ತಿನಿಂದ ಕೆಎಸ್ಆರ್​ಟಿಸಿಯಲ್ಲಿ ನೂರು ಬಸ್​ಗಳ ಓಡಾಟವೂ ಆರಂಭವಾಗಿದೆ. ಮೇ ತಿಂಗಳೊಳಗೆ ಇನ್ನೂ 700 ಇದೇ ಮಾದರಿಯ ಬಸ್ ಎಂಟ್ರಿಯಾಗಲಿವೆ. ಈ ಮೂಲಕ ಬಸ್ ರಶ್ ಕಮ್ಮಿಯಾಗಿ ಪ್ರತಿನಿತ್ಯ ಜನರು ಆರಾಮಾಗಿ ಓಡಾಡುವಂತಾಗಲಿದೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!